Advertisement
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯಇಲಾಖೆ ಪ್ರಸಕ್ತ ವರ್ಷ ಜಿಲ್ಲೆಯ ಅಂತರ್ಜಲವನ್ನುಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗಈ ಅಂಶ ಬೆಳಕಿಗೆ ಬಂದಿದೆ. ಈ ಹಳ್ಳಿಗಳ ಜನರುಕುಡಿಯಲು ಶುದ್ಧ ನೀರನ್ನೇ ಬಳಸುವ ಮೂಲಕಫ್ಲೊರೋಸಿಸ್‌ನಂಥ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ.
Related Articles
Advertisement
ಹರಿಹರ ತಾಲೂಕು: ಹರಿಹರ ತಾಲೂಕಿನ ಏಳು ಹಳ್ಳಿಗಳಲ್ಲಿ ಅಂತರ್ಜಲ ಕಲುಷಿತಗೊಂಡಿದೆ.ತಾಲೂಕಿನ ಬಸವನಾಳು ಗ್ರಾಮದಲ್ಲಿ ಕ್ಲೋರೈಡ್ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. 1000ದಷ್ಟುಇರಬೇಕಾದ ಕ್ಲೋರೈಡ್ ಪ್ರಮಾಣ ಈ ಗ್ರಾಮದಲ್ಲಿ1200ರಷ್ಟಿದೆ. ಹನಗವಾಡಿ ಪಂಚಾಯಿತಿಯ ಡೊಗ್ಗಳ್ಳಿಯಲ್ಲಿ ಟಿಡಿಎಸ್ ಪ್ರಮಾಣ ಹೆಚ್ಚಾಗಿದ್ದು 2000 ಇರಬೇಕಾದಲ್ಲಿ 2400ರಷ್ಟಿದೆ. ಜಿಗಳಿ ಪಂಚಾಯಿತಿವ್ಯಾಪ್ತಿಯ ಬೇವಿನಹಳ್ಳಿ (ಗುಡ್ಡದ), ಜಿಗಳಿ, ಕೊಂಡಜ್ಜಿಪಂಚಾಯಿತಿಯ ಕೆಂಚನಹಳ್ಳಿಯಲ್ಲಿ ಫ್ಲೋರೈಡ್ ಹೆಚ್ಚಾಗಿದ್ದು 1.5ರಷ್ಟು ಇರಬೇಕಾದಲ್ಲಿ 1.6ರಷ್ಟಿದೆ. ಇದೇ ತಾಲೂಕಿನ ಕಡರನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಾಳ್ಯದಲ್ಲಿ ಟಿಡಿಎಸ್ ಪ್ರಮಾಣ ಹೆಚ್ಚಾಗಿದ್ದು 2400ರಷ್ಟಿದೆ.
ಜಗಳೂರು ತಾಲೂಕು: ಜಗಳೂರು ತಾಲೂಕಿನ ಎಂಟು ಹಳ್ಳಿಗಳ ಅಂತರ್ಜಲ ಕಲುಷಿತಗೊಂಡಿದೆ. ತಾಲೂಕಿನ ಅಣಬೂರು ಪಂಚಾಯಿತಿ ವ್ಯಾಪ್ತಿಯ ದೊಡ್ಡಬೊಮ್ಮನಹಳ್ಳಿಯಲ್ಲಿ 1.5ರಷ್ಟು ಇರಬೇಕಾದ ಫ್ಲೋರೈಡ್ ಎರಡಷ್ಟಿದೆ. ತಾಲೂಕಿನ ಗುಡ್ಡಲಿಂಗನಹಳ್ಳಿ,ಅಯ್ಯನಹಳ್ಳಿ, ಸುರಡ್ಡಿಹಳ್ಳಿ, ಕಾಮಗೇತನಹಳ್ಳಿ,ಕಮಂಡಲಗುಂದಿ ಹಳ್ಳಿಗಳಲ್ಲಿ ಫ್ಲೋರೈಡ್ ಪ್ರಮಾಣ1.6ರಷ್ಟಿದೆ. ಇದೇ ತಾಲೂಕಿನ ಚಿಕ್ಕಮ್ಮನಹಟ್ಟಿಯಲ್ಲಿ ಕ್ಲೊರೈಡ್ 1550 ಹಾಗೂ ಕೆಚ್ಚೆನಹಳ್ಳಿಯಲ್ಲಿ ಕ್ಲೋರೈಡ್ 1510 ಇದೆ. ಒಟ್ಟಾರೆ ಜಿಲ್ಲೆಯ 25 ಹಳ್ಳಿಗಳ ಅಂತರ್ಜಲ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ.ಈ ಭಾಗದ ಜನರಲ್ಲಿ ಅಂತರ್ಜಲ ಕುಡಿಯಲು ಬಳಸದೇ ಇರುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅವರಿಗೆ ಕುಡಿಯಲು ಯೋಗ್ಯ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.
ಜಿಲ್ಲೆಯ ಮೂರು ತಾಲೂಕುಗಳ ಅಂತರ್ಜಲ ಕಲುಷಿತಗೊಂಡಿರುವುದುಪ್ರಯೋಗ ಪರೀಕ್ಷೆಯಿಂದ ಗೊತ್ತಾಗಿದೆ. ಅಂತರ್ಜಲ ಮೇಲಕ್ಕೆ ಬಂದಂತೆ ಫ್ಲೋರೈಡ್,ಕ್ಲೋರೈಡ್ ಪ್ರಮಾಣ ಕಡಿಮೆಯಾಗುತ್ತದೆ. ಅಂತರ್ಜಲ ಕಲುಷಿತಗೊಂಡ ಬಹುತೇಕಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇನ್ನು ಕೆಲವು ಹಳ್ಳಿಗಳಿಗೆಬಹುಗ್ರಾಮ ನದಿ ನೀರು ಯೋಜನೆ ಮೂಲಕಕುಡಿಯುವ ನೀರು ಪೂರೈಸಲಾಗುತ್ತಿದೆ.ಹಳ್ಳಿಗರು ಹೆಚ್ಚಾಗಿ ಕುಡಿಯಲು ಶುದ್ಧ ನೀರಿನ ಘಟಕಗಳ ನೀರನ್ನೇ ಉಪಯೋಗಿಸುತ್ತಿದ್ದಾರೆ. ಅಂತರ್ಜಲ ಕಲುಷಿತಗೊಂಡಿರುವಗ್ರಾಮಗಳಲ್ಲಿ ಕುಡಿಯಲು ಕೊಳವೆಬಾವಿ ನೀರು ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. –ಎಚ್. ನಾಗಪ್ಪ, ಕಾರ್ಯಪಾಲಕಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ದಾವಣಗೆರೆ
–ಎಚ್.ಕೆ. ನಟರಾಜ