ಅಫಜಲಪುರ: ಯಾವ ಪಕ್ಷದ ಸರ್ಕಾರಗಳಿದ್ದರೂ ಕೂಡ ನಮ್ಮ ಹೋರಾಟವಿಲ್ಲದೆ ಯಾರು ಬೇಡಿಕೆ ಈಡೇರಿಸಿದ ಉದಾಹರಣೆಗಳಿಲ್ಲ. ಹೀಗಾಗಿ ರೈತರ ನೆಮ್ಮದಿಯ ಬದುಕಿಗಾಗಿ ಮತ್ತೂಂದು ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.
ಪಟ್ಟಣದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಗರ ಘಟಕ ಉದ್ಘಾಟನೆ ಹಾಗೂ ಕಬ್ಬು ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿರು ಶಲ್ಯ ರೈತರ ಸ್ವಾಭಿಮಾನದ ಸಂಕೇತವಾಗಿದೆ. ಅದನ್ನು ರೈತರು ಹೆಗಲ ಮೇಲಿಂದ ಕೆಳಗಿಡಬೇಡಿ. ಹಸಿರು ಶಲ್ಯ ಧರಿಸಿ ಯಾರು ದುಶ್ಚಟಗಳನ್ನು ಮಾಡಬೇಡಿ. ಇದರಿಂದ ರೈತರಿಗೆ ಮುಜುಗರ ಆಗುತ್ತಿದೆ. ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಬಿಟ್ಟು ಎತ್ತು, ಎಮ್ಮೆ ಆಕಳಿನ ಗೊಬ್ಬರ ಹೆಚ್ಚು ಬಳಕೆ ಮಾಡಿ ಎಂದರು.
ಕಬ್ಬು ಬೆಳೆಗಾರರ ತಾಲೂಕಾಧ್ಯಕ್ಷ ರಮೇಶ ಹೂಗಾರ ಮಾತನಾಡಿ, ರೈತರ ಕಬ್ಬಿಗೆ ಸರಕಾರ ಎಫ್‌ಆರ್‌ಪಿ ದರ ಪ್ರಕಾರ ಬೆಲೆ ನೀಡದೆ ಮೋಸ ಮಾಡುತ್ತಿದೆ. ಕಾರ್ಖಾನೆಗಳ ವಿರುದ್ಧ ಹೊರಾಟ ರೂಪಿಸೋಣ ಎಂದರು. ಸಿದ್ರಾಮಪ್ಪ ಪಾಟೀಲ್, ಧರ್ಮರಾವ್ ಸಾಹು, ನಾಗೇಂದ್ರ ದೇಶಮುಖ, ಮಹಾದೇವಪ್ಪ ಶೇರಿಕಾರ, ನರಹರಿ ಪಾಟೀಲ್, ಬಸವರಾಜ ಪಾಟೀಲ್, ಶಾಂತವೀರಪ್ಪ ದಸ್ತಾಪುರ, ಶರಣು ಬಿಲ್ಲಾಡ, ಲಕ್ಷ್ಮೀಪುತ್ರ ಮನ್ಮಿ, ಭಾಗಣ್ಣ ಕುಂಬಾರ, ರಾಜು ಉಂಡಿ, ಸತೀಶ ಉಡಗಿ, ಸುರೇಶ ನಿಂಬಾಳ, ಜಗದೀಶ ಹಿರೇಮಠ, ಮಸವರಾಜ ಹಳಿಮನಿ, ರಾಜಕುಮಾರ ಬಡದಾಳ, ದರೇಪ್ಪ ಡಾಂಗೆ, ರವೀಂದ್ರ ಗುಂಡಪ್ಪಗೋಳ, ಎ.ಬಿ. ಪಾಟೀಲ್, ಹಣಮಂತ ಗುಳೇದ ಮುಂತಾದವರು ಇದ್ದರು.