Advertisement

ಜಿಎಸ್‌ಟಿ ಸಂಗ್ರಹ ಶೇ.12 ಹೆಚ್ಚಳ

11:51 PM Feb 23, 2023 | |

ಹೊಸದಿಲ್ಲಿ: ಭಾರತದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹವು 2023ರ ಜನವರಿ ತಿಂಗಳಲ್ಲಿ ಶೇ.12ರಷ್ಟು ಏರಿಕೆ ದಾಖಲಿಸಿದ್ದು, ಇದು ಈವರೆಗೆ ದಾಖಲಾದ 2ನೇ ಅತೀ ಹೆಚ್ಚು ಮಾಸಿಕ ಸಂಗ್ರಹವೆಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

Advertisement

2022ರ ಜನವರಿಯಲ್ಲಿನ ಜಿಎಸ್‌ಟಿ ಆದಾಯ ಸಂಗ್ರಹವನ್ನು ಗಮನಿಸಿ, 2023ರಲ್ಲಿ ಅದಕ್ಕಿಂತ ಶೇ.10.6ರಷ್ಟು ಹೆಚ್ಚು ಅಂದರೆ 1.56 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಳೆದ ತಿಂಗಳು ನಿರೀಕ್ಷೆಗೂ ಮೀರಿದ ಆದಾಯ ಸಂಗ್ರಹವಾಗಿದ್ದು, ಶೇ.12ರ ಹೆಚ್ಚಳದೊಂದಿಗೆ ಆದಾಯ ಸಂಗ್ರಹದ ಮೊತ್ತ 1.59 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next