Advertisement

66 ಸರಕುಗಳ ತೆರಿಗೆಗೆ ಕತ್ತರಿ : ಇನ್ಸುಲಿನ್‌ ಬೆಲೆ ಇಳಿಕೆ

01:39 AM Jun 12, 2017 | Team Udayavani |

ಹೊಸದಿಲ್ಲಿ: ಸರಕು ಸೇವಾ ತೆರಿಗೆ (ಜಿಎಸ್‌ಟಿ) ಜುಲೈ 1ರಿಂದ ಜಾರಿಗೆ ಬಂದಲ್ಲಿ ಬಿಂದಾಸ್‌ ಊಟ, ಉಪಾಹಾರ ಮಾಡಲೇನೂ ಅಡ್ಡಿಯಿಲ್ಲ. ತೃಪ್ತಿಯಾಗುವಷ್ಟು ಸಿನೆಮಾ ನೋಡಿದ ಮೇಲೂ ಮತ್ತೂಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು. ಆದರೆ ಸಿನೆಮಾ ಟಿಕೆಟ್‌ಗಳ ದರ 100 ರೂ. ಒಳಗೆ ಇದ್ದಲ್ಲಿ  ಮಾತ್ರ!

Advertisement

ರವಿವಾರ 16ನೇ ಬಾರಿಗೆ ಸಭೆ ಸೇರಿದ ಜಿಎಸ್‌ಟಿ ಮಂಡಳಿ ಒಟ್ಟು 66 ವಸ್ತುಗಳ ಮೇಲಿನ ತೆರಿಗೆಯನ್ನು ಬದಲಿಸಿದೆ. ಉಪ್ಪಿನಕಾಯಿ, ಸಾಸಿವೆ ಸಾಸ್‌, ಕಜ್ಜಾಯಕ್ಕೆ ಬೇಕಾಗುವ ಸಾಮಗ್ರಿಗಳು ಸೇರಿ ಅಡುಗೆ ಮನೆಗೆ ಅಗತ್ಯವಾದ ಬಹುತೇಕ ವಸ್ತುಗಳು ಹಾಗೂ ಸಿನೆಮಾ ಟಿಕೆಟ್‌ಗಳ ದರ ಕಡಿಮೆಯಾಗಲಿವೆ. ಜಿಎಸ್‌ಟಿ ಮಂಡಳಿ ನಿಗದಿ ಪಡಿಸಿರುವಂತೆ ಸಿನೆಮಾ ಟಿಕೆಟ್‌ ಬೆಲೆ 100 ರೂ. ಇದ್ದಲ್ಲಿ ಶೇ.18, 100ಕ್ಕಿಂತ ಜಾಸ್ತಿ ಬೆಲೆಯ ಟಿಕೆಟ್‌ಗಳಿಗೆ ಶೇ. 28ರಷ್ಟು ತೆರಿಗೆ ನಿಗದಿಗೊಳಿಸಿದೆ. ಅದರಂತೆ ಉಪ್ಪಿನಕಾಯಿ, ಸಾಸ್‌ ಹಾಗೂ ಸಿಹಿ ಪದಾರ್ಥಗಳ ಮೇಲಿನ ಈ ಮೊದಲ ಶೇ. 18 ತೆರಿಗೆಯನ್ನು ಶೇ. 12ಕ್ಕೆ ಇಳಿಸಿದೆ. ಗೋಡಂಬಿ ಮೇಲಿನ ಶೇ. 12ರಷ್ಟು ತೆರಿಗೆಯನ್ನು ಶೇ. 5ಕ್ಕೆ ನಿಗದಿಪಡಿಸಲಾಗಿದೆ.

ಹೊಟೇಲ್‌ ಉದ್ಯಮಿಗಳ ಒತ್ತಡದ ಹಿನ್ನೆಲೆಯಲ್ಲಿ ತೆರಿಗೆ ಹೇರಿಕೆ ಬಗ್ಗೆ ಪರಿಶೀಲನೆ ನಡೆಸಿದ ಜಿಎಸ್‌ಟಿ ಮಂಡಳಿ ವ್ಯಾಪಾರಿಗಳು, ತಯಾರಕರು, ಹೊಟೇಲ್‌ ಮಾಲಕರ ವಹಿವಾಟು 75 ಲಕ್ಷ ರೂ. ಮೀರದಿದ್ದಲ್ಲಿ ಅವರಿಗೆ ಕ್ರಮವಾಗಿ ಶೇ. 1, 2 ಹಾಗೂ 5 ತೆರಿಗೆ ನಿಗದಿಪಡಿಸಿದೆ. ಕೃಷಿ ಸಾಮಗ್ರಿಗಳ ತೆರಿಗೆಯನ್ನು ಶೇ. 18ಕ್ಕೆ ಇಳಿಸಲಾಗಿದೆ. ಶೇ. 12ರಷ್ಟಿದ್ದ ಮಕ್ಕಳ ಡ್ರಾಯಿಂಗ್‌ ಪುಸ್ತಕಗಳ ಮೇಲಿನ ತೆರಿಗೆಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಸ್ಕೂಲ್‌ ಬ್ಯಾಗ್‌ಗಳ ಮೇಲಿನ ತೆರಿಗೆಯನ್ನು ಶೇ.18ಕ್ಕೆ ನಿಗದಿಗೊಳಿಸಲಾಗಿದೆ. ಕಂಪ್ಯೂಟರ್‌ ಬಳಕೆದಾರರಿಗೂ ಸಿಹಿ ಸುದ್ದಿ ಇದ್ದು, ಪ್ರಿಂಟರ್‌ ಸಾಮಗ್ರಿಗಳು ಹಾಗೂ ಶಾಲಾ ಸಾಮಗ್ರಿಗಳಿಗೆ ಶೇ.12 ತೆರಿಗೆ ನಿಗದಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next