Advertisement

ಜಿ.ಎಸ್‌.ಪಾಟೀಲ ಸೇವೆ ಅಗತ್ಯ: ಘೋರ್ಪಡೆ

06:57 PM Apr 11, 2022 | Team Udayavani |

ಗಜೇಂದ್ರಗಡ: ಅಧಿಕಾರವಿದ್ದಾಗ ಹಿಗ್ಗದೇ, ಅಧಿಕಾರ ಇಲ್ಲದಿದ್ದಾಗ ಕುಗ್ಗದೇ ಸದಾ ಜನರ ಮಧ್ಯೆಯಲ್ಲಿಯೇ ಇದ್ದು ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಜ್ಜನ ರಾಜಕಾರಣಿ ಜಿ.ಎಸ್‌.ಪಾಟೀಲ ಅವರ ಸೇವೆ ರೋಣ ಮತಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದು ಗಜೇಂದ್ರಗಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ಘೋರ್ಪಡೆ ಹೇಳಿದರು.

Advertisement

ಪಟ್ಟಣದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಜಿ.ಎಸ್‌. ಪಾಟೀಲ ಅಭಿಮಾನಿ ಬಳಗ ವತಿಯಿಂದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌.ಪಾಟೀಲ ಅವರ 74ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ರಾಜಕೀಯ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಿರಬಹುದು.

ಆದರೆ, ರಾಜಕೀಯದಲ್ಲಿಯೇ ಸಮಾಜ ಮುಖೀ ಕಾರ್ಯಗಳನ್ನು ಮಾಡುವ ಮಹಾನ್‌ ನಾಯಕರು ಇನ್ನೂ ನಮ್ಮ ಕಣ್ಮುಂದೆ ಇದ್ದಾರೆ. ಅವರ ಸಾಲಿನಲ್ಲಿ ಜಿ.ಎಸ್‌. ಪಾಟೀಲ ಅವರೂ ನಿಲ್ಲುತ್ತಾರೆ ಎಂದರು. ಪುರಸಭೆ ವಿರೋಧ ಪಕ್ಷದ ನಾಯಕ ಮುರ್ತುಜಾ ಡಾಲಾಯತ್‌ ಮಾತನಾಡಿ, ತಮ್ಮ ಇಳಿವಯಸ್ಸಿನಲ್ಲೂ ಜನಪರ ಕಾರ್ಯ ಕ್ಕಾಗಿ ಅತ್ಯುತ್ಸಾಹದಿಂದ ಶ್ರಮಿಸುವ ಮೂಲಕ ಬಡವರಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಜನಸೇವೆಯಲ್ಲಿದ್ದಾರೆ. ಜಿ.ಎಸ್‌. ಪಾಟೀಲ
ಅವರ ರಾಜಕೀಯ ಮುತ್ಸದ್ದಿತನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರು ಕೈಗೊಳ್ಳುವ ನಿರ್ಣಯಗಳು, ಯೋಜನೆಗಳಲ್ಲಿ ಮತ ಕ್ಷೇತ್ರದ ಅಭ್ಯುದಯ ಅಡಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿ.ಎಸ್‌. ಪಾಟೀಲ ಅವರ ಸೇವೆ ಮತಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದರು.

ಕಾಂಗ್ರೆಸ್‌ ಹಿರಿಯ ಮುಖಂಡ ಅಶೋಕ ಬಾಗಮಾರ ಮಾತನಾಡಿ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಅವರ ಜನ್ಮದಿನಾಚರಣೆ ಪ್ರಯುಕ್ತ ಹಸಿದವರಿಗೆ ಅನ್ನ ನೀಡುವುದು, ದಣಿದವರ ಬಾಯಾರಿಸುವ ಅನ್ನದಾಸೋಹ ಕಾರ್ಯಕ್ರಮ ಸಮಾಜಮುಖೀ ಕಾರ್ಯವಾಗಿದೆ. ಇಂತಹ ಕಾರ್ಯಗಳು ಮೇಲಿಂದ ಮೇಲೆ ನಡೆಯಬೇಕೆಂದರು.

ಇದೇ ಸಂದರ್ಭದಲ್ಲಿ ಉಪಹಾರ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು. ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮಾಡಲಾಯಿತು. ಪುರಸಭೆ ಸದಸ್ಯರಾದ  ರಾಜು ಸಾಂಗ್ಲಿಕಾರ, ವೆಂಕಟೇಶ ಮುದಗಲ್‌, ಬಸವರಾಜ ಚನ್ನಿ, ಬಿ.ಎಸ್‌. ಶೀಲವಂತರ, ಶ್ರೀಧರ
ಬಿದರಳ್ಳಿ, ಅಪ್ಪು ಮತ್ತಿಕಟ್ಟಿ, ಯಲ್ಲಪ್ಪ ಬಂಕದ, ಮಹಾದೇವಪ್ಪ ಪವಾರ, ಉಮೇಶ ರಾಠೊಡ, ಶ್ರೀಧರ ಗಂಜಿಗೌಡರ, ಬಾಷಾ ಮುದಗಲ್ಲ, ಶರಣು ಪೂಜಾರ, ಎಚ್‌.ಎಸ್‌.ಸೋಂಪೂರ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next