Advertisement

ಗೃಹಲಕ್ಷ್ಮೀ ನೊಂದಣಿಗೆ ಸರ್ವರ್‌ ಸಮಸ್ಯೆ

10:21 AM Jul 22, 2023 | Team Udayavani |

ದೇವನಹಳ್ಳಿ: ಕುಟುಂಬದ ಯಜಮಾನಿಗೆ 2,000 ನೀಡುವ ಗೃಹಲಕ್ಷ್ಮೀ ಯೋಜನೆ ನೋಂದಣಿ ಕಾರ್ಯ ಆರಂಭಗೊಂಡಿದ್ದು, ಸರ್ವರ್‌ ಸಮಸ್ಯೆಯಿಂದ ನೋಂದಣಿ ಸುಗಮವಾಗಿ ನಡೆಯಲಿಲ್ಲ. ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಪತಿ ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯ ಪಾಸ್‌ ಪುಸ್ತಕ ಮಾಹಿತಿಯೊಂದಿಗೆ ಮಹಿಳೆಯರು ತೆರಳಿದರು.

Advertisement

ಬೆಳಗ್ಗೆಯಿಂದಲೂ ಸರ್ವ ಸಮಸ್ಯೆ ಕಾಡಿತ್ತು. ಜಿಲ್ಲಾದ್ಯಂತ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಮಹಿಳೆಯರು ಪರಿತಪಿ ಸುವಂತೆ ಆಯಿತು. ದೇವನಹಳ್ಳಿ ಪುರಸಭೆ ವ್ಯಾಪ್ತಿಯ 3 ಕೇಂದ್ರಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೆ ತಾಂತ್ರಿಕ ದೋಷ ಕಂಡು ಬಂತು. ಎರಡು ಗಂಟೆ ನಂತರ ಎರಡು ಮೂವತ್ತ ರವರೆಗೆ ಸುಮಾರು ಐದು ಅರ್ಜಿಗಳು ಸಲ್ಲಿಕೆ ಆಗಿದ್ದವು.ನಂತರ 2:30ನಂತರವೂ ಸರ್ವರ್‌ ಸಮಸ್ಯೆ ಕಾಡುತ್ತಿತ್ತು.

ನೋಂದಣಿ ಕಾರ್ಯಕ್ಕೆ ಸಮಸ್ಯೆ: ಕಾಂಗ್ರೆಸ್‌ ನೇತೃತ್ವದ ಸರ್ಕಾರವು 5 ಗ್ಯಾರಂಟಿ ಯೋಜನೆಗಳಲ್ಲಿ ಇದು ಪ್ರಮುಖ ಯೋಜನೆಯಾಗಿದೆ. ವೃದ್ಧ ಮಹಿಳೆಯರು ಕೂಡ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದರು. ಸರ್ವರ್‌ ಸಮಸ್ಯೆಯಿಂದಾಗಿ ನೋಂದಣಿ ಸಮರ್ಪ ಕವಾಗಿ ನಡೆಯಲಾಗದೆ ಸೇವಾ ಕೇಂದ್ರದವರು ಅಸಹಾಯಕರಾದರು. ಆಗೊಮ್ಮೆ-ಈಗೊಮ್ಮೆ ಸರ್ವರ್‌ ಸಿಗುತ್ತಾದರೂ, ಒಬ್ಬರು ಅಥವಾ ಇಬ್ಬರು ನೋಂದಣಿ ಮಾಡುವಷ್ಟರಲ್ಲಿ ಮತ್ತೆ ಕೈ ಕೊಡುತ್ತಿತ್ತು. ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಮಹಿಳೆಯರು ಕಾಯುವಂತೆ ಆಗಿತ್ತು.

ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಕೆ: ದಿನಕ್ಕೆ 60 ಮಂದಿ ನಿಗದಿಪಡಿಸಿದಾದರೂ, ಮೊದಲ ಮತ್ತು ಎರಡನೇ ದಿನ ನಿಗದಿಪ ಡಿಸಿದಷ್ಟು ಜನ ಕೇಂದ್ರಗಳಿಗೆ ಬರಲಿಲ್ಲ. ಸರ್ವರ್‌ ಸಮಸ್ಯೆಯಿಂದ ಮಹಿಳೆಯರು ಸೇವಾ ಕೇಂದ್ರಗಳಲ್ಲಿ ಕಾದು ಕುಳಿತಿದ್ದ ದೃಶ್ಯಗಳು ಕಂಡುಬಂದವು. ಪಟ್ಟಣ ದಲ್ಲಿ ಅನೇಕ ಖಾಸಗಿ ಸೇವಾ ಕೇಂದ್ರಗಳಿವೆ. ಆದರೂ ಸಹ ಪುರಸಭೆಯ ವ್ಯಾಪ್ತಿಯ ಈಗಾಗಲೇ ಬರುವ ಫ‌ಲಾನುಭವಿಗಳಿಗೆ ಯಾವುದೇ ಶುಲ್ಕವಿಲ್ಲದೆ ಅರ್ಜಿಗಳನ್ನು ಪಡೆದು ನೋಂದಣಿ ಮಾಡಲಾಗುತ್ತಿದೆ.

ಗಂಟೆಗಟ್ಟಲೆ ಕಾದು ಸುಸ್ತಾದ ಮಹಿಳೆಯರು: ಸರ್ಕಾರದ ಪ್ರತಿ ಯೋಜನೆಯಂತೆಯೇ ಈ ಯೋಜನೆಯ ನೋಂದಣಿ ಎಲ್ಲೂ ಕೂಡ ಮೊದಲ ಮತ್ತು ಎರಡನೆ ದಿನ ಸರ್ವರ್‌ ಸಮಸ್ಯೆ ತಲೆ ದೂರಿದೆ. ಗೃಹಲಕ್ಷ್ಮೀಯರು ಅದು ಗಂಟೆಗಟ್ಟಲೆ ಕಾದು ಸುಸ್ತಾಗಿ ಸರ್ಕಾರಕ್ಕೆ ಇಡೀ ಶಾಪ ಹಾಕುತ್ತಾ ಹೋಗುವಂತಾಗಿದೆ. ಗಂಟೆಗಟ್ಟಲೆ ಕಾದರೂ ಇದೇ ಸಮಸ್ಯೆ ಮುಂದುವರಿದಿತ್ತು. ಕಡೆಗೆ ಇವತ್ತು ಆಗುವುದಿಲ್ಲ ನಾಳೆ ಬನ್ನಿ ಎಂದು ಹೇಳಿದಾಗ ಮಹಿಳೆಯರು ಗೊಣಗುತ್ತಲೆ ಅಲ್ಲಿಂದ ಜಾಗ ಖಾಲಿ ಮಾಡಿದರು. ಫ‌ಲಾನುಭವಿಗಳು ಯಾವುದೇ ನಿರ್ದಿಷ್ಟ ಸಮಯ ಮತ್ತು ಅವಧಿ ಇಲ್ಲದೆ ನೋಂದಣಿ ಕಾರ್ಯಯನ್ನು ಮಾಡಿಸಿಕೊಳ್ಳಬಹುದು.

Advertisement

ಗೃಹಲಕ್ಷ್ಮೀ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದಾದರೂ, ನೋಂದಣಿಗೆ ಸರ್ವರ್‌ ಸಮಸ್ಯೆಯಿಂದ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಗೊಮ್ಮೆ-ಇನ್ನೊಮ್ಮೆ ಬಂದು ಹೋಗುತ್ತದೆ. ಕೆಲಸ, ಕಾರ್ಯ ಬಿಟ್ಟು ಕಾಯುವ ಪರಿಸ್ಥಿತಿ ಎದುರಾಗಿದೆ. ● ಶಶಿಕಲಾ, ಗೃಹಲಕ್ಷ್ಮೀ ಫ‌ಲಾನುಭವಿ

ಬೆಳಗ್ಗೆ ಒಂಭತ್ತು ಗಂಟೆಯಿಂದ 11:30ವರೆಗೆ ಗೃಹಲಕ್ಷ್ಮೀ ನೋಂದಣಿಯು ತಂತ್ರಾಂಶವು ವೇಗವಾಗಿ ಕಾರ್ಯ ನಿರ್ವಹಿಸುತ್ತಿದ್ದು. ನಂತರ ಸರ್ವರ್‌ ಸಮಸ್ಯೆ ಕಾಡಿದೆ. ಸಮಸ್ಯೆಗೆ ಸಂಬಂಧಪಟ್ಟಂತೆ ತಾಂತ್ರಿಕ ದೋಷದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ● ನಟರಾಜ್‌, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next