Advertisement
ಜಿಎಸ್‌ಟಿ ಜಾರಿಯ ಬಳಿಕ ಲಾಟರಿ ಟಿಕೆಟ್‌ಗಳ ಬೆಲೆ ಹೆಚ್ಚಾಗಿದ್ದು ಸದ್ಯ ಲಾಟರಿ ಮೇಲೆ ಶೇ.28ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತಿದೆ. ಜಿಎಸ್‌ಟಿ ಜಾರಿಗೂ ಮುನ್ನ ನಗರದಲ್ಲಿ ಲಾಟರಿ ವ್ಯವಹಾರ ದಿನವಹೀ 50ಕೋ. ರೂ.ಗಳಿಗೂ ಅಧಿಕವಾಗಿದ್ದರೆ ಇದೀಗ ಕೇವಲ 15 ಕೋ. ರೂ.ಗಳಿಗಿಳಿದಿದೆ. ವ್ಯವಹಾರದಲ್ಲಿ ಭಾರೀ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿನ ಹಲವಾರು ಲಾಟರಿ ಸ್ಟಾಲ್‌ಗಳ ಮಾಲಕರು ತಮ್ಮ ಸ್ಟಾಲ್‌ಗಳಿಗೆ ಬೀಗ ಜಡಿಯತೊಡಗಿದ್ದಾರೆ. ಜಿಎಸ್‌ಟಿ ಜಾರಿಗೂ ಮುನ್ನ ಅಂದರೆ ಜುಲೈಗೂ ಮುನ್ನ ನಗರದಲ್ಲಿ ಸುಮಾರು 10,000 ಲಾಟರಿ ಸ್ಟಾಲ್‌ಗಳಿದ್ದರೆ ಇದೀಗ ಈ ಸಂಖ್ಯೆ 4,000ಕ್ಕಿಳಿದಿದೆ.
ಈ ಹಿಂದೆ ಲಾಟರಿ ನಿರ್ವಾಹಕರು ಪ್ರತಿಯೊಂದೂ ಡ್ರಾಕ್ಕೆ ಪ್ರತಿದಿನ ಒಂದು ಲಕ್ಷ ರೂ.ಗಳ ತೆರಿಗೆಯನ್ನು ರಾಜ್ಯ ಸರಕಾರಕ್ಕೆ ಭರಿಸುತ್ತಿದ್ದರೆ ಇದೀಗ ಜಿಎಸ್‌ಟಿ ಜಾರಿಯಾದ ಬಳಿಕ ಮಾರಾಟವಾಗುವ ಪ್ರತಿಯೊಂದೂ ಲಾಟರಿ ಟಿಕೆಟ್‌ಗೆ ಶೇ.28ರಷ್ಟು ಜಿಎಸ್‌ಟಿಯನ್ನು ಭರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲಾಟರಿ ನಿರ್ವಾಹಕರು ಈ ವೆಚ್ಚವನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತಿದ್ದು ಇದರಿಂದಾಗಿ ಲಾಟರಿ ಟಿಕೆಟ್‌ಗಳ ಬೆಲೆ ಹೆಚ್ಚಾಗಿದೆ. ಅಂದರೆ ಈ ಹಿಂದೆ ಲಾಟರಿ ಟಿಕೆಟ್‌ನ ಬೆಲೆ 100ರೂ.ಗಳಾಗಿದ್ದರೆ ಇದೀಗ ಅದು 128ರೂ.ಗಳಿಗೆ ಏರಿಕೆಯಾಗಿದೆ. ಆದರೆ ಲಾಟರಿ ಬಹುಮಾನದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಜನರು ಲಾಟರಿ ಟಿಕೆಟ್‌ಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ವ್ಯಯಿಸುತ್ತಿರುವರಾದರೂ ವಿಜೇತರಾಗುವ ಅವಕಾಶ ಮತ್ತು ಲಭಿಸುವ ಬಹುಮಾನದ ಮೊತ್ತ ಈ ಹಿಂದಿನ ಪ್ರಮಾಣದಲ್ಲಿಯೇ ಇರುವುದರಿಂದ ಜನರು ಸಹಜವಾಗಿಯೇ ಲಾಟರಿ ಟಿಕೆಟ್‌ಗಳ ಖರೀದಿಯಿಂದ ದೂರ ಸರಿಯತೊಡಗಿದ್ದಾರೆ. ಹಿಂದೇಟು ಹಾಕುತ್ತಿರುವ ಖಾಯಂ ಖರೀದಿದಾರರು
ಜಿಎಸ್‌ಟಿ ಜಾರಿಯ ಬಳಿಕ ಲಾಟರಿ ಟಿಕೆಟ್‌ಗಳ ಖಾಯಂ ಖರೀದಿದಾರರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಖಾಯಂ ಖರೀದಿದಾರರು ಲಾಟರಿ ವ್ಯವಹಾರದ ಬೆನ್ನೆಲುಬಾಗಿದ್ದು ಇದೀಗ ಇವರು ಟಿಕೆಟ್‌ಗಳ ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದಾಗಿ ಇಡೀ ವ್ಯವಹಾರವೇ ನಷ್ಟದ ಹಾದಿಯಲ್ಲಿ ಹೆಜ್ಜೆಹಾಕತೊಡಗಿದೆ ಎಂದು ಲಾಟರಿ ಬಚಾವೋ ಕೃತಿ ಮಹಾಸಮಿತಿಯ ಸದಸ್ಯರಾದ ಫÅಫುಲ್ ಡೇದಿಯಾ ತಿಳಿಸಿದರು.
Related Articles
Advertisement
ನನ್ನ ಸಿಬಂದಿಗಳ ವೇತನ, ಬಿಎಂಸಿ ಬಾಡಿಗೆ ಮತ್ತು ವಿದ್ಯುತ್ ಬಿಲ್‌ನೂ° ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವ್ಯವಹಾರದಲ್ಲಿ ಏನಾದರೂ ಚೇತರಿಕೆ ಕಂಡುಬರಲಿದೆಯೇ? ಎಂದು ಮುಂದಿನ ಒಂದು ತಿಂಗಳು ಕಾದು ನೋಡಲು ತೀರ್ಮಾನಿಸಿದ್ದೇನೆ. ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬರದೇ ಹೋದಲ್ಲಿ ಲಾಟರಿ ವ್ಯವಹಾರವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದವರು ಹೇಳಿದರು.
ಜಿಎಸ್‌ಟಿ ಕಡಿತಕ್ಕೆ ಆಗ್ರಹಕೇಂದ್ರ ಸರಕಾರ ಲಾಟರಿ ಟಿಕೆಟ್ ಮೇಲಣ ಜಿಎಸ್‌ಟಿಯನ್ನು ಕಡಿತಗೊಳಿಸಿದಲ್ಲಿ ಮಾತ್ರವೇ ಲಾಟರಿ ವ್ಯವಹಾರ ಚೇತರಿಕೆ ಕಾಣಲಿದೆ. ಜನಪ್ರಿಯ ಲಾಟರಿ ಡ್ರಾಗಳನ್ನು ನಡೆಸುತ್ತಿರುವ ಮಿಜೋರಾಂ ಮತ್ತು ನಾಗಾಲ್ಯಾಂಡ್ ಸರಕಾರಗಳು ಆಲ್‌ಲೈನ್ ಲಾಟರಿಗೆ ಶೇ.28ರಷ್ಟು ಜಿಎಸ್‌ಟಿ ವಿಧಿಸುವ ಜಿಎಸ್‌ಟಿ ಮಂಡಳಿಯ ನಿರ್ಧಾರದ ವಿರುದ್ಧ ಗುವಾಹಟಿ ಹೈಕೋರ್ಟ್‌ನ ಮೆಟ್ಟಿಲೇರಿವೆ. ಹೈಕೋರ್ಟ್ ಮಂಡಳಿಯ ಈ ನಿರ್ಧಾರಕ್ಕೆ ತಡೆ ನೀಡಿತ್ತಾದರೂ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ನ.20ರಂದು ಇದರ ವಿಚಾರಣೆ ನಡೆಯಲಿದೆ. ಲಾಟರಿ ಟಿಕೆಟ್‌ಗಳ ಬೆಲೆ ಹೆಚ್ಚಿರುವುದರಿಂದ ಲಾಟರಿ ತನ್ನ ಆಕರ್ಷಣೆಯನ್ನೇ ಕಳೆದು ಕೊಳ್ಳುವಂತಾಗಿದೆ. ಈ ಹಿಂದೆ ಲಾಟರಿ ಡ್ರಾಕ್ಕೆ ಸಂಬಂಧಿಸಿದಂತೆ 2,000ರೂ.ಗಳ ಬಾಜಿಯನ್ನು ಕಟ್ಟಿದರೆ ನನಗೆ 1,800ರೂ. ಲಭಿಸುತ್ತಿತ್ತು. ಆದರೆ ಇದೀಗ 1,800ರೂ. ಲಭಿಸಬೇಕಿದ್ದರೆ 2,571 ರೂ.ಗಳ ಟಿಕೆಟ್‌ನ್ನು ಖರೀದಿ ಸಬೇಕಿದೆ ಎಂದು ಲಾಟರಿ ಟಿಕೆಟ್‌ನ ಖಾಯಂ ಖರೀದಿದಾರರೋರ್ವರು ಹೇಳಿದರು. ಸರಕಾರದ ಬೊಕ್ಕಸಕ್ಕೂ ಹೊಡೆತ
ಲಾಟರಿ ವ್ಯವಹಾರದಲ್ಲಿನ ಭಾರೀ ಕುಸಿತ ಸರಕಾರದ ಆದಾಯದ ಮೇಲೂ ಪರಿಣಾಮವನ್ನು ಬೀರುತ್ತಿದೆ. ಲಾಟರಿ ಮೇಲಣ ಜಿಎಸ್‌ಟಿಯಿಂದ ಸಂಗ್ರಹವಾಗುವ ಮೊತ್ತದಲ್ಲಿ ಅರ್ಧದಷ್ಟು ಹಣ ರಾಜ್ಯ ಸರಕಾರದ ಬೊಕ್ಕಸಕ್ಕೆ ಸೇರ್ಪಡೆಗೊಳ್ಳುತ್ತಿದೆ. ಕಳೆದ ವರ್ಷ ಲಾಟರಿಯ ಮೂಲಕ ರಾಜ್ಯ ಸರಕಾರ 130 ಕೋ. ರೂ. ತೆರಿಗೆಯನ್ನು ಸಂಗ್ರಹಿಸಿದ್ದರೆ ಈ ವರ್ಷ ಈ ಆದಾಯದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಇದೆ. 16 ರಾಜ್ಯಗಳಲ್ಲಿ ಲಾಟರಿಗೆ ನಿಷೇಧ
ದೇಶದಲ್ಲಿನ ಒಟ್ಟು 29 ರಾಜ್ಯಗಳ ಪೈಕಿ16 ರಾಜ್ಯಗಳು ಲಾಟರಿಯನ್ನು ನಿಷೇಧಿಸಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಕೇರಳ, ಗೋವಾ,ಪಂಜಾಬ್, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಈಗಲೂ ಲಾಟರಿ ವ್ಯವಹಾರ ನಡೆಯುತ್ತಿದೆ. ಏಜೆಂಟರ ಮೂಲಕ ನಿರ್ವಹಿಸಲ್ಪಡುವ ಲಾಟರಿಗಳಿಗಷ್ಟೇ ಶೇ.28 ಜಿಎಸ್‌ಟಿ ಅನ್ವಯವಾಗುತ್ತಿದೆ.