-ಅಪ್ಪನಂತೆ ಮಗನದ್ದೂ ಮಾತೇ ಮಾತು
-ನಾವು ಡೈರಿ ಮಿಲ್ಕ್ ಅತ್ತೆ-ಸೊಸೆಯರಂತೆ
-ದಿನಾ 16 ಜನರಿಗೆ ಅಡುಗೆ ಮಾಡ್ತೀನಿ
Advertisement
– ನಿಮ್ಮಿಬ್ಬರ ಪ್ರೀತಿ ಆರಂಭವಾಗಿದ್ದು ಹೇಗೆ? ಯಾರು ಮೊದಲು ಪ್ರಪೋಸ್ ಮಾಡಿದ್ದು?ಟಿವಿ-25 ಎಂಬ ಕಾರ್ಯಕ್ರಮ ಆಯೋಜನೆಯಾಗಿತ್ತು. ಆ ಕಾರ್ಯಕ್ರಮದ ಉಸ್ತುವಾರಿಯನ್ನು ಸೃಜನ್ ವಹಿಸಿಕೊಂಡಿದ್ದರು. ನಾನು ನಿರೂಪಣೆ ಮತ್ತು ಗಾಯನ ತಂಡದಲ್ಲಿದ್ದೆ. 2- 3 ದಿನಗಳು ರಿಹರ್ಸಲ್ ನಡೆದಿತ್ತು ಅಷ್ಟೇ. ಒಮ್ಮೆ ಇದ್ದಕ್ಕಿದ್ದ ಹಾಗೆ ಸೃಜ ನನ್ನ ಬಳಿ ಬಂದು “ನಾವಿಬ್ಬರು ಮದುವೆಯಾದರೆ ಹೇಗೆ?’ ಅಂತ ಕೇಳಿದರು. ನಾನು ತಮಾಷೆ ಮಾಡುತ್ತಿದ್ದಾರೆ ಅಂತ ನಕ್ಕು ಸುಮ್ಮನಾದೆ. ಆಮೇಲೆ ಸೃಜ, ನಾನು ಜೋಕ್ ಮಾಡಿದ್ದಲ್ಲ. ಗಂಭೀರವಾಗಿಯೇ ಕೇಳಿದ್ದು. ಯೋಚಿಸಿ ನಿರ್ಧಾರ ತಿಳಿಸು ಎಂದರು. ನಾನು 2 ದಿನ ಸಮಯ ತೆಗೆದುಕೊಂಡೆ. ಏನೋ ಪಾಸಿಟಿವ್ ವೈಬ್ ಇತ್ತು. ಒಪ್ಪಿಗೆ ಹೇಳಿದೆ.
ಪರಿಸ್ಥಿತಿಯೇ ಹಾಗಿತ್ತು. 2008ರಲ್ಲಿ ನಾವು ಮದುವೆಯಾಗಲು ನಿರ್ಧರಿಸಿದ್ದು. 2010ರಲ್ಲಿ ಮದುವೆಯಾಗಿದ್ದು. ಅಲ್ಲಿಯವರೆಗೂ ನಮ್ಮಿಬ್ಬರ ಕುಟುಂಬಗಳಿಗೆ ಬಿಟ್ಟರೆ ವಿಷಯ ಬೇರೆ ಯಾರಿಗೂ ತಿಳಿದಿರಲಿಲ್ಲ. ಇಬ್ಬರು ಒಟ್ಟಿಗೆ ಒಂದು ದಿನವೂ ಹೊರಗಡೆ ಭೇಟಿಯಾಗಿಲ್ಲ, ಓಡಾಡಿಲ್ಲ. ಅಷ್ಟಾಗಿಯೂ ನನಗೆ “ನೀನು ಸೃಜನ್‌ನನ್ನು ಹೇಗೆ ಮದುವೆಯಾಗುತ್ತೀಯ ಎಂದು ನೋಡುತ್ತೀನಿ’ ಎಂದು ಅಪರಿಚಿತರ ಬೆದರಿಕೆ ಕರೆ ಬರುತ್ತಿತ್ತು. ಮದುವೆಯಾಗುವವರೆಗೂ ನನ್ನ ಅಪ್ಪನ ವಿರೋಧ ಇತ್ತು. ನೆಂಟರಿಷ್ಟರ ಕೊಂಕು ಮಾತುಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಟಿ.ವಿ, ಪೇಪರ್‌ನಲ್ಲಿ ಸುದ್ದಿಯಾಗೋ ಭಯ ಬೇರೆ ಇತ್ತು. – ಮತ್ತೆ ಬಣ್ಣ ಹಚ್ಚುವುದು ಯಾವಾಗ? ನಟನೆ ತುಡಿತ ಈಗಲೂ ಇದೆಯಾ?
