Advertisement

ಅಂತರ್ಜಲ ಹೆಚ್ಚಿಸಲಿವೆ ಇಂಗುಗುಂಡಿಗಳು

12:29 PM Dec 18, 2020 | Suhan S |

ಬೆಂಗಳೂರು: ನಗರೀಕರಣ ಹಿನ್ನೆಲೆ ರಾಜಧಾನಿ ಬಹುತೇಕ ಪ್ರದೇಶದಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಆದರೆ, ಲಾಲ್‌ಬಾಗ್‌ ಸುತ್ತಲಿನ 20ಚ.ಕಿ.ಮೀ ವಿಸ್ತೀರ್ಣದ ಪ್ರದೇಶಗಳಲ್ಲಿ ಇನ್ನು ಮುಂದೆ ಅಂತರ್ಜಲಮಟ್ಟ ಏರಿಕೆಕ್ರಮದಲ್ಲಿ ಸಾಗಲಿದೆ!

Advertisement

ಏಕೆಂದರೆ, ಲಾಲ್‌ಬಾಗ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಂಗುಗುಂಡಿ ನಿರ್ಮಿಸಿದ್ದು, ವಾರ್ಷಿಕ ಎರಡೂವರೆ ಕೋಟಿ ಲೀಟರ್‌ ನೀರು ಭೂಮಿಗೆ ಇಂಗಿ ಸುತ್ತಲಿನ ಅಂತರ್ಜಲ ಹೆಚ್ಚಳಕ್ಕೆ ವರವಾಗಿ ಪರಿಣಮಿಸಲಿದೆ. 240 ಎಕರೆ ವಿಸ್ತೀರ್ಣದ ಲಾಲ್‌ಬಾಗ್‌ ದಕ್ಷಿಣದಿಂದ ಉತ್ತರ ಭಾಗಕ್ಕೆ ಇಳಿಮುಖವಾಗಿದೆ. ದೊಡ್ಡಮಳೆಯಾದರೆ ಸಾಕು ಉದ್ಯಾನಕ್ಕೆ ಬಿದ್ದ ನೀರು ಅಲ್ಲಿನ ಕೆರೆ ತುಂಬಿ ಕೋಡಿ ಬಿದ್ದು ಹೆಚ್ಚುವರಿಯಾಗಿ ಸುತ್ತಲಿನ ರಸ್ತೆ, ಬಡಾವಣೆಗಳಿಗೆ ಹರಿಯುತ್ತದೆ. ಈ ಮಳೆ ನೀರನ್ನು ಇಂಗಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಉದ್ಯಾನದ ವಿವಿಧ ಕಡೆ ಬರೋಬ್ಬರಿ 209 ಮಳೆನೀರು ಇಂಗು ಗುಂಡಿ ನಿರ್ಮಿಸಿದೆ. ಅವುಗಳಲ್ಲಿ ವಾರ್ಷಿಕ2.4ಕೋಟಿಲೀಟರ್‌ ನೀರು ಭೂಮಿಗೆ ಸೇರಲಿದೆ. ಇಷ್ಟು ಪ್ರಮಾಣದಲ್ಲಿ ಭೂಮಿಗೆ ಇಂಗಿರುವ ನೀರು ಮುಂದಿನ ಒಂದೆರಡು ವರ್ಷಗಳಲ್ಲಿ ಸುತ್ತಲಿನ 20 ಚ.ಕಿ.ಮೀ ವ್ಯಾಪ್ತಿ ಅಂತರ್ಜಲಏರಿಕೆ ಮಾಡಲಿದೆ ಎನ್ನುತ್ತಾರೆ ತಜ್ಞರು.

