Advertisement
ಪೂರ್ವ ಮುಂಗಾರಿಗೆ ಹೋಲಿಸಿದರೆ, ಮುಂಗಾರಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದರಲ್ಲೂ ದಕ್ಷಿಣ ಕರ್ನಾಟಕದ ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ ಸೇರಿದಂತೆ ಸುತ್ತಲಿನ ಭಾಗಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಹೆಚ್ಚಿದೆ. ಈ ಪೈಕಿ ರಾಮನಗರ ಮತ್ತು ಮಾಗಡಿ ತಾಲೂಕುಗಳಲ್ಲಿ ಅಂತರ್ಜಲ ಕ್ರಮವಾಗಿ 32 ಮತ್ತು 33 ಮೀಟರ್‌ನಷ್ಟು ಏರಿಕೆಯಾಗಿದೆ. ಅಂತರ್ಜಲ ನಿರ್ದೇಶನಾಲಯವು ರಾಜ್ಯಾದ್ಯಂತ ಅಂತರ್ಜಲ ಪ್ರಮಾಣ ಅಧ್ಯಯನ ನಡೆಸಿದ್ದು, ಅದರಂತೆ 176 ತಾಲ್ಲೂಕುಗಳ ಪೈಕಿ ಸೆಪ್ಟೆಂಬರ್ ಅಂತ್ಯಕ್ಕೆ 116 ತಾಲೂಕುಗಳಲ್ಲಿ ಅಂತರ್ಜಲ ಏರಿಕೆಯಾಗಿದೆ. ಇದರಲ್ಲಿ ಹಳೆಯ ಮೈಸೂರು ಭಾಗಗಳ ಬಹುತೇಕ ಎಲ್ಲ ತಾಲೂಕುಗಳಲ್ಲೂ ಸಕಾರಾತ್ಮಕ ಫಲಿತಾಂಶ ಕಂಡುಬಂದಿದೆ.
Related Articles
ಪರಿಸ್ಥಿತಿ ಸುಧಾರಣೆಯಾಯಿತು. ಇದು ಭೂಮಿಯ ಆಳಕ್ಕಿಳಿದು, ಅಂತರ್ಜಲ ಮರುಪೂರಣಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದೂ ಶೆಟ್ಟೆಣ್ಣವರ ಹೇಳಿದರು.
Advertisement
ಇಳಿಮುಖ: ಈ ಬಾರಿ ಅಂತರ್ಜಲ ಮಟ್ಟ ಏರಿಕೆ ಕಂಡುಬಂದಿದ್ದರೂ, ಕಳೆದ ಹತ್ತು ವರ್ಷಗಳ ಸರಾಸರಿ ತೆಗೆದುಕೊಂಡರೆ ಅಂತರ್ಜಲ ಮಟ್ಟದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕೇವಲ 34 ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ಅವುಗಳ ವಿವರ ಹೀಗಿದೆ (ಮೀ.ಗಳಲ್ಲಿ). ಈ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (0.28), ಬಳ್ಳಾರಿಯ ಹಗರಿಬೊಮ್ಮನಹಳ್ಳಿ (1.42), ಹೊಸಪೇಟೆ (0.43), ಬಳ್ಳಾರಿಯ ಸಂಡೂರು (1.64), ಸಿರಗುಪ್ಪ (0.41), ಚಾಮರಾಜನಗರದ ಯಳಂದೂರು (0.26), ಚಿಕ್ಕಬಳ್ಳಾಪುರದ ಗೌರಿಬಿದನೂರು (2.54), ಚಿತ್ರದುರ್ಗ (2.11) ಮತ್ತು ಹೊಳಲ್ಕೆರೆ (3.13), ಮಂಗಳೂರಿನ ಸುಳ್ಯ (0.12), ದಾವಣಗೆರೆಯ ಚನ್ನಗಿರಿ (2.53) ಮತ್ತು ಹೊನ್ನಾಳಿ (2.55), ಧಾರವಾಡದ ನವಲಗುಂದ (2.03), ಗದಗ (0.14), ರೋಣ (3.70) ಶಿರಹಟ್ಟಿ (8.17), ಕಲಬುರಗಿಯ ಅಫjಲ್ಪುರ (3.02), ಚಿಂಚೋಳಿ (1.16), ಹಾಸನದ ಹೊಳೆನರಸೀಪುರ (1.78),ಸಕಲೇಶಪುರ (0.02), ಹಾವೇರಿಯ ರಾಣೇಬೆನ್ನೂರು (8.12), ಕೊಪ್ಪಳದ ಗಂಗಾವತಿ (2.78), ಕುಷ್ಟಗಿ (5.24), ಕೊಪ್ಪಳ (1.92), ಯಲಬುರ್ಗ (3.90), ಮಂಡ್ಯದ ಶ್ರೀರಂಗಪಟ್ಟಣ (0.38), ಮೈಸೂರು (1.32), ರಾಯಚೂರಿನ ಸಿಂಧನೂರು (0.99), ತುಮಕೂರು (1.45), ಉಡುಪಿ (0.27), ಕುಂದಾಪುರ (0.40), ಕಾರವಾರ (0.07), ಕುಮಟಾ (0.04), ಸೂಪ (0.06) . ವಿಜಯಕುಮಾರ್ ಚಂದರಗಿ