ನಟನೆಯನ್ನು ಬಿಟ್ಟು ಬದುಕುವುದು ಒಬ್ಬ ಕಲಾವಿದನಿಗೆ ಅಷ್ಟು ಸುಲಭವಲ್ಲ. ಮನೆಯಲ್ಲಿ “ಮಜಾ ಟಾಕೀಸ್’ ರಿಹರ್ಸಲ್ ನಡೆಯುವಾಗ, ನಾನು ಯಾವಾಗ ಮತ್ತೆ ಕ್ಯಾಮರಾ ಮುಂದೆ ಬರಿ¤àನಿ, ಬಣ್ಣ ಹಚಿ¤àನಿ ಅಂತ ತವಕ ಆಗುತ್ತಾ ಇರುತ್ತದೆ. ಆದರೆ, ಸದ್ಯಕ್ಕೆ ನನ್ನ ಸಮಯವೆಲ್ಲಾ ಮಗ ಮತ್ತು ಮನೆಗೆ ಮಾತ್ರ ಮೀಸಲು. ಅವನು ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಮತ್ತೆ ಬಣ್ಣ ಹಚ್ಚುತ್ತೇನೆ.
Related Articles
ನನ್ನಪ್ಪ ಉದಯ್‌ಶಂಕರ್ ಅವರು ರಂಗಭೂಮಿ ಕಲಾವಿದರು. ನಾನು 3ನೇ ತರಗತಿಯಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ್ದೆ. 10ನೇ ತರಗತಿಯಲ್ಲಿದ್ದಾಗ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದೆ. ಬಿ. ಸುರೇಶ್ ಅಂಕಲ್ ನನಗೆ “ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ಆಗಿನ್ನೂ ನಾನು ಫಸ್ಟ್ ಪಿಯುಸಿ ಓದ್ತಾ ಇದ್ದೆ. ಧಾರಾವಾಹಿ ಹಿಟ್ ಆಯಿತು. ಜನರು ನನ್ನನ್ನು ಗುರುತಿಸುತ್ತಿದ್ದರು. ನಾನು ಬಸ್ಸಿನಲ್ಲಿ ಕಾಲೇಜಿಗೆ ಹೋಗುವಾಗ ಸಾಕಷ್ಟು ಜನರು “ನೀವು ನಟಿ ಅಲ್ವಾ? ಮತ್ಯಾಕೆ ಬಸ್‌ನಲ್ಲಿ ಓಡಾಡ್ತೀರ?’ ಅಂತ ಕೇಳ್ಳೋರು. ನಾನು ಸೆಕೆಂಡ್ ಪಿಯುಸಿಯಲ್ಲಿ ಒಂದೇ ಒಂದು ತರಗತಿಗೂ ಹಾಜರಾಗಿಲ್ಲ. ನೇರವಾಗಿ ಅಂತಿಮ ಪರೀಕ್ಷೆಗೆ ಹಾಜರಾಗಿದ್ದೆ. ಅಪ್ಪನ ಭಯದಿಂದ ಓದಿ ಪರೀಕ್ಷೆ ಪಾಸ್ ಆಗಿದ್ದೆ.
