Advertisement
ಸ್ವತ್ಛತೆಗೆ ಗ್ರಾಮ ಪಂಚಾಯತ್ ಗಳು ಎಷ್ಟೇ ಕ್ರಮ ಕೈಗೊಂಡರೂ ರಸ್ತೆ ಬದಿ ತ್ಯಾಜ್ಯ ಬಿಸಾಡುವುದರಿಂದ ತ್ಯಾಜ್ಯ ನಿರ್ವಹಣೆಯೇ ಗ್ರಾ.ಪಂ.ಗಳಿಗೆ ಬಹು ದೊಡ್ಡ ಸವಾ ಲಾಗಿ ಪರಿಣಮಿಸಿದೆ.
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊರ್ಕೋಡಿ ದ್ವಾರದಿಂದ ಅಂಥೋನಿ ಕಟ್ಟೆ ರಾಜ್ಯ ಹೆದ್ದಾರಿ 67ರ ರಸ್ತೆ ಬದಿಯಲ್ಲಿ ಮೂಟೆಮೂಟೆಗಳಲ್ಲಿ ತ್ಯಾಜ್ಯಗಳು ಬಿದ್ದಿದ್ದು, ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಳೆ ಬಂದರೆ ಈ ತ್ಯಾಜ್ಯಗಳು ಪೊರ್ಕೋಡಿ ಪ್ರದೇಶದ ಕೃಷಿ ಗದ್ದೆಗಳಿಗೆ ಹರಿದು ಹೋಗಲಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗಲಿದೆ ಎನ್ನುತ್ತಾರೆ ಇಲ್ಲಿನ ಕೃಷಿಕರು. ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯ ಅಂಬಿಕಾ ನಗರದ ಸಮೀಪ ರಾಜ್ಯ ಹೆದ್ದಾರಿ 101ರಲ್ಲಿಯೂ ರಸ್ತೆ ಬದಿ ಮಳೆ ನೀರು ಹರಿಯುವ ತೋಡಿನಲ್ಲಿ ತಾಜ್ಯ ರಾಶಿ ಬಿದ್ದಿವೆ. ಈ ತ್ಯಾಜ್ಯ ಕೆಳಗೆ ಪುಚ್ಚಳ ಪ್ರದೇಶ ಗದ್ದೆಗಳಿಗೆ ಹರಡಲಿವೆ.
Related Articles
Advertisement
ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ, ಅಂಗಡಿಗಳಿಂದ ಕಸ ಸಂಗ್ರಹ ಮಾಡುತ್ತಿದ್ದು, ಇದರಿಂದ ಇಲ್ಲಿ ಕಸದ ತೊಟ್ಟಿಯ ಅಗತ್ಯ ಇಲ್ಲದಾಗಿದೆ. ಈ ಹಿಂದೆ ಬಜಪೆ ಪೇಟೆ, ವಿಜಯ ವಿಠಲ ಭಜನ ಮಂದಿರ, ಪ್ರಟೋಲ್ ಪಂಪ್ ಹಿಂದುಗಡೆ, ಕ್ವಾನೆಂಟ್ ರೋಡ್‌ನಲ್ಲಿ ಕಸದ ತೊಟ್ಟಿ ಇಡಲಾಗಿತ್ತು. ಮನೆಮನೆ ಕಸ ಸಂಗ್ರಹವಾದ ಮೇಲೆ ತೊಟ್ಟಿಯ ಅಗತ್ಯತೆ ಇಲ್ಲವೆಂದು ಅದನ್ನು ತೆಗೆಯಲಾಗಿದೆ. ಆದರೆ ವಾಹನಗಳಲ್ಲಿ ಬಂದು ಕೆಲವರು ಈ ಭಾಗದಲ್ಲಿ ಕಸ ಬಿಸಾಡಿ ಹೋಗುವ ಪದ್ಧತಿ ಈಗಲೂ ಮುಂದುವರಿದಿದೆ.
2 ಪ್ರಕರಣ ದಾಖಲು ಸಾರ್ವಜನಿಕರು ದೂರು ನೀಡಲು ಹಿಂಜರಿಯುತ್ತಿರುವುದ ರಿಂದ ಈ ಭಾಗದಲ್ಲಿ ಕಸ ತಂದು ಬಿಸಾಡುವವರ ವಿರುದ್ಧ 2 ಪ್ರಕ ರಣ ಮಾತ್ರ ದಾಖಲಾಗಿದೆ. ಹೀಗಾಗಿ ಕಸ ತಂದು ಬಿಸಾ ಡು ವವರ ವಿರುದ್ಧ ಕ್ರಮ ಕೈಗೊಳ್ಳಲು ಪಡುಪೆರಾರ, ಕಂದಾವರ ಹಾಗೂ ಮಳವೂರು ಗ್ರಾಮ ಪಂಚಾಯತ್‌ಗಳು ಜಾಗೃತರಾಗಬೇಕಾಗಿದೆ. ವಾಹನದಲ್ಲಿ ಬಂದು ತ್ಯಾಜ್ಯ ಬಿಸಾಡದಂತೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಫ್ಲ್ಯಾಟ್‌ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವ ಕ್ರಮ ಕೈ ಗೊ ಳ್ಳಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಈ ಬಗ್ಗೆ ಕಟ್ಟುನಿ ಟ್ಟಿನ ಕ್ರಮಕೈಗೊಳ್ಳಬೇಕು. ಸಿಸಿ ಕೆಮರಾ ಅಳವಡಿಸಲು ಚಿಂತನೆ
ಮಳವೂರು ಗ್ರಾಮ ಪಂಚಾಯತ್ ಕಸ ಬಿಸಾಡುವ ಕಡೆಗಳಲ್ಲಿ ಕಸಗಳನ್ನು ತೆಗೆಸಿ, ಫಲಕ, ಕೆಲವೆಡೆ ನೆಟ್‌ಗಳನ್ನು ಹಾಕಲಾಗಿದೆ. ಈಗಾಗಲೇ ಕಸ ವಿಲೇವಾರಿಗಾಗಿ ಟೆಂಡರ್ ಕರೆಯಲಾಗಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಸಭೆ ಕರೆದಿಲ್ಲ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗು ವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು. ಮನೆ ಇಲ್ಲದೇ ನಿರ್ಜನ ಪ್ರದೇಶಗಳಲ್ಲಿ ಕಸ ತಂದು ಹಾಕು ವುದು ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಸಿಸಿ ಕೆಮರಾ ಅಳವಡಿಸಲು ಚಿಂತನೆ ನಡೆಸಲಾಗಿದೆ.
- ಗಣೇಶ್ ಅರ್ಬಿ,
ಅಧ್ಯಕ್ಷ, ಮಳ ವೂರು ಗ್ರಾ.ಪಂ.