ದೇಹದ ಸಮತೋಲಿತ ಕಾರ್ಯನಿರ್ವಹಣೆಗೆ ಅಂಗಾಂಗಗಳ ಪಾತ್ರ ಮಹತ್ವದ್ದಾಗಿದೆ. ದೇಹದಲ್ಲಿರುವ ಪ್ರಮುಖ ಅಂಗಾಂಗಗಳಲ್ಲಿ ಲಿವರ್ ಕೂಡ ಒಂದು. ಇದು
ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯ ಮಾಡುತ್ತದೆ.ಆಹಾರದಲ್ಲಿರುವ ನಾರಿನಾಂಶ, ಆ್ಯಂಟಿಆಕ್ಸಿಡೆಂಟ್ ಗಳು ಲಿವರ್‌ನಿಂದ ವಿಷಕಾರಿ ತ್ಯಾಜ್ಯ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ನಮ್ಮ ದೇಹಕ್ಕೆ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತಿತರ ಪೋಷಕಾಂಶಗಳು
ಯಾವ ಪ್ರಮಾಣದಲ್ಲಿ ಸಿಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ.
ಲಿವರ್ ಕಾರ್ಯನಿರ್ವಹಣೆಗೆ ಅಡ್ಡಿಯಾದರೆ ಯಕೃತ್ ಗೆ ತೊಂದರೆಯಾಗುತ್ತದೆ. ಹೀಗಾಗಿ ಲೀವರ್‌ನ ಆರೋಗ್ಯ ಕಾಪಾಡಬೇಕಾಗಿರುವುದು ಅತ್ಯಗತ್ಯ. ಲೀವರ್ ಆರೋಗ್ಯ ಕಾಪಾಡುವಲ್ಲಿ ಗಿಡಮೂಲಿಕೆಯ ಚಹಾ ಹೆಚ್ಚು ಪ್ರಯೋಜನಕಾರಿಯಾಗಿದೆ.
ಸಾಮಾನ್ಯವಾಗಿ ದೇಹದ ತೂಕ ಇಳಿಸಲು ನಾವು ಸೇವಿಸುವ ಗ್ರೀನ್ ಟೀಗೆ ಸ್ವಲ್ಪ ಅರಿಸಿನ ಬೆರೆಸಿ ಸೇವನೆ ಮಾಡಿದರೆ ಸಾಕಷ್ಟು ಲಾಭವಿದೆ. ಗ್ರೀನ್ ಟೀಯಲ್ಲಿ ಅಪಾರ ಪ್ರಮಾಣ ಆ್ಯಂಟಿಆಕ್ಸಿಡೆಂಟ್ ಗಳಿದ್ದು, ದೇಹದಲ್ಲಿರುವ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕುತ್ತವೆ.
ಇದು ಲಿವರ್‌ನ ಆರೋಗ್ಯವನ್ನು ಕಾಪಾಡುತ್ತದೆ. ಇದಕ್ಕೆ ಅರಿಸಿನ ಸೇರಿಸಿ ಕುಡಿಯುವುದು ಹೆಚ್ಚು ಉಪಯುಕ್ತ. ಯಾಕೆಂದರೆ ಅರಿಸಿನದಲ್ಲಿ ಔಷಧೀಯ ಗುಣವಿದೆ. ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇರುವ ಅರಿಸಿನವು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ಯಕೃತ್‌ನ ಆರೋಗ್ಯವನ್ನು ಕಾಪಾಡುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಸಿನ ಬೆರೆಸಿದ ಗ್ರೀನ್ ಟೀ ಕುಡಿಯುವುದು ಉತ್ತಮ. ಇದರಿಂದ ಸದೃಢ ಆರೋಗ್ಯ ನಮ್ಮದಾಗುವುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ದಿನದಲ್ಲಿ ಒಂದೆರಡು ಬಾರಿ ಕೇವಲ ಒಂದು ಕಪ್‌ನಷ್ಟು ಮಾತ್ರ ಸೇವಿಸಬಹುದು.