Advertisement

ಕೃಷಿ ಭೂಮಿಯ ಸುತ್ತ ಮರ ಬೆಳೆಸಿ

12:27 AM May 05, 2019 | Team Udayavani |

ಬೆಂಗಳೂರು: ರೈತರು ತಮ್ಮ ಕೃಷಿ ಭೂಮಿಯಲ್ಲಿ ದ್ವಿದಳ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಇದರಿಂದ ಅವರು ಆರ್ಥಿಕವಾಗಿಯೂ ಲಾಭಗಳಿಸಲಿದ್ದಾರೆ ಎಂದು ಸಿರಿಧಾನ್ಯ ಬೆಳೆಗಾರ ಬಾಲನ್‌ ಹೇಳಿದರು.

Advertisement

ಲಾಲ್‌ಬಾಗ್‌ನಲ್ಲಿ ಗ್ರಾಮೀಣ ನ್ಯಾಚುರಲ್‌ ಮತ್ತು ಗ್ರಾಮೀಣ ಕುಟುಂಬ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಸಿರಿಧಾನ್ಯಗಳ ವೈಭವ ಹಾಗೂ ಸಾವಯುವ ಆಹಾರ ಮೇಳದಲ್ಲಿ ನಡೆದ “ಸಿರಿಧಾನ್ಯ ಹಾಗೂ ಕಾಡುಕೃಷಿ ಕುರಿತು ತರಬೇತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಮೂರು ತಿಂಗಳು, ಆರು ತಿಂಗಳಿಗೆ ಒಂದು ಬೆಳೆಯನ್ನು ಬೆಳೆಯುವುದರಿಂದ ಭೂಮಿ ಸದಾ ಸಮೃದ್ಧಿಯಾಗಿರುತ್ತದೆ. ಎರೆಹುಳುವಿನ ಸಂಖ್ಯೆ ಸಹ ಹೆಚ್ಚಾಗುತ್ತದೆ. ಗೊಬ್ಬರದ ಕೊರತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕೃಷಿ ಭೂಮಿಯ ಸುತ್ತ ಲಾಭ ನೀಡುವ ಮರಗಳನ್ನು ಬೆಳೆಸಿದರೆ ಅದರಿಂದಲೂ ಲಾಭ ಸಿಗುತ್ತದೆ ಎಂದರು. “ಸಿರಿಧಾನ್ಯದ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ. ಇದನ್ನು ಬೆಳೆಯುವಾಗ ಯಾವುದೇ ರಾಸಾಯನಿಕಗಳನ್ನು ಬಳಸಬೇಡಿ’ ಎಂದು ಸಿರಿಧಾನ್ಯ ಬೆಳೆದು ಉತ್ತಮ ಲಾಭಗಳಿಸಿರು ಬೆಳೆಗಾರ ಲಕ್ಷ್ಮೀನಾರಾಯಣ್‌ ಸಲಹೆ ನೀಡಿದರು.

ಚಿಕ್ಕಬಳ್ಳಾಪುರದ ಕೃಷಿ ಭೂಮಿಯಲ್ಲಿ ಐದು ರೀತಿಯ ಸಿರಿಧಾನ್ಯಗಳನ್ನು ಬೆಳೆಯಲಾಗಿತ್ತು. ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಇದನ್ನು ಬೆಳೆಯಬಹುದು. ಸಿರಿಧಾನ್ಯಗಳ ಇಳುವರಿ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ನಷ್ಟವಿಲ್ಲದಷ್ಟು ಇಳುವರಿ ಸಿಕ್ಕಿದೆ ಎಂದು ಹೇಳಿದರು.

Advertisement

ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್‌. ಶ್ರೀಧರಮೂರ್ತಿ ಮಾತನಾಡಿ, ಕೃಷಿ ವಿವಿಗಳು ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಸಂಶೋಧನೆ ನಡೆಸುತ್ತಿಲ್ಲ. ಈಗ ಸಿರಿಧಾನ್ಯ ಬೆಳೆಗಳನ್ನು ಹೈಬ್ರಿಡ್‌ ಮಾಡಲು ಪ್ರಾರಂಭಿಸಿದ್ದು, ಬೆಳೆಯ ಪ್ರಮಾಣವನ್ನಷ್ಟೇ ಪರಿಗಣಿಸಲಾಗುತ್ತಿದೆ. ಆದರೆ, ಅದರ ಸತ್ವವನ್ನು ನೋಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next