Advertisement
ಮೇ 11ರ ಮೊದಲು ಕೆಲವೊಂದು ಜಿಲ್ಲೆಗಳಲ್ಲಿ 10ರಿಂದ 15ಕ್ಕೆ ಸೀಮಿತವಾಗಿದ್ದ ದೃಢಪ್ರಕರಣಗಳು ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆಯಿಂದ ಅದು 30ರಿಂದ 40ಕ್ಕೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿಯೂ ದೃಢ ಪ್ರಕರಣ ದಿನೇದಿನೆ ಏರಿಕೆಯಾಗುತ್ತಿದೆ. ಮೇ 12ರಂದು 902 ಸಕ್ರಿಯ ಪ್ರಕರಣವಿದ್ದು, ಮೇ 23ರ ಅವಧಿಗೆ ಅದು 1,959ಕ್ಕೆ ಏರಿಕೆಯಾಗಿದೆ. ಮೇ12 ರಂದು 14, ಮೇ 13ರಂದು 63, ಮೇ 14ರಂದು 39, ಮೇ 15ರಂದು 22, ಮೇ 16ರಂದು 71, ಮೇ17ರಂದು 36, ಮೇ 18ರಂದು 70, ಮೇ 19 ರಂದು 94, ಮೇ 20ರಂದು 149, ಮೇ 21ರಂದು 67, ಮೇ 22ರಂದು 147 ಹಾಗೂ ಮೇ 23ರಂದು 216 ಪ್ರಕರಣ ರಾಜ್ಯದಲ್ಲಿ ವರದಿಯಾಗಿದೆ.
Related Articles
Advertisement
ಒಂದೇ ದಿನ 72 ಜನರಲ್ಲಿ ಸೋಂಕು; ಯಾದಗಿರಿ ತಲ್ಲಣಯಾದಗಿರಿ: ರಾಜ್ಯದ ಗಡಿ ಜಿಲ್ಲೆ ಯಾದಗಿರಿಯಲ್ಲಿ ಶನಿವಾರ ಒಂದೇ ದಿನ 72 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆ ತಲ್ಲಣಗೊಂಡಿದೆ. ಈವರೆಗೆ 15 ಇದ್ದ ಸೋಂಕಿತರ ಸಂಖ್ಯೆ ದಿಢೀರನೇ ಸ್ಫೋಟಗೊಂಡಿದ್ದು, ಇದೀಗ 87ಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಬಾಲಕಿ ಸೋಂಕಿತ ಪಿ-1756 ಸೇರಿ 17 ಮಂದಿ ಅಪ್ರಾಪ್ತ ಮಕ್ಕಳಲ್ಲಿ ಸೋಂಕು ತಗುಲಿದ್ದು, ಎಲ್ಲ 72 ಸೋಂಕಿತರಲ್ಲಿ ಬಹುತೇಕರು 50 ವರ್ಷದೊಳಗಿನವರಾಗಿ ದ್ದಾರೆ. ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರೇ ಆಗಿದ್ದಾರೆ. ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿರುವ ಜನರಲ್ಲೇ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪುಣೆಯಿಂದ ಆಗಮಿ ಸಿದ್ದ ನಗರದ ದುಕಾನವಾಡಿಯ ಇಬ್ಬರು ಕ್ವಾರಂಟೈನ್‌ಗೆ ಒಳಗಾ ಗದೆ ಮನೆಯಲ್ಲೇ ವಾಸವಾಗಿದ್ದರು. ಬಳಿಕ ಪೊಲೀಸರು ಈ ಇಬ್ಬರನ್ನು ಕರೆದೊಯ್ದು ಸಾಂಸ್ಥಿಕ ಕ್ವಾರಂಟೈನ್ ಮಾಡಿಸಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ ಕಂಟಕ: ಸರ್ಕಾರ ಲಾಕ್‌ಡೌನ್ ನಿಯಮ ಸಡಿಲ ಗೊಳಿಸಿ ಹೊರ ರಾಜ್ಯದಿಂದ ಬರಲು ಅವಕಾಶ ಮಾಡಿಕೊಟ್ಟಿದ್ದೇ ಸೋಂಕು ಇಲ್ಲದ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ. ಮಹಾರಾಷ್ಟ್ರಕ್ಕೆ ದುಡಿಯಲು ಹೋಗಿ ಮರಳಿದ 12 ಸಾವಿರಕ್ಕೂ ಹೆಚ್ಚು ಜನರನ್ನು ಜಿಲ್ಲಾ ಡಳಿತ ಕ್ವಾರಂಟೈನ್‌ನಲ್ಲಿರಿಸಿದ್ದು, ಇವರಲ್ಲಿ ಈವರೆಗೆ ಮೂರು ಸಾವಿರದಷ್ಟು ಜನರ ಮಾದರಿ ಸಂಗ್ರಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.