ಹೊಸದಿಲ್ಲಿ : 2019ರ ಜನವರಿ 1ರಿಂದ ಜಾರಿಗೆ ಬರಲಿರುವ ಹೊಸ ಜಿಎಸ್‌ಟಿ ದರಗಳಿಂದಾಗಿ ಸಿನೆಮಾ ಟಿಕೆಟ್‌ಗಳು, 32 ಇಂಚಿನ ಎಲ್‌ಸಿಡಿ ಟಿವಿಗಳು ಮತ್ತು ವಿಡಿಯೋ ಗೇಮ್ ಗಳು ಅಗ್ಗವಾಗಲಿವೆ. ಸರಕಾರ ಸುಮಾರು 40 ಐಟಮ್ ಗಳ ಮೇಲಿನ ಜಿಎಸ್‌ಟಿ ದರವನ್ನು ಜ.1ರಿಂದ ಜಾರಿಗೆ ಬರುವಂತೆ ಇಳಿಸಿದೆ.
ಸರಕಾರ 33 ಐಟಮ್ ಗಳನ್ನು ಶೇ.18ರ ಜಿಎಸ್‌ಟಿ ಯಿಂದ ಶೇ.12ಕ್ಕೆ ತಂದು ನಿಲ್ಲಿಸಿದೆಯಾದರೆ ಆರು ಐಟಮ್‌ಗಳ ಜಿಎಸ್‌ಟಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ ಅವರಿಂದು ಜಿಎಸ್‌ಟಿ ದರ ಬದಲಾವಣೆಯನ್ನು ಇಂದಿಲ್ಲಿ ಪ್ರಕಟಿಸಿದರು.
Related Articles
ಜಿಎಸ್‌ಟಿ ಮಂಡಳಿಯು ಶೇ. 28ರ ಸ್ಲಾéಬ್ ನಲ್ಲಿದ್ದ 7 ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಇಳಿಸಿದೆ; ಆರು ಐಟಮ್ ಗಳನ್ನು ಶೇ.28ರ ಜಿಎಸ್‌ಟಿ slab ನಿಂದ ತೆಗೆದುಹಾಕಿದೆ ಎಂದು ಸಚಿವ ಜೇತ್ಲಿ ಹೇಳಿದರು.
ಇಂದಿನ ಹೊಸ ಜಿಎಸ್‌ಟಿ ದರದಿಂದಾಗಿ ಸರಕಾರದ ಆದಾಯ 5,500 ಕೋಟಿ ರೂ. ಗಳಷ್ಟು ಕಡಿಮೆಯಾಗಲಿದೆ.