Advertisement
-ಅತ್ತೆ-ಸೊಸೆ ಮನೆಯಲ್ಲಿ ಹೇಗಿರುತ್ತೀರ?ಡೈರಿ ಮಿಲ್ಕ್ ಚಾಕೊಲೇಟ್ ತಿಂದು ಅತ್ತೆ- ಸೊಸೆ ಇಬ್ರೂ ಡ್ಯಾನ್ಸ್ ಮಾಡುವ ಜಾಹೀರಾತು ಬರುತ್ತದಲ್ಲ, ಅದರಲ್ಲಿನ ಅತ್ತೆ-ಸೊಸೆ ಬದಲು ನಮ್ಮನ್ನು ಊಹಿಸಿಕೊಳ್ಳಿ. ಹಾಗೇ ಇದೆ ನಮ್ಮಿಬ್ಬರ ಜೋಡಿ. ನಮಗಿಬ್ಬರಿಗೂ ಒಂದು ಕಡೆ ಕೂರುವುದೆಂದರೆ ಆಗುವುದಿಲ್ಲ. ಏನಾದರೊಂದು ಕೆಲಸ ಮಾಡುತ್ತಲೇ ಇರಬೇಕು. ನಾನು ನಮ್ಮಮ್ಮನ ಜೊತೆ ಹೇಗೆ ಜಗಳವಾಡುತ್ತೀನೋ ಹಾಗೆಯೇ ಅತ್ತೆ ಜೊತೆಯೂ ಕಿತ್ತಾಡುತ್ತೀನಿ. ಅವರೂ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಒಂದ್ಹತ್ತು ನಿಮಿಷಕ್ಕೆಲ್ಲಾ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮತ್ತೆ ಒಂದಾಗ್ತಿàವಿ. ನಮ್ಮಿಬ್ಬರ ಮಧ್ಯೆ ಮುನಿಸು, ಮನಸ್ತಾಪ ಎಂಬುದೇ ಇಲ್ಲ. -ನಿಮ್ಮ ಅತ್ತೆಯಲ್ಲಿ ನಿಮಗೆ ಇಷ್ಟವಾಗುವ ಗುಣ?
ಅವರ ನೇರವಂತಿಕೆ ನನಗೆ ತುಂಬಾ ಇಷ್ಟ. ಏನಾದರೂ ಆಗಿರಲಿ ಅದು ಚೆನ್ನಾಗಿದ್ದರೆ ಮಾತ್ರ ಚೆನ್ನಾಗಿದೆ ಅಂತಾರೆ. ಇಲ್ಲ ಎಂದರೆ ನೇರವಾಗಿ ಚೆನ್ನಾಗಿಲ್ಲ ಅಂತ ಹೇಳುತ್ತಾರೆ. ಒಳಗೊಂದು ಹೊರಗೊಂದು ಮಾಡಿಯೇ ಅವರಿಗೆ ಗೊತ್ತಿಲ್ಲ. ಸೃಜನ್‌ಗೂ ಅವರೇ ದೊಡ್ಡ ವಿಮರ್ಶಕರು. ಸಮಯಕ್ಕೆ ಹೇಗೆ ಮಹತ್ವ ನೀಡಬೇಕು ಎಂದು ಅವರಿಂದ ಕಲಿತುಕೊಳ್ಳಬೇಕು. 11 ಗಂಟೆಗೆ ಶೂಟಿಂಗ್‌ಗೆ ಪಿಕ್‌ಅಪ್ ಎಂದರೆ, 10.30ಕ್ಕೇ ಅವರು ರೆಡಿಯಾಗಿರುತ್ತಾರೆ. -ಶಾಪಿಂಗ್, ಪ್ರವಾಸ ಅಂತ ಸುತ್ತಾಡುವುದು ಇಷ್ಟಾನ ನಿಮಗೆ?
