Advertisement

ಶಿಕ್ಷಣದಿಂದಲೇ ಆತ್ಮವಿಶ್ವಾಸ ವೃದ್ಧಿ: ಸೇಡಂ

05:13 PM Jun 22, 2018 | |

ಯಾದಗಿರಿ: ದೇಶದಲ್ಲಿ ಈಗಿರುವ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಪಾಲಕರಲ್ಲಿ ಬದುಕನ್ನು ಎದುರಿಸುವ ಸಾಮರ್ಥ್ಯದಲ್ಲಿ ಕೊರತೆ ಕಾಣುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ವೃದ್ಧಿ ಅವಶ್ಯಕವಾಗಿದೆ ಎಂದು ಕಲಬುರಗಿಯ ವಿಕಾಸ ಅಕಾಡೆಮಿಯ ರಾಷ್ಟ್ರೀಯ ಸಂಯೋಜಕ ಡಾ| ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.

Advertisement

ನಗರದ ಲಕ್ಷ್ಮೀ ಮಾರುತಿ ದೇವಸ್ಥಾನದಲ್ಲಿ ಅಕಾಡೆಮಿಯ ಜಿಲ್ಲಾ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಗಳ ಅಭ್ಯಾಸದ ಜೊತೆಗೆ ತಾಂತ್ರಿಕ, ಕೌಶಲಗಳ ಬಗ್ಗೆ ಸೂಕ್ತ ತರಬೇತಿ ನೀಡಿದಲ್ಲಿ ಅವರು ಭವಿಷ್ಯದಲ್ಲಿ ಸರ್ಕಾರಿ ನೌಕರಿ ಅವಲಂಬಿಸದೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬಹುದು ಎಂದು
ತಿಳಿಸಿದರು.

ಈ ದಿಸೆಯಲ್ಲಿ ನಾವು ಕಳೆದ 10 ವರ್ಷದಿಂದ ಹಲವಾರು ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಬದಲಾವಣೆಗೆ ಶ್ರಮಿಸುತ್ತಿದ್ದೇವೆ. ನಮಗೆ ಆಯಾ ಭಾಗದ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿಗಳು ಕೈಜೋಡಿಸಿದಲ್ಲಿ ಮಾತ್ರ ಸಂಪೂರ್ಣ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು. ಈ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಪರಿಸರ ರಕ್ಷಣೆಗಾಗಿ ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ.

ಈ ಕಾರ್ಯಕ್ಕೆ ಯುವಕರು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಇದರಿಂದ ಉತ್ತಮ ವಾತಾವರಣ ನಿರ್ಮಾಣವಾಗಿ ಮನಸ್ಸಿನ ಸಂಪನ್ನತೆ ವೃದ್ಧಿಯಾಗುತ್ತದೆ ಎಂದರು. ಅಕಾಡೆಮಿ ವತಿಯಿಂದ ರೈತರಿಗಾಗಿ ಸಾವಯವ ಹಾಗೂ ಸಮಗ್ರ ಕೃಷಿ ಅಧ್ಯಯನಕ್ಕಾಗಿ ಎರಡು ಪ್ರವಾಸಗಳನ್ನು ನಿಗದಿಪಡಿಸಲಾಗಿದೆ. ಆಗಸ್ಟ್‌ 5ರಂದು ತೆಲಂಗಾಣ ರಾಜ್ಯದ ತಾಂಡೂರದಲ್ಲಿ ಏಕಲವ್ಯ ಫೌಂಡೇಶನ್‌ 104 ಎಕರೆ ಜಮೀನಿನಲ್ಲಿ ಕೃಷಿ ಸಂಶೋಧನೆ ಕೈಗೊಂಡಿದ್ದಾರೆ. ಅಲ್ಲಿಗೆ ಎಲ್ಲಾ ಭಾಗದ ರೈತರನ್ನು ಕರೆದುಕೊಂಡು ಹೋಗಿ ಅಗತ್ಯ ಮಾಹಿತಿ ನೀಡಲಾಗುವುದು ಎಂದರು.

ದೇಶದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಸಂಪೂರ್ಣ ಅಳವಡಿಸಿಕೊಂಡಿರುವ ರಾಜ್ಯ ಸಿಕ್ಕಿಂ ಆಗಿದೆ. ಎರಡು ತಿಂಗಳ ನಂತರ ಪ್ರಮುಖ ರೈತರ ನಿಯೋಗ ತೆರಳಿ ಅಲ್ಲಿನ ಕೃಷಿ ಪದ್ಧತಿ ಬಗ್ಗೆ ಸಮಗ್ರ ಅಧ್ಯಯನ ಕೈಗೊಳ್ಳಲಾಗುವುದು. ಅಗಸ್ಟ್‌ 16ರಿಂದ 18ರ ವರೆಗೆ ಕಲಬುರಗಿಯ ಭಾರತೀಯ ವಿದ್ಯಾ ಕೇಂದ್ರ ಶಿರನೂರಿನಲ್ಲಿ 3 ದಿನಗಳ ಕಾಲ ಪರಿಣಿತ
ಯೋಗ ಶಿಕ್ಷಕರಿಗಾಗಿ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರಕ್ಕೆ ಪ್ರತಿ ತಾಲೂಕಿನಿಂದ ಇಬ್ಬರು ಯುವಕರು
ಹಾಗೂ ಒಬ್ಬ ಮಹಿಳಾ ಯೋಗ ಶಿಕ್ಷಕಿ ಬರಬಹುದು. ಮುಂದಿನ ದಿನಗಳಲ್ಲಿ ಅವರೇ ಸಾವಿರಾರು ಜನರಿಗೆ
ಯೋಗ ಕಲಿಸುತ್ತಾರೆ ಎಂದು ತಿಳಿಸಿದರು.

Advertisement

ಸಭೆಯಲ್ಲಿ ಅಕಾಡೆಮಿಯ ಕೃಷಿ ವಿಭಾಗದ ಮುಖ್ಯಸ್ಥರಾದ ಶಾಂತರಡ್ಡಿ ವನಕೇರಿ, ಸಿದ್ದಣಗೌಡ ಕಾಡಂನೋರ್‌, ಸೋಮಶೇಖರ ಮಣ್ಣೂರ, ವೀರಣ್ಣ ರ್ಯಾಕಾ, ಸಿದ್ರಾಮರಡ್ಡಿ ಚೆನ್ನೂರ, ಜಿ.ತಮ್ಮಣ್ಣ, ಆರ್‌.ಎಸ್‌. ಪಾಟೀಲ ಸಂಗ್ವಾರ, ಭೀಮಣ್ಣಗೌಡ ಕ್ಯಾತನಾಳ, ಎಲ್‌.ಜಿ.ರಡ್ಡಿ, ಡಾ| ಜ್ಯೋತಿಲತಾ ತಳಬಿಡಿಮಠ, ಶರಣಗೌಡ ತಂಗಡಗಿ, ಮರೆಪ್ಪ ನಾಟೇಕಾರ, ಬಸಣ್ಣಗೌಡ ಕನ್ಯಕೋಳೂರ, ವೇಣುಗೋಪಾಲ ಗುರುಮಠಕಲ್‌, ಶಿವುಕುಮಾರ ಕೊಂಕಲ್‌, ವೆಂಕಟರಡ್ಡಿ ಅಬ್ಬೆತುಮಕೂರ, ಶಂಕ್ರಪ್ಪಗೌಡ ಬೆಳಗುಂದಿ, ಮಲ್ಲಣ್ಣಗೌಡ ಗೋಡಿಹಾಳ, ಸೋಮನಗೌಡ ಬೆಳಗೇರಾ, ಸೋಮನಾಥರಡ್ಡಿ ಯಲ್ಲೇರಿ, ಗುರುಬಸ್ಸಯ್ಯ ಗದ್ದುಗೆ, ಬಸವರಾಜ ಸಜ್ಜನ್‌ ಇದ್ದರು. ನೀಲಕಂಠರಾಯ
ಎಲ್ಲೇರಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next