ಚನ್ನರಾಯಪಟ್ಟಣ: ಕೃಷಿ ಉತ್ಪನ್ನಗಳ ದರ ಇಳಿಕೆ ಸರದಿ ಈಗ ಮೆಕ್ಕೆಜೋಳದ್ದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 250 ರೂ.ರಿಂದ 750 ರೂ. ವರೆಗೂ ದರ ಇಳಿಕೆ ಆಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂದಾಜಿನ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಎಕರೆಗೆ 20 ಕ್ವಿಂಟಲ್ ಮೆಕ್ಕೆಜೋಳ ಬೆಳೆಯಲಾಗಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಮಾತ್ರ ಏರಿಕೆ ಆಗಿಲ್ಲ. ಪ್ರತಿ ಕ್ವಿಂಟಲ್ ಮೆಕೆ Rಜೋಳದ ದರ 950 ರೂ.ನಿಂದ 1450 ರೂ. ಇದ್ದು, ಕಳೆದ ವರ್ಷಕೆ ಹೋಲಿಕೆ ಮಾಡಿದ್ರೆ 250 ರೂ.ನಿಂದ 750 ರೂ. ನಷ್ಟು ಬೆಲೆ ಇಳಿಕೆ ಆಗಿದೆ. ಇದರಿಂದ 31.50 ಲಕ Ò ರೂ.ನಷ್ಟು ಆದಾಯ ರೈತರ ಕೈತಪ್ಪಿದಂತಾಗಿದೆ. ಸಾಲ
ತೀರಿಸಲಾಗದ ಸ್ಥಿತಿ: ಕೋವಿಡ್ ನಿಂದಾಗಿ ದರ ಕುಸಿತ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಲಾಕ್‌ಡೌನ್ ವೇಳೆ ಹಲವು ಮಂದಿ ಪಟ್ಟಣ ತ್ಯಜಿಸಿ ಸ Ìಗ್ರಾಮ ಸೇರಿದ ªರು. ಇದರಿಂದ ಕುಟುಂಬ ನಿರ್ವಹಣೆ ವೆಚ್ಚ ಹೆಚ್ಚಾಗಿ ರೈತರು ಶ್ರೀಮಂತರು, ಮಂಡಿ ವ್ಯಾಪಾರಿಗಳ ಬಳಿ ಬೆಳೆ ತೋರಿಸಿ ಸಾಲ ಮಾಡಿದ ªರು. ಆದರೆ, ಬೆಳೆ ಬೆಲೆ ಕಳೆದುಕೊಂಡಿದ್ದು, ಸಾಲ ತೀರಿಸುವುದಿರಲಿ, ಮಾಡಿದ ª ವೆಚ್ಚವಾದ್ರೂ ಕೈಸೇರುತ್ತ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ.
ಇದನ್ನೂ ಓದಿ:ಅನಧಿಕೃತ ಕ್ವಾರಿ ಪರಿಶೀಲನೆಗೆ ತಂಡ
ವೆಚ್ಚ ವೆಷ್ಟು: ಮಳೆ ಆಶ್ರಿತ ಪ್ರದೇಶದಲ್ಲಿ ಪ್ರತಿ ಎಕರೆಗೆ 20 ರಿಂದ 25 ಕ್ವಿಂಟಲ್, ನೀರಾವರಿ ಪ್ರದೇಶದಲ್ಲಿ 30 ರಿಂದ 35 ಕ್ವಿಂಟಲ್ ಇಳುವರಿ ಬಂದಿದೆ. ಮೆಕೆ Rಜೋಳ ಬೆಳೆಯಲು ಪ್ರತಿ ಎಕರೆಗೆ ಉಳುಮೆ, ಬೀಜ, ಗೊಬ್ಬರ, ಕಳೆಕೀಳುವುದು, ನೀರು, ಕಟಾವು ಸೇರಿ 23 ಸಾವಿರ ರೂ. ವೆಚ cವಾಗಲಿದೆ. ಎಕರೆಗೆ ಸರಾಸರಿ 25 ಕ್ವಿಂಟಲ್ ಇಳುವರಿ ಬಂದರೆ ಈಗಿನ ಮಾರುಕಟೆ r ದರದಲ್ಲಿ 35 ಸಾವಿರ ರೂ. ಮಾತ್ರ ಕೈ ಸೇರಲಿದೆ.
ಬೆಂಬಲ ಬೆಲೆ ನೀಡಿ: ಮೆಕ್ಕೆ ಜೋಳದಿಂದ ಕೈಸುಟ್ಟುಕೊಂಡಿರುವ ರೈತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬರಬೇಕಿದ್ದು, ಪ್ರತಿ ಕ್ವಿಂಟಲ್‌ಗೆ 1700 ರೂ. ಬೆಂಬಲ ಬೆಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗಿ, ಮುಂದಿನ ದಿನಗಳಲ್ಲಿ ಬೆಳೆ ಬೆಳೆಯಲು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ರೈತರು ಉದಯವಾಣಿಗೆ ತಿಳಿಸಿದ್ದಾರೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