ಇಷ್ಟ ಏನೋ ಇದೆ. ಆದರೆ, ಮನೆ ಬಿಟ್ಟು ಹೋಗುವುದು ಈಗ ಬಹಳ ಕಷ್ಟ. ಮನೆಯಲ್ಲಿ ದಿನ 16 ಜನಕ್ಕೆ ಅಡುಗೆ ಮಾಡಬೇಕು. ಮಜಾ ಟಾಕೀಸ್ ರಿಹರ್ಸಲ್ ಇದ್ದರೆ 30 ಜನಕ್ಕೆ ಮಾಡಬೇಕಾಗುತ್ತದೆ. ಸಹಾಯಕ್ಕೆ ಜನರಿದ್ದಾರೆ. ಆದರೆ ನನಗೆ ಮನೆ ಜವಾಜಾªರಿ, ಮಗನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯಾವತ್ತೂ ಇಷ್ಟ ಇಲ್ಲ. ಗೃಹಿಣಿಯಾಗಿ ನನ್ನ ಜವಾಬ್ದಾರಿಯನ್ನು ನಾನು ಎಂಜಾಯ್ ಮಾಡುತ್ತೇನೆ. -ದೈನಂದಿನ ಕೆಲಸದಲ್ಲಿ ಸೃಜನ್ ಹೇಗೆ ಸಹಾಯ ಮಾಡುತ್ತಾರೆ?
ನಮ್ಮ ಮನೆಯಲ್ಲಿ ಇವರು ಇಂಥದ್ದೇ ಕೆಲಸ ಮಾಡಬೇಕು ಅಂತ ಇಲ್ಲ. ಅಡುಗೆ ಕೆಲಸ ತುಂಬಾ ಇದ್ದಾಗ ಅತ್ತೆ ಬಂದು ಕೈಜೋಡಿಸುತ್ತಾರೆ. ಕೆಲವೊಮ್ಮೆ ಚಿಕ್ಕಪುಟ್ಟ ಅಡುಗೆಗಳನ್ನು ಸೃಜನ್ ಮಾಡಿ ಮುಗಿಸುತ್ತಾರೆ. ಅವರು ಬಿಡುವಾಗಿದ್ದರೆ ತರಕಾರಿ ಹೆಚ್ಚಿಕೊಡುವುದು ಮುಂತಾದ ಸಹಾಯ ಮಾಡುತ್ತಾರೆ. – ನಿಮ್ಮ ಮಗನ ಸ್ವಭಾವ ಹೇಗೆ? ತುಂಬಾ ಕೀಟಲೆ ಮಾಡ್ತಾನ?
ನಮ್ಮ ಮಗ ತುಂಬಾ ಪಾಪ. ಯಾವುದಕ್ಕೂ ಹೆಚ್ಚು ಹಠ ಮಾಡುವುದಿಲ್ಲ. ಹೇಳಿದ ಮಾತು ಕೇಳ್ತಾನೆ. ಅವನಪ್ಪನಂತೆ ಅವನದ್ದೂ ಮಾತೇ ಮಾತು. ಸೂಪರ್ ಹೀರೋಗಳ ಫ್ಯಾನ್ ಅವನು. ನಾವಿಬ್ಬರೂ ಸೇರಿ ಸೂಪರ್ ಹೀರೋಗಳಂತೆ ಆ್ಯಕ್ಟ್ ಮಾಡುತ್ತೇವೆ. ಅವನು ಕ್ಯಾಪ್ಟನ್ ಅಮೆರಿಕ, ನಾನು ಫೊÅàಜನ್ ಬ್ಯೂಟಿ. ಇಬ್ಬರೂ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುತ್ತೇವೆ. ಕೆಲವೊಮ್ಮೆ ತುಂಬಾ ತಲೆ ತಿಂತಾನೆ. ಅವನನ್ನು ಒಬ್ಬನೇ ಬಿಟ್ಟು ಎಲ್ಲಿ ಹೋಗಲೂ ಮನಸ್ಸೇ ಬರುವುದಿಲ್ಲ. -ಸೃಜನ್‌ರಲ್ಲಿ ನಿಮಗೆ ಇಷ್ಟವಾಗುವ ಗುಣಗಳು ಯಾವುವು?
