Advertisement

ತಾಂತ್ರಿಕ ದೋಷದಿಂದ ವಿಫಲವಾಯ್ತು ಜಿಎಸ್​ಎಲ್​ವಿ-ಎಫ್ ​10 ಮಿಷನ್ !

09:22 AM Aug 12, 2021 | Team Udayavani |

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆಗೊಂಡ ಜಿಎಸ್​ಎಲ್​ವಿ- ಎಫ್ 10 ರಾಕೆಟ್ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಉಪಗ್ರಹವನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲವಾಗಿದೆ. EOS-3 ಎಂಬ ಭೂ ವೀಕ್ಷಣಾ ಸೆಟಲೈಟನ್ನು ಹೊತ್ತೊಯ್ದಿದ್ದ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

Advertisement

EOS-3 ಸೆಟಲೈಟ್ ನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 ಮೀಟರ್​ ಎತ್ತರದ ಜಿಎಸ್​ಎಲ್​ವಿ-ಎಫ್​10 ರಾಕೆಟ್​ನಲ್ಲಿ ಯಶಸ್ವಿಯಾಗಿ ಮುಂಜಾನೆ 5.43ಕ್ಕೆ ಉಡಾವಣೆ ಮಾಡಲಾಗಿತ್ತು. ಲಿಫ್ಟ್-ಆಫ್‌ಗೆ ಮುಂಚಿತವಾಗಿ, ಲಾಂಚ್ ಆಥರೈಸೇಶನ್ ಬೋರ್ಡ್ ಯೋಜಿಸಿದಂತೆ ಸಾಮಾನ್ಯ ಲಿಫ್ಟ್-ಆಫ್‌ಗಾಗಿ ಡೆಕ್‌ಗಳನ್ನು ತೆರವುಗೊಳಿಸಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್​ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ ಕೆಲವು ನಿಮಿಷಗಳ ನಂತರ ರಾಕೆಟ್​ನಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು ಕಂಡು ಬಂದಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಕ್ರಯೋಜೆನಿಕ್ ಹಂತದ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಮಿಷನ್​ ಅಪೂರ್ಣವಾಗಿದೆ ಎಂದು ಇಸ್ರೋ ತಿಳಿಸಿದೆ.

ನೈಸರ್ಗಿಕ ವಿಕೋಪ ದುರಂತಗಳು ಸಂಭವಿಸಿದಾಗ ಬಹಳ ತ್ವರಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ನೆರವಾಗಬಲ್ಲ ಸೆಟಲೈಟ್ ಇದಾಗಿತ್ತು. ದುರಂತದ ಪ್ರದೇಶಗಳ ಚಿತ್ರಗಳನ್ನ ಇದು ಆಗಾಗ್ಗೆ ಒದಗಿಸುವ ಕಾರ್ಯಕ್ಕೆ ಸಿದ್ದ ಮಾಡಲಾಗಿತ್ತು. ಪ್ರಕೃತಿ ವಿಕೋಪ ಘಟನೆಗಳ ಮುನ್ಸೂಚನೆ, ಚಂಡಮಾರುತದ ಪರಿಶೀಲನೆ, ಮೇಘ ಸ್ಫೋಟ, ಸಿಡಿಲು ಇತ್ಯಾದಿ ದುರಂತಗಳನ್ನ ಸಮರ್ಕಪವಾಗಿ ಪರಿಶೀಲನೆ ನಡೆಸಲು ಇದು ನೆರವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next