Advertisement

ಗಿಡ ಬೆಳೆಸಿ ಕಳಂಕದಿಂದ ಪಾರಾದೆ

01:17 AM Jun 06, 2019 | Lakshmi GovindaRaj |

ಯಲಹಂಕ: ಬಂಜೆತನದ ಕಳಂಕದಿಂದ ತಪ್ಪಿಸಿಕೊಳ್ಳಲು ದಶಕಗಳ ಹಿಂದೆ ಗಿಡ ಸಾಲು ಮರ ನೆಡಲು ಪ್ರಾರಂಭಿಸಿ ಮರಗಳನ್ನೇ ಮಕ್ಕಳಂತೆ ಪೋಷಿಸಿದೆ ಎಂದು ಸಾಲು ಮರದ ತಿಮ್ಮಪ್ಪ ಹೇಳಿದರು.

Advertisement

ವಿಶ್ವ ಪರಿಸರದ ದಿನದ ಆಚರಣೆ ಅಂಗವಾಗಿ ಪ್ರಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಪರಿಸರ ಜಾಗೃತಿ ಮತ್ತು ಸಸಿ ನಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಂದು ಮಕ್ಕಳು ಹೊಂದುವ ಸಾರ್ಮರ್ಥ್ಯವಿಲ್ಲದೆ ಗಿಡ ನೆಟ್ಟು ಬೆಳೆಸಿದೆ ಇಂದು ಆ ಗಡಮರಗಳ ಪ್ರೀತಿ ನನ್ನನ್ನು ಗೌರವಿಸಿ ಸಾಕಿ ಸಲಹುತ್ತಿವೆ. ನೀವು ಸಹ ಮರಗಿಡಗಳನ್ನು ಬೆಳೆಸಿ ಪ್ರೀತಿಸಿ ಎಂದೆದಿಗೂ ಅವು ಕೈಬಿಡುವಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಪರಿಸರ ಕಾರ್ಯಕರ್ತೆ ಉಷಾ ನಾರಾಯಣ್‌ ಮಾತನಾಡಿ, ಪ್ಲಾಸ್ಟಿಕ್‌ ಮುಕ್ತವಾಗಿ ಜೀವನ ನಡೆಸುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಉಪಕುಲಪತಿ ಪ್ರೊಫೆಸರ್‌ ರಾಧಾ ಪದ್ಮನಾಭನ್‌ ಈಶ್ವರಭಟ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next