ಪಿಲಿಭಿತ್ : ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಶನಿವಾರ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಬಹಿರಂಗ ಟೀಕೆಗಳನ್ನು ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಪೂರ್ವಭಾವಿ ಅರ್ಹತಾ ಪರೀಕ್ಷೆಯನ್ನು (ಪಿಇಟಿ) ಮುಂದೂಡದಕ್ಕಾಗಿ, ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ವಿದ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಮಾಡಿಲ್ಲ ಎಂದು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ ಕೇವಲ ಮಾರ್ನಿಂಗ್ ವಾಕ್: ಅರುಣ್ ಸಿಂಗ್
ಇತ್ತೀಚೆಗೆ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಅಸಮಾಧಾನ ಹೊರ ಹಾಕಿ, ವೈಮಾನಿಕ ಸಮೀಕ್ಷೆಯಿಂದ ನೆಲದ ವಾಸ್ತವ ಸಂಗತಿಗಳು ಗೋಚರಿಸುವುದಿಲ್ಲ ಎಂದು ಹೇಳಿದ್ದಾರೆ.
‘ಯುಪಿ ಪ್ರವಾಹದ ಹಿಡಿತದಲ್ಲಿದ್ದು, 37 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಇಟಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯುವುದಕ್ಕಿಂತ ದೊಡ್ಡ ಸವಾಲು ಕೇಂದ್ರವನ್ನು ತಲುಪಲು ಎದುರಾಗಿದೆ. ವಿದ್ಯಾರ್ಥಿಗಳ ನಿರಂತರ ಬೇಡಿಕೆಯ ಹೊರತಾಗಿಯೂ ಪರೀಕ್ಷೆಯನ್ನು ಮುಂದೂಡಲಿಲ್ಲ, ಸಮರ್ಪಕ ಸಂಚಾರ ವ್ಯವಸ್ಥೆ ಮಾಡಿಲ್ಲ. ಬಹುಶಃ ‘ವೈಮಾನಿಕ ಸಮೀಕ್ಷೆ ‘ ‘ನೆಲದ ಸಮಸ್ಯೆಗಳನ್ನು’ ತೋರಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.