ಹೊಸದಿಲ್ಲಿ: ದೇಶದ ಆರ್ಥಿಕತೆಯಲ್ಲಿ ಭರವಸೆ ಮೂಡಿಸುವಂತೆ, ಸೆಪ್ಟಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ದಾಖಲೆ ಬರೆದಿದೆ.
ಈ ತಿಂಗಳಿನಲ್ಲಿ 1.17 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಕಳೆದ 5 ತಿಂಗಳಿನಲ್ಲೇ ಸಂಗ್ರಹವಾದ ಗರಿಷ್ಠ ಮೊತ್ತ ಇದಾಗಿದೆ. ಅಲ್ಲದೆ ಸತತ 3ನೇ ತಿಂಗಳು ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರೂ. ಮೀರಿ ದಂತಾಗಿದೆ.
ಈ ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಅತ್ಯಧಿಕ ಆದಾಯ ಸಂಗ್ರಹದ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ 95,480 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ವರ್ಷ ಇದು ಶೇ. 23ರಷ್ಟು ಹೆಚ್ಚಳವಾಗಿದೆ. ಅದೇ ರೀತಿ 2019ರ ಸೆಪ್ಟಂಬರ್‌ನಲ್ಲಿ ಸಂಗ್ರಹವಾದ ತೆರಿಗೆಗೆ ಹೋಲಿಸಿದರೆ (91,916 ಕೋಟಿ ರೂ.) ಈ ವರ್ಷ ಶೇ. 27ರಷ್ಟು ಹೆಚ್ಚು ಜಿಎಸ್ಟಿ ಸಂಗ್ರಹ ವಾಗಿದೆ. ಪ್ರಸಕ್ತ ವರ್ಷದ ಎಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ, ಜುಲೈಯಲ್ಲಿ 1.16 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.