Advertisement

Iceland: ಜ್ವಾಲಾಮುಖಿ ಸ್ಫೋಟಗೊಂಡರೆ ಗ್ರಿಂಡಾವಿಕ್‌ ?

09:16 PM Nov 12, 2023 | Team Udayavani |

ರೇಖೀವಿಕ್‌:ಐರೋಪ್ಯ ಒಕ್ಕೂಟದ ಐಸ್‌ಲ್ಯಾಂಡ್‌ನ‌ ರೇಖೀವಿಕ್‌ ಪರ್ಯಾಪ ದ್ವೀಪದ ಗ್ರಿಂಡಾವಿಕ್‌ನಲ್ಲಿ ಭೂಕಂಪನದ ಬೆನ್ನಲ್ಲೇ ಜ್ವಾಲಾಮುಖೀ ಸ್ಫೋಟದ ಆತಂಕ ಎದುರಾಗಿದೆ. ಜ್ವಾಲಾಮುಖೀ ಸ್ಫೋಟಗೊಂಡರೆ 4 ಸಾವಿರ ಮಂದಿ ವಾಸಿಸುವ ಈ ಇಡೀ ನಗರವೇ ಆಹುತಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

Advertisement

ಶುಕ್ರವಾರ 800 ಬಾರಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಶನಿವಾರವೇ ನಗರದ ಜನರನ್ನು ಸ್ಥಳಾಂತರಿಸಲಾಗಿತ್ತು. ಈಗಾಗಲೇ ನಾಗರಿಕರ ರಕ್ಷಣೆ ಮತ್ತು ತುರ್ತು ನಿರ್ವಹಣೆಯ ಬಗ್ಗೆಯೂ ಎಚ್ಚರಿಕೆ ವಹಿಸಲಾಗಿದೆ. ಒಂದು ವೇಳೆ, ಜ್ವಾಲಾಮುಖೀ ಸ್ಫೋಟಗೊಂಡರೆ ಗ್ರಾಮದ ಮನೆಗಳು, ಮೂಲಸೌಕರ್ಯಗಳು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ರಾಜಧಾನಿ ರೇಖೀವಿಕ್‌ನಿಂದ 40 ಕಿ.ಮೀ. ದೂರದಲ್ಲಿರುವ ಗ್ರಿಂಡಾವಿಕ್‌ ಇತರೆ ಪ್ರದೇಶಗಳ ಜನರಿಗೆ ವಿದ್ಯುತ್‌ ಹಾಗೂ ನೀರನ್ನು ಪೂರೈಸುವ ಮೂಲತಾಣವಾಗಿದೆ.

ಸಿಹಿ ನೀರಿನ ಜಲಾಶಯದ ಜತೆಗೆ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳೂ ಈ ನಗರದಲ್ಲಿದ್ದು ಜ್ವಾಲಾಮುಖೀ ಸ್ಫೋಟದಿಂದ ಅವೆಲ್ಲವೂ ಹಾನಿಗೊಳಗಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಈ ನಡುವೆಯೇ ಕಂಪನದ ತೀವ್ರತೆಯನ್ನು ಗಮನಿಸಿ ಮುಂದಿನ ಕೆಲಸವು ಗಂಟೆಗಳ ಅಂತರದಲ್ಲೋ ಅಥವಾ ಒಂದೆರಡು ದಿನಗಳ ಅಂತರದಲ್ಲೋ ಜ್ವಾಲಾಮುಖೀ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next