Advertisement

ಮಳೆಯಿಂದ ಕಡಲೆ ಹಾನಿ: ಕಂಗಾಲಾಗಿ ಹರಗಿದ ರೈತರು

12:55 PM Oct 30, 2017 | |

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ವಿಜಯಪುರ ತಾಲೂಕಿನ ಉಕುಮನಾಳ
ಗ್ರಾಮದಲ್ಲಿ ಬಿತ್ತಿದ ಬೆಳೆಗಳು ಹಾಳಾಗಿದ್ದು ರೈತರು ಹಾಳಾದ ಕಡಲೆ ಬೆಳೆಯನ್ನು ಹರಗುತ್ತಿದ್ದಾರೆ.

Advertisement

ಉಕಮನಾಳ ಗ್ರಾಮದ ಬಸವರಾಜ ದ್ಯಾಮಗೊಂಡ ಬಿರಾದಾರ, ಮಹಾದೇವ ಆಚಾರಿ ಎಂಬ ರೈತರು 15 ಎಕರೆ
ಜಮೀನದಲ್ಲಿ ಬಿತ್ತಿದ ಕಡಲೆ ಬೆಳೆ ನಿರಂತರ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. 15 ಎಕರೆ ಕಡಲೆ ಬಿತ್ತನೆಗೆ 75 ಸಾವಿರ ರೂ. ಖರ್ಚು ಮಾಡಿರುವ ಈ ರೈತರು, ಇದೀಗ ಬಿತ್ತಿದ ಬೆಳೆ ಕೈಗೆ ಬಾರದೇ ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಇದರಿಂದ ರೈತರು ಹಾಳಾದ ಕಡಲೆ ಬೆಳೆಯನ್ನು ಹರಗಿ ಕಿತ್ತೆಸೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೇ ನಿರಂತರ ಭೀಕರಬರ ಅನುಭವಿಸಿದ ರೈತರು, ಇದೀಗ ಈ ವರ್ಷ ಸುರಿದ ಮಳೆಗೆ ಬಿತ್ತನೆ ಮಾಡಿದ ಬೆಳೆಗಳು ಅಕಾಲಿಕ ಮಳೆಯ ಕಾರಣ ಬೆಳೆ ಹಾಳಾಗಿ ನಷ್ಟಕ್ಕೆ ಸಿಲುಕಿದ್ದಾರೆ.

ಉಭಯ ರೈತರು ಬಿತ್ತಿದ ಬೆಳೆ ಹರಗಿ ಆರ್ಥಿಕ ನಷ್ಟದಿಂದ ಕಂಗಾಲಾಗಿರುವುದನ್ನು ಗಮನಿಸಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರೈತರು ಹತಾಶರಾಗಿ, ಸಾಲಕ್ಕೆ ಹೆದರಬೇಡಿ,
ಮಾನಸಿಕ ಧೃತಿಗೆಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಈ ಬಾರಿ ಬಿತ್ತಿದ ತೊಗರಿ, ಕಡಲೆ, ಅತಿ ಮಳೆಯಿಂದ ಹಾನಿಯಾಗಿವೆ. ಈ ಕುರಿತು ತಕ್ಷಣ ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next