ದಿಢೀರ್‌ ನೆರೆ ತಪ್ಪಲಿದೆ: ಕಳೆದ ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದ ಉದ್ಯಾನದ ನೀರು ಪಕ್ಕದಊರ್ವಶಿ ಚಿತ್ರಮಂದಿರ, ಎಂಟಿಆರ್‌ಗೆ ನೀರುನುಗ್ಗಿತ್ತು. ರಸ್ತೆಗಳಲ್ಲಿ ಓಡಾಡಲು ಜನ ಹರಸಾಹಸ ಪಟ್ಟಿದ್ದರು. ಈ ಸಮಸ್ಯೆಯೂ ಪರಿಹಾರ ಸಿಗುತ್ತದೆ. ಇನ್ನು ಇಂಗುಗುಂಡಿಗಳು ಉದ್ಯಾನದಲ್ಲಿರುವ ಸಸ್ಯಪ್ರಭೇದ ಮತ್ತು ಬೃಹತ್‌ ವೃಕ್ಷಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ. ಜತೆಗೆ ಉದ್ಯಾನದಲ್ಲಿ ಭೂ ಸವೆತವನ್ನೂ ತಪ್ಪಿಸಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿಕುಸುಮಾ ತಿಳಿಸಿದ್ದಾರೆ.

ಇದನ್ನೂ ಓದಿ : GPSಗೆ ಮೊರೆ: ಇನ್ನು ಎರಡು ವರ್ಷಗಳಲ್ಲಿ ಭಾರತ ಟೋಲ್ ಬೂತ್ ಮುಕ್ತ: ನಿತಿನ್ ಗಡ್ಕರಿ

ಸಾಮಾಜಿಕ ಹೊಣೆಗಾರಿಕೆ: ಈ ಇಂಗುಗುಂಡಿ ಯೋಜನೆ ಅನುಷ್ಠಾನಕ್ಕೆ ಯುನೈಟೆಡ್‌ ವೇ ಆಫ್ ಬೆಂಗಳೂರು ಹಾಗೂ ಬಾಷ್‌ ಕಂಪನಿಗಳು ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ ಸಹಕಾರ ನೀಡಿವೆ. ಒಟ್ಟಾರೆ 209 ಇಂಗುಗುಂಡಿ ಪೈಕಿ 124 ಗುಂಡಿಗಳನ್ನು ಈ ಕಂಪನಿಗಳು ನಿರ್ಮಿಸಿವೆ. ಬಾಕಿ 85 ಗುಂಡಿಗಳನ್ನು ತೋಟಗಾರಿಕಾ ಇಲಾಖೆ ತನ್ನ ಅನುದಾನದಲ್ಲಿ ನಿರ್ಮಿಸಿದೆ. ಉದ್ಯಾನದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಇಂಗುಗುಂಡಿಗಳನ್ನು ಉದ್ಘಾಟಿಸಲಾಯಿತು. ತೋಟಗಾರಿಕಾ ಇಲಾಖೆನಿರ್ದೇಶಕಿ ಫೌಜಿಯಾ ತರನ್ನುಂ, ಬಾಷ್‌ಕಂಪನಿ ಮತ್ತು ಯುನೈಟೆಡ್‌ ವೇ ಆಫ್ ಬೆಂಗಳೂರು ಕಂಪನಿಗಳ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಉಪಸ್ಥಿತರಿದ್ದರು.

Advertisement

ದೊಡ್ಡ ಗಾತ್ರದ ಇಂಗುಗುಂಡಿಗಳನ್ನು ನಿರ್ಮಿಸಿದ್ದು, ಮುಂದಿನ ವರ್ಷಗಳಲ್ಲಿ ಸುತ್ತಮುತ್ತಲಿನ 20 ಚ.ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ. ಬಿ.ಎಂ.ಮಂಜುನಾಥ್‌, ಮಳೆ ನೀರು ಕೊಯ್ಲು ವಿಭಾಗದ ಎಂಜಿನಿಯರ್‌, ಬೆಂಗಳೂರು ಜಲಮಂಡಳಿ

ವರ್ಷದಲ್ಲಿ 30 ದಿನ ಉತ್ತಮ ಮಳೆಯಾದರೆ ಇಂಗುಗುಂಡಿಯಿಂದ 2.4 ಕೋಟಿ ಲೀಟರ್‌ನಷ್ಟು ನೀರು ಸಂಗ್ರಹವಾಗಿ ಭೂಮಿಗೆ ಇಂಗಲಿದೆ. ಡಾ.ಎಂ.ಜಗದೀಶ್‌, ಜಂಟಿ ನಿರ್ದೇಶಕ, ತೋಟಗಾರಿಕಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next