Advertisement
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೆಪ್ಟೆಂಬರ್ 15ರ ನಂತರ ಪರೋಕ್ಷ ತೆರಿಗೆ ಸಂಗ್ರಹಿಸುವ ಅಧಿಕಾರ ಕಳೆದುಕೊಳ್ಳುವ ಕಾರಣ, ಪ್ರಸಕ್ತ ಅಧಿವೇಶನದಲ್ಲೇ ಜಿಎಸ್‌ಟಿ ಮಸೂದೆಗೆ ಲೋಕಸಭೆಯ ಒಪ್ಪಿಗೆ ಪಡೆಯಬೇಕಿದೆ ಎಂಬ ಅಂಶವನ್ನು ಸಚಿವ ಜೇಟ್ಲಿ ಸದಸ್ಯರ ಗಮನಕ್ಕೆ ತಂದರು. ಸರಕು ಮತ್ತು ಸೇವೆಗಳ ತೆರಿಗೆಗೆ ಸಂಬಂಧಿಸಿದ ‘ಕೇಂದ್ರ ಜಿಎಸ್‌ಟಿ ಮಸೂದೆ’, ‘ಸಮಗ್ರ ಜಿಎಸ್‌ಟಿ’, “ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಟಿ’ ಮತ್ತು ‘ಪರಿಹಾರ ಕಾನೂನು ಮಸೂದೆ’ಗಳನ್ನು ಸಚಿವ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು.
ಜಿಎಸ್ಟಿ ಅನ್ವಯ ಗರಿಷ್ಠ ಶೇ.40ರಷ್ಟು ತೆರಿಗೆ ದರ ನಿಗದಿಯಾಗಿರುವುದನ್ನು ಸೋಮವಾರ ಮಂಡನೆಯಾದ ಜಿಎಸ್‌ಟಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಆರ್ಥಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಇಷ್ಟು ಪ್ರಮಾಣದ ತೆರಿಗೆ ವಿಧಿಸಬಹುದು ಎಂಬ ಉಲ್ಲೇಖವಿದೆ. ಇದರೊಂದಿಗೆ ಸರಕು ಮತ್ತು ಸೇವೆಗಳಿಗೆ ಅನುಗುಣವಾಗಿ ಸೇ.5, ಶೇ.12, ಶೇ,18 ಮತ್ತು ಗರಿಷ್ಠ ಶೇ.28ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಸಮಿತಿ ಸಮ್ಮತಿಸಿದೆ. ಹಾಗೇ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ತೆರಿಗೆ ದರ ಬದಲಾಗಲಿದೆ.