Advertisement
ಈ ರೈಲು ಸಂಪರ್ಕವನ್ನು ಕಂಕನಾಡಿಯಿಂದ ಮಂಗಳೂರು ಜಂಕ್ಷನ್‌ಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಪಾಲಾ^ಟ್ ವಿಭಾಗವು ದಕ್ಷಿಣ ರೈಲ್ವೇ ವಲಯದ ಕೇಂದ್ರ ಕಚೇರಿಯಾದ ಚೆನ್ನೈಗೆ ಈಗಾಗಲೇ ಕಳುಹಿಸಿದೆ. ಆದರೆ ಈ ಪ್ರಸ್ತಾವನೆ ಅನುಮೋದನೆಗೊಳ್ಳಬೇಕಾದರೆ ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ (ಝಡ್‌ಆರ್‌ಯುಸಿಸಿ) ಸಮ್ಮತಿ ಅವಶ್ಯವಿದೆ. ಸಲಹಾ ಸಮಿತಿ ಸಭೆಯು ಕಳೆದ ಜೂನ್‌ನಲ್ಲಿ ನಡೆದಿದ್ದು, ಇನ್ನೊಂದು ಸಭೆ ಮುಂದಿನ ನವೆಂಬರ್ ವೇಳೆಗೆ ನಡೆಯುವ ಸಾಧ್ಯತೆಯಿದೆ. ಒಂದುವೇಳೆ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡನೆಯಾಗಿ ರೈಲಿನ ವಿಸ್ತರಣೆ ಹಾಗೂ ರೈಲುಗಳ ಸ್ಥಳಾಂತರದ ಬಗ್ಗೆ ಸದಸ್ಯರಿಂದ ಯಾವುದೇ ಆಕ್ಷೇಪಣೆಗಳು ಬರದಿದ್ದರೆ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ. ಹೀಗಿರುವಾಗ ಸದ್ಯಕ್ಕೆ “ಗೋಮಟೇಶ್ವರ ಎಕ್ಸ್‌ಪ್ರೆಸ್’ ಸದ್ಯಕ್ಕೆ ವಿಸ್ತರಣೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.
ಫಾರಂನ್ನು ಹೊಂದಿಸಿಕೊಳ್ಳಲು ಪ್ರಸ್ತುತ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ರೈಲು ಗಳಲ್ಲಿ ಜನಪ್ರಿಯವಲ್ಲದ 3 ರೈಲುಗಳನ್ನು ಸ್ಥಳಾಂತರ ಪ್ರಸ್ತಾವನೆಯನ್ನು ಕೂಡ ಪಾಲಕ್ಕಾಡ್ ವಿಭಾಗವು ಮಂಡಿಸಿದೆ. ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಕಾಚಿಗೊಡ ಎಕ್ಸ್‌ಪ್ರೆಸ್, ಮಂಗಳೂರು ಸೆಂಟ್ರಲ್- ಪುದುಚೇರಿ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು ಸೆಂಟ್ರಲ್ -ಚೆನ್ನೈ ಎಗೊ¾àರ್ ಎಕ್ಸ್‌ಪ್ರೆಸ್ ರೈಲುಗಾಡಿ ನಿಲುಗಡೆಯನ್ನು ಕಂಕನಾಡಿ ಜಂಕ್ಷನ್‌ಗೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.
