Advertisement

ಮಧ್ಯಮ ಗಾತ್ರದ ಕಾರುಗಳು ದುಬಾರಿ

07:15 AM Aug 31, 2017 | Team Udayavani |

ಹೊಸದಿಲ್ಲಿ: ಕಾರು ಕೊಳ್ಳಬೇಕೆನ್ನುವ ಕನಸು ಕಾಣುತ್ತಿರುವವರಿಗೆ ಇದು ಕಹಿ ಸುದ್ದಿ! ಹೌದು, ಕಾರು ದುಬಾರಿಯಾ ಗಲಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಬಳಿಕ ಇದೀಗ ಕೇಂದ್ರ ಸರಕಾರ ಶೇ. 25 ಸೆಸ್‌ ಹೇರಲು ಮುಂದಾಗಿದೆ. ಸದ್ಯ ಶೇ. 15ರಷ್ಟು ಸೆಸ್‌ ಇದೆ. ಈ ನಿರ್ಧಾರಕ್ಕೆ ಕೇಂದ್ರ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಪರಿಣಾಮ ಮಧ್ಯಮ ಹಾಗೂ ದೊಡ್ಡ ಗಾತ್ರದ, ಐಷಾರಾಮಿ ಹಾಗೂ ಹೈಬ್ರಿಡ್‌ ಸೇರಿ ಎಸ್‌ಯುವಿ ಮಾದರಿಯ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.

Advertisement

ಜಿಎಸ್‌ಟಿ ಜಾರಿಗೆ ಬಂದು, ಕಳೆದ ಜುಲೈ 1ರ ಅನಂತರ ಕಾರು ಮಾರು ಕಟ್ಟೆಯ ಮೇಲೆ ಭಾರೀ ಪ್ರಮಾಣದ ಪರಿಣಾಮ ಬೀರಿತ್ತು. ಸಣ್ಣ ಹಾಗೂ ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಅಂದಾಜು ಮೂರು ಲಕ್ಷ ರೂ.ನಷ್ಟು ಕಡಿತವಾಗಿತ್ತು. ಜತೆ ಜತೆಗೇ ಲಕ್ಸುರಿ ಕಾರುಗಳ ಬೆಲೆ ಇನ್ನಷ್ಟು ದುಬಾರಿ ಯಾಗಿತ್ತು. ಆದರೆ ಇದೀಗ ಸೆಸ್‌ ಏರಿಕೆ ಎಲ್ಲ ಕಾರುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಕಾರು ತಯಾರಿಕಾ ಕಂಪೆನಿಗಳು ಈ ಏರಿಕೆಯ ಮೊತ್ತವನ್ನು ಗ್ರಾಹಕರ ಮೇಲೆ ಹಾಕಬೇಕಾದ ಸ್ಥಿತಿ ಎದುರಿಸಲಿವೆ ಎಂದು ವಿಶ್ಲೇಷಿಸ ಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ, “ಬೇರೆ ಬೇರೆ ದರ್ಜೆಯ ಕಾರುಗಳ ಮೇಲಿನ ಸೆಸ್‌ ಬೇರೆ ಬೇರೆ ಆಗಿರಲಿದೆ. ಯಾವ ದಿನದಿಂದ ಜಾರಿಗೆ ಬರಲಿದೆ ಎನ್ನುವುದನ್ನು ಜಿಎಸ್‌ಟಿ ಕೌನ್ಸಿಲ್‌ ಸೆ.9ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next