Advertisement
ವಾರ್ಷಿಕ ಗಣೇಶೋತ್ಸವವು ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ನಡೆಯಲಿದ್ದು, ಮೂರನೇ ಪೂರ್ವಭಾವಿ ಸಭೆಯಲ್ಲಿ ಸೇವಾ ಮಂಡಲದ ಕಾರ್ಯಕಾರಿ ಸಮಿತಿ, ಸ್ವಯಂ ಸೇವಕರು ಉಪಸ್ಥಿತರಿದ್ದರು. ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಸೇವಾ ಮಂಡಲದ ಕಾರ್ಯದರ್ಶಿ ಶಿವಾನಂದ ಭಟ್ ಪ್ರಾರ್ಥನೆಗೈದರು.
Related Articles
Advertisement
ಗಣೇಶೋತ್ಸವ ಆಯೋಜನ ಸಮಿತಿಯ ಮಾಜಿ ಸಂಚಾಲಕ ಜಿ. ಜಿ. ಪ್ರಭು ಅವರು ಮಾತನಾಡಿ, ಬರುವ ದಿನಗಳಲ್ಲಿ ಸರಕಾರದ ನಿಯಮಾ ವಳಿಯಲ್ಲಿ ಸೂಕ್ತ ಮಾರ್ಪಾಡು ಮಾಡಿ ವಿಜೃಂಭಣೆಯಿಂದ ಗಣೇಶೋತ್ಸವ ಜಗರುವಂತಾಗಬೇಕು ಎಂದು ನುಡಿದು ಹಾರೈಸಿದರು. ಸೇವಾ ಮಂಡಲದ ಟ್ರಸ್ಟಿ ಆರ್. ಜಿ. ಭಟ್ ಅವರು ಮಾತನಾಡಿ, ಕಳೆದ ಒಂದೂವರೆ ವರ್ಷಗಳಿಂದ ಕೋವಿಡ್ ನಿಮಿತ್ತ ಲಾಕ್‌ಡೌನ್ ಸಮಯದಲ್ಲಿ ತೊಂದರೆಗೀಡಾದ ಅಪಾರ ಮಂದಿಗೆ ಧನ ಸಹಾಯ,ನಿತ್ಯ ಮನೆಯಲ್ಲಿ ಬೇಕಾಗುವ ಸಾಮಾ ಗ್ರಿಗಳ ಕಿಟ್, ಉಚಿತ ವ್ಯಾಕ್ಸಿನೇಶನ್, ಆಸ್ಪತ್ರೆ ಗಳಲ್ಲಿ ದಾಖಲಾದ ರೋಗಿಗಳ ಸಂಬಂಧಿಕರಿಗೆ ಉಚಿತ ಅನ್ನದಾನ, ಮಹಾರಾಷ್ಟ್ರ ನೆರೆ ಪೀಡಿತರಿಗೆ ನೆರವು ಇತ್ಯಾದಿ ಕಾರ್ಯಗಳಿಗೆ ಸೇವಾ ಮಂಡಲವು ಸಹಕರಿಸಿದೆ ಎಂದರು.
ಸತೀಶ್ ರಾಮ ನಾಯಕ್ ಅವರು ಸರಕಾರದ ಗಣೇಶೋತ್ಸವದ ನಿಯಮಾವಳಿಯಲ್ಲಿ ಸೂಕ್ತ ಬದಲಾವಣೆಗಾಗಿ ಬಿಎಂಸಿ ಸಮನ್ವಯ ಸಮಿತಿ ಪ್ರಯತ್ನಿಸುತ್ತಿದೆ ಎಂದರು. ಸೇವಾ ಮಂಡಲದ ಜತೆ ಕೋಶಾಧಿಕಾರಿ ವಿಷ್ಣು ಕಾಮತ್ ಅವರು ಗಣೇಶೋತ್ಸವ ಭಕ್ತರಿಗೆ ಪೂಜೆ, ಸೇವೆಯನ್ನು ಆ್ಯಪ್ ಮೂಲಕ ಬುಕ್ ಮಾಡಲು ಉತ್ತೇಜಿಸಬೇಕು ಎಂದರು. ಮಂಡಲದ ಅಧ್ಯಕ್ಷ ರಮೇಶ್ ಭಂಡಾರ್ಕರ್ ವಂದಿಸಿದರು.