Related Articles
Advertisement
ಶೀಘ್ರ ಅನುಷ್ಠಾನದ ಕ್ರಮ ಅವಶ್ಯಝಡ್ಆರ್ಯುಸಿಸಿ ಸಭೆ ಜೂ. 13ರಂದು ನಡೆದಿದೆ. ಮುಂದಿನ ಸಭೆಗೂ ಇನ್ನೂ 3ರಿಂದ 4 ತಿಂಗಳ ಬಳಿಕ ನಡೆಯುವ ಸಾಧ್ಯತೆಗಳಿವೆ. ಈ ಹಂತದಲ್ಲಿ ವಲಯ ಅಧಿಕಾರಿಗಳು ರೈಲು ವಿಸ್ತರಣೆ ಹಾಗೂ ಇದಕ್ಕಾಗಿ ಮೂರು ರೈಲುಗಳ ಸ್ಥಳಾಂತರದ ಬಗ್ಗೆ ಸದಸ್ಯರಿಗೆ ಲಿಖೀತವಾಗಿ ಪತ್ರ ಬರೆದುಅವರ ಅಭಿಪ್ರಾಯ ಕೋರಲು ಅವಕಾಶವಿದೆ. ಇದರಿಂದ ಪ್ರಸ್ತಾವನೆ ಶೀಘ್ರ ಕಾರ್ಯ ರೂಪಕ್ಕೆ ಬರಲು ಸಾಧ್ಯವಾಗಬಹುದು. ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ಹಗಲು ರೈಲಿನ (ನಂ. 16515/516) ಸಂಚಾರವನ್ನು ತುಮಕೂರು ಬದಲಿಗೆ ನೆಲಮಂಗಲ-ಶ್ರವಣಬೆಳಗೊಳ ಮೂಲಕ ವರ್ಗಾಯಿಸುವ ಸಂದರ್ಭದಲ್ಲಿ ಅಧಿಕಾರಿಗಳು ಈ ಕ್ರಮವನ್ನು ಅನುಸರಿಸಿದ್ದರು. ಪ್ರಯಾಣಿಕರ ಸದ್ಯದ ಸಮಸ್ಯೆ
ಪ್ರಸ್ತುತ ಗೋಟೇಶ್ವರ ಎಕ್ಸ್‌ಪ್ರೆಸ್‌ನ ಸಂಚಾರ ವ್ಯವಸ್ಥೆಯಿಂದ ಮಂಗಳೂರಿನಲ್ಲಿ ಮತ್ತು ಬೆಂಗಳೂರು ಎರಡೂ ಕಡೆಗಳಲ್ಲಿ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ನಗರದೊಳಗೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಪ್ರಯಾಣಿ ಕರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಶವಂತಪುರದಿಂದ ಕಂಕನಾಡಿ ಜಂಕ್ಷನ್‌ಗೆ ಆಗಮಿಸಲು ರೈಲು ಪ್ರಯಾಣಕ್ಕೆ ತೆರಬೇಕಾದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಕಂಕನಾಡಿ ಜಂಕ್ಷನ್‌ನಿಂದ ಮಂಗಳೂರು ನಗರಕ್ಕೆ ವಿನಿಯೋಗಿಸಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ. ಈ ವೇಳಾಪಟ್ಟಿ ಪ್ರಯಾಣಿಕರಿಗೆ ಪೂರಕವಾಗಿಲ್ಲ. ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪುವುದರಿಂದ ಅಲ್ಲಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಸಮಸ್ಯೆಗಳಾಗುತ್ತಿವೆ ಎಂಬುದು ಪ್ರಯಾಣಿಕರ ಅಭಿಪ್ರಾಯ. ಮಂಗಳೂರು ಜಂಕ್ಷನ್-ಯಶವಂತಪುರ- ಮಂಗಳೂರು ಹಗಲು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬ ಪ್ರಸ್ತಾವನೆ ಯನ್ನು ಪಾಲಾ^ಟ್ ವಲಯದಿಂದ ಈಗಾಗಲೇ ಕಳುಹಿಸಲಾಗಿದೆ. ಜನಪ್ರಿಯವಲ್ಲದ ಮೂರು ರೈಲುಗಳನ್ನು ಮಂಗಳೂರು ಜಂಕ್ಷನ್‌ಗೆ ವರ್ಗಾಯಿಸುವುದು ಈ ಪ್ರಸ್ತಾವನೆಯಲ್ಲಿ ಒಳಗೊಂಡಿದೆ. ಝಡ್‌ಆರ್‌ಸಿಸಿ ಸಭೆಯ ಸಮ್ಮತಿ ಇದಕ್ಕೆ ಅವಶ್ಯವಿದೆ. ಅಲ್ಲಿ ಯಾವುದೇ ಆಕ್ಷೇಪಗಳು ಬರದಿದ್ದರೆ ಅನುಮೋದನೆ ನಿಟ್ಟಿನಲ್ಲಿ ದಕ್ಷಿಣ ರೈಲ್ವೇ ಮುಂದಿನ ಕ್ರಮ ಕೈಗೊಳ್ಳಲಿದೆ.
– ನರೇಶ್ ಲಾಲ್ವಾನಿ, ಡಿಆರ್‌ಎಂ,
ರೈಲ್ವೇ ಪಾಲಕ್ಕಾಡ್ ವಿಭಾಗ – ಕೇಶವ ಕುಂದರ್