ಶಿಮ್ಲಾ: ಟರ್ಕಿಯಲ್ಲಿರುವ ವರ ಮತ್ತು ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿನೊಂದಿಗೆ ವರ್ಚುವಲ್ ‘ನಿಖ್ಹಾ’ ನಡೆದಿದ್ದು ಭಾರೀ ಸುದ್ದಿಯಾಗುತ್ತಿದೆ.
ಟರ್ಕಿಯಲ್ಲಿ ಕೆಲಸ ಮಾಡುವ ಕಂಪನಿಯು ರಜೆ ನೀಡಲು ನಿರಾಕರಿಸಿದ್ದರಿಂದ ಬಿಲಾಸ್‌ಪುರದ ನಿವಾಸಿ ಅದ್ನಾನ್ ಮುಹಮ್ಮದ್ ಅವರ ವಿವಾಹ ಸಮಾರಂಭವನ್ನು ವರ್ಚುವಲ್ ಆಗಿ ನಡೆಸಬೇಕಾಯಿತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆ ವಿಚಾರ ಮಾತ್ರವಲ್ಲದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಧುವಿನ ಅಜ್ಜ ಬೇಗನೆ ಮದುವೆಯಾಗಬೇಕೆಂದು ಒತ್ತಾಯಿಸಿದ್ದೂ ಇನ್ನೊಂದು ಕಾರಣ ಎಂದು ಹೇಳಿದ್ದಾರೆ.
ವರ ಮತ್ತು ವಧುವಿನ ಕುಟುಂಬ ಸದಸ್ಯರು ವರ್ಚುವಲ್ ‘ನಿಖ್ಹಾ’ಗೆ ಒಪ್ಪಿಕೊಂಡು ಬಿಲಾಸ್‌ಪುರದ ಬಾರಾತ್ ಮಂಡಿ ತಲುಪಿ ಸೋಮವಾರ ಮದುವೆ ನಡೆದಿದೆ. ಜೋಡಿ ವಿಡಿಯೋ ಕರೆಗಳ ಮೂಲಕ ಸಂಪರ್ಕ ಹೊಂದಿದ್ದು, ಖಾಜಿಯೊಬ್ಬರು “ಖುಬೂಲ್ ಹೇ ” ಎಂದು ಮೂರು ಬಾರಿ ಹೇಳುವ ಮೂಲಕ ವಿವಾಹ ಆಚರಣೆಗಳನ್ನು ಮಾಡಿಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದಿಂದಾಗಿಯೇ ಮದುವೆ ಸಾಧ್ಯವಾಗಿದೆ ಎಂದು ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್ ಹೇಳಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ, ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ ಬರಾತ್ ತನ್ನ ಗಮ್ಯಸ್ಥಾನವನ್ನು ತಲುಪಲು ಸಾಧ್ಯವಾಗದ ಕಾರಣ, ಶಿಮ್ಲಾದ ಕೋಟ್‌ಗಢ್‌ನ ಆಶಿಶ್ ಸಿಂಘಾ ಮತ್ತು ಕುಲುವಿನ ಭುಂತರ್‌ನಿಂದ ಶಿವಾನಿ ಠಾಕೂರ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದನ್ನು ಈ ವೇಳೆ ಸ್ಮರಿಸಬಹುದು.