ಅವರು ಜನರನ್ನು ಪ್ರೀತಿಸುವ ಪರಿಯೇ ನನಗೆ ಇಷ್ಟ. ನಮ್ಮ ಪ್ರೊಡಕ್ಷನ್ ಸಿಬ್ಬಂದಿ ಜೊತೆಯೂ ಅವರು ಯಾವತ್ತೂ ಬಾಸ್ ರೀತಿ ವರ್ತಿಸುವುದಿಲ್ಲ. ಎಲ್ಲರನ್ನೂ ತಮ್ಮ ಮನೆಯವರಂತೆಯೇ ಕಾಣುತ್ತಾರೆ. ಹಿಡಿದ ಕೆಲಸ ಎಷ್ಟೇ ಕಷ್ಟವಿದ್ದರೂ ಮಾಡಿ ಮುಗಿಸುತ್ತಾರೆ ಇವೆಲ್ಲಾ ನನಗೆ ಇಷ್ಟ. ಇಂಥ ಅತ್ತೆ ಎಷ್ಟು ಜನರಿಗಿದ್ದಾರೆ?
ಮದುವೆಯಾಗಿ 3ನೇ ವರ್ಷಕ್ಕೆ ನನ್ನ ಕಥಕ್ ಆರಂಗ್ರೇಟಂ ಆಯಿತು. ಆ ಸಮಯದಲ್ಲಿ ಅತ್ತೆ ನೀಡಿದ ಪ್ರೋತ್ಸಾಹವನ್ನಂತೂ ನಾನು ಮರೆಯಲಾರೆ. ಕಡೇ ಕ್ಷಣಗಳ ರಿಹರ್ಸಲ್ ಮನೆಯಲ್ಲೇ ಆಗುತ್ತಿತ್ತು. ನಮ್ಮತ್ತೆಯವರೂ ಕಥಕ್ ಕಲಾವಿದೆ. ನಾನು ಅಭ್ಯಾಸ ಮಾಡುವಾಗ ಒಂದು ಖುರ್ಚಿ ಹಾಕಿ ಕುಳಿತುಕೊಂಡು ನನ್ನ ಸ್ಟೆಪ್ಸ್, ಹಾವಭಾವಗಳನ್ನು ತಿದ್ದುತ್ತಿದ್ದರು. ಅವರೇ ಆಮಂತ್ರಣ ಪತ್ರಿಕೆ ಬರೆದು ಅದನ್ನು ಪ್ರಿಂಟ್ ಮಾಡಿಸಿ ಸ್ನೇಹಿತರು, ನೆಂಟರಿಗೆಲ್ಲಾ ಹಂಚಿ ಬಂದಿದ್ದರು. ಅತ್ತಿಗೆ ಶಿಲ್ಪಾರ ಸ್ನೇಹಿತರೊಬ್ಬರಿಂದ ವಸ್ತ್ರ ವಿನ್ಯಾಸ ಮಾಡಿಸಿಕೊಟ್ಟಿದ್ದರು. ಇಡೀ ಪ್ರದರ್ಶನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿದ್ದರು. ಇಂಥ ಅತ್ತೆ ಎಷ್ಟು ಜನಕ್ಕೆ ಸಿಗಲು ಸಾಧ್ಯ? ಸಾವಿರ ಜನ ಬಂದರೂ ಊಟ ಬಡಿಸ್ತೇವೆ
ನಮ್ಮ ಕುಟುಂಬಕ್ಕೆ ಒಂದು ಧ್ಯೇಯ ಸೂತ್ರವಿದೆ. “ನಮ್ಮ ಕೈ ಯಾವತ್ತೂ ನೆಲ ನೋಡಬೇಕೇ ಹೊರತು ಆಕಾಶ ನೋಡಬಾರದು’ ಅಂತ. ನಮ್ಮ ಮನೆಗೆ ಕಷ್ಟ ಅಂತ ಬಂದವರನ್ನು ನಾವು ಖಾಲಿ ಕೈಯಲ್ಲಿ ಕಳಿಸುವುದಿಲ್ಲ. ಸಹಾಯ ಕೇವಲ ಹಣದ್ದಲ್ಲ, ಮಾನಸಿಕವಾಗಿ ಕೂಡ ನಾವು ಕಷ್ಟದಲ್ಲಿ ಇರುವವರ ಜೊತೆಗೆ ನಿಲ್ಲುತ್ತೇವೆ. ನಮಗೆ ಹೆಚ್ಚು ಹೆಚ್ಚು ಹಣ ಮಾಡಬೇಕು, ಇನ್ನೂ ಐಷಾರಾಮಿಯಾಗ ಬದುಕಬೇಕು ಅಂತ ಬಯಕೆಗಳಿಲ್ಲ. ನಮ್ಮ ಮನೆಗೆ 1000 ಜನ ಬಂದರೂ ಊಟ ಹಾಕುವ ಶಕ್ತಿಯನ್ನು ದೇವರು ನಮಗೆ ಕೊಟ್ಟಿದ್ದಾನೆ. ಅಷ್ಟೇ ಸಾಕು. ಮದುವೆಯಾದರೆ ಸಾಕು ಅನಿಸಿತ್ತು
ಪ್ರೀತಿಸುವ ಸಮಯದಲ್ಲಿ ಸೃಜ ಇನ್ನೂ ಮೀಡಿಯಾ ಉದ್ಯಮದಲ್ಲಿ ಗಟ್ಟಿಯಾಗಿ ನೆಲೆಯೂರಿರಲಿಲ್ಲ. ಒಂದು ಸಮಯದಲ್ಲಿ ಬೇಸರದಿಂದ “ನಾವು ಮದುವೆಯಾಗುವುದೇ ಬೇಡ. ನಿನ್ನನ್ನು ಸಾಕೋಕೆ ನನಗೆ ಆಗಲ್ಲ’ ಅಂತ ಹೇಳಿದ್ದರು. ಆಗ ನಾನೇ ಅವರನ್ನು ಸಮಾಧಾನಿಸಿದ್ದೆ. ನಮ್ಮ ನೆಂಟರೆಲ್ಲಾ “ಹೇಳಿ ಕೇಳಿ ಇವಳು ಸಿನಿಮಾದವನನ್ನು ಲವ್ ಮಾಡ್ತಾ ಇದ್ದಾಳೆ. ಅವನು ಖಂಡಿತಾ ಕೈ ಕೊಡ್ತಾನೆ’ ಅಂತ ಹೆದರಿಸುತ್ತಿದ್ದರು. “ಅವರು ನಾನ್‌ವೆಜ್ ತಿಂತಾರೆ. ಅವರ ಸಂಪ್ರದಾಯಗಳು ಬೇರೆ ರೀತಿಯೇ ಇರುತ್ತವೆ. ನಿನಗೆ ಅವರ ಮನೆಯಲ್ಲಿ ಹೊಂದಿಕೊಳ್ಳೋಕೆ ಆಗಲ್ಲ. ಒಂದು ತಿಂಗಳೂ ನೀನು ಅಲ್ಲಿ ಇರಲ್ಲ’ ಅಂತೆಲ್ಲ ನೇರವಾಗಿ ಹೇಳ್ತಾ ಇದ್ರು. ಹಾಗಾಗಿ, ಒಮ್ಮೆ ನಮ್ಮ ಮದುವೆಯಾದರೆ ಸಾಕು. ಮುಂದಿನದ್ದನ್ನು ಹೇಗಾದರೂ ನಿಭಾಯಿಸುತ್ತೇನೆ. ಇವರಿಗೆಲ್ಲಾ ನನ್ನ ಆಯ್ಕೆ ಸರಿ ಅಂತ ತೋರಿಸಿಕೊಡ್ತೀನಿ ಅಂತನ್ನಿಸುತ್ತಿತ್ತು – ಗ್ರೀಷ್ಮಾ ಸೃಜನ್ ಲೋಕೇಶ್