ಮುಂಬಯಿ: ವಸಾ ಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿಯ 25ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಇತ್ತೀಚೆಗೆ ವಸಾಯಿ ಮೀರಾನಗರ ಉದ್ಯಾನವನದ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಗೊಂಡಿತು.
ಸಮಿತಿಯ ಸದಸ್ಯರಿಂದ ಕೊಂಕಣಿಯಲ್ಲಿ ಶ್ರೀ ಕೃಷ್ಣ ಲೀಲೆ ಕಂಸವಧೆ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಮುಂಬಯಿ ಇದರ ಸಕ್ರಿಯ ಸದಸ್ಯ ವಿಟuಲ ಪ್ರಭು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ಸಮಿತಿಯ ಸದಸ್ಯ ಬಾಂಧವರಿಂದ ಯಶಸ್ವಿಯಾಗಿ ನೆರವೇರಿತು.
ಕಲಾವಿದರುಗಳಾಗಿ ಸಾನ್ವಿ ಶೇಷ್ ಕಾಮತ್, ರಾಮಚಂದ್ರ ಹೆಗ್ಡೆ, ಶಿರೀಶ್ ಆಚಾರ್ಯ, ರಮ್ಯಾ ರಾಮಚಂದ್ರ ಹೆಗ್ಡೆ, ಶ್ರೀಧರ ಪ್ರಭು, ಸಚಿನ್ ಶ್ರೀನಿವಾಸ ಪಡಿಯಾರ್, ಅಮೇಯ್ ಗಣೇಶ್ ಪೈ, ಗೀತಾ ಗಣೇಶ್ ಕಾಮತ್, ಅನುಜ್ ಹರೀಶ್ ಕಾಮತ್, ಪುರುಷೋತ್ತಮ ಕುಡ್ವ, ಮಂಜುನಾಥ ಸಂತೋಷ್ ಪೈ, ಶಿವಾನಿ ಸತ್ಯೇಂದ್ರ ನಾಯಕ್, ಸ್ಮಿàತಾ ಗಣೇಶ್ ಪೈ, ಅಕ್ಷತಾ ಪ್ರಕಾಶ್ ಕಾಮತ್, ಪ್ರಿಯಾ ಪಾಂಡುರಂಗ ಕಾಮತ್, ಅಧಿತಿ ಬಾಲಕೃಷ್ಣ ಪೈ, ನಾಗೇಶ್ ಪೈ, ಸಚಿನ್ ಪಡಿಯಾರ್, ವಿಕ್ರಮ್ ಕಾಮತ್, ಪ್ರತೀಕ್ಷಾ ನಾಯಕ್, ಸತ್ಯೇಂದ್ರ ನಾಯಕ್ ಅವರು ಸಹಕರಿಸಿದರು.
ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಗಂಗಾಧರ ಸಾಲ್ಯಾನ್, ವಿಠuಲ್ ಪ್ರಭು, ಚೆಂಡೆಯಲ್ಲಿ ಜಗದೀಶ್ ಶೆಟ್ಟಿ ಏಳಿಂಜೆ, ಮದ್ದಳೆಯಲ್ಲಿ ಮಧುಸೂದನ್ ಪಾಲನ್, ತಾಳದಲ್ಲಿ ಜಿ. ಜಿ. ಪೈ ಅವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಯಕ್ಷಗುರು ವಿಟuಲ ಪ್ರಭು ಅವರನ್ನು ಸಮಿತಿಯ ಅಧ್ಯಕ್ಷ ತಾರನಾಥ ಪೈ, ಕಾರ್ಯದರ್ಶಿ ಪುರುಷೋತ್ತಮ ಶೆಣೈ ಮತ್ತು ಸಂಚಾಲಕ ದೇವೇಂದ್ರ ಭಕ್ತ ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಜನಪ್ರಿಯ ಯಕ್ಷಗಾನ ಕಲಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗ ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು
ಮತ್ತು ಸದಸ್ಯರ ಉಸ್ತುವಾರಿಯಲ್ಲಿ ಯಕ್ಷಗಾನವು ಬಯಲಾಟ ಪ್ರದರ್ಶನಗೊಂಡು ಕಲಾಭಿಮಾನಿ ಗಳನ್ನು ರಂಜಿಸಿತು.