Advertisement
ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಹಿತಕಾರವಾಗಿರುವ ಹೆಸರುಕಾಳು,ದೇಹದ ತಾಪವನ್ನು ಕಡಿಮೆ ಮಾಡುವ ಪೌಷ್ಟಿಕಾಂಶವನ್ನು ವರ್ಧಿಸುವ ಆಹಾರ. ಹೆಸರುಕಾಳಿನ ಸೇವನೆಯನ್ನು ಮತ್ತಷ್ಟು ರುಚಿಗೊಳಿಸುವ ಹೆಸರು ಕಾಳಿನ ಚಾಟ್ ಹಾಗೂ ಹೆಸರು ಕಾಳಿನ ದೋಸೆಯ ಪಾಕವಿಧಾನಗಳು ಇಲ್ಲಿವೆ.
ಬೇಕಾಗುವ ಸಾಮಗ್ರಿಗಳು
ಉಪ್ಪು ಹಾಕಿ ಬೇಯಿಸಿದ ಹೆಸರುಕಾಳು 2ಕಪ್, ಟೊಮೇಟೋ 1/2 ಕಪ್, ಈರುಳ್ಳಿ 1/2 ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರಾ ಸೇವ್ 2 ಚಮಚ. ಹುಳಿ-ಸಿಹಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಪುದೀನ ಸೊಪ್ಪು 1ಕಪ್ , ಹುಣಿಸೇ ಹುಳಿ ಸ್ವಲ್ಪ , ಬೆಲ್ಲದ ಪುಡಿ 2 ಚಮಚ , ಹಸಿ ಮೆಣಸಿನ ಕಾಯಿ 3 , ಗರಂ ಮಸಾಲೆ ಪುಡಿ 1 ಚಮಚ, ಜೀರಿಗೆ ಪುಡಿ 1ಚಮಚ ಉಪ್ಪು ರುಚಿಗೆ