Advertisement
ದಿಶಾ ರವಿ ದೆಹಲಿಯ ರೈತ ಪ್ರತಿಭಟನೆಗೆ ಸಂಬಂಧಿಸಿದ ‘ಟೂಲ್ ಕಿಟ್’ ಅನ್ನು ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಪ್ರಸಾರ ಮಾಡಿದ್ದರೆಂದು ಮೂಲಗಳು ತಿಳಿಸಿವೆ. ಬೆಂಗಳೂರಿಗೆ ಆಗಮಿಸಿದ್ದ ದಿಲ್ಲಿ ಸೈಬರ್ ಪೊಲೀಸರ ತಂಡ ದಿಶಾ ರವಿ ಅವರನ್ನು ಉತ್ತರ ಬೆಂಗಳೂರಿನ ಅವರ ಮನೆಯಿಂದ ವಿಚಾರಣೆಗೆ ಕರೆದೊಯ್ದಿದ್ದಾರೆ.
Related Articles
Advertisement
ಇದನ್ನೂ ಓದಿ:ಯಾರಿಗೂ ಸಂಶಯ ಬೇಡ, ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ: ಸಿಎಂ ಯಡಿಯೂರಪ್ಪ
ಗ್ರೇಟಾ ಥನ್‌ಬರ್ಗ್ ಅವರು ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ವೇಳೆ ಟೂಲ್ ಕಿಟ್ ನ್ನು ಕೂಡಾ ಟ್ವೀಟ್ ಮಾಡಿದ್ದರು. ಇದರಲ್ಲಿ ಭಾರತದ ರೈತ ಹೋರಾಟವನ್ನು ಹೇಗೆ ಮಾಡಬೇಕು ಎನ್ನುವ ಯೋಜನೆಗಳಿದ್ದವು. ಇದು ವಿವಾದವಾಗುತ್ತಿದ್ದಂತೆ ಗ್ರೇಟಾ ಥನ್‌ಬರ್ಗ್ ಆ ಟೂಲ್ ಕಿಟ್ ಟ್ವೀಟ್ ನ್ನು ಅಳಿಸಿದ್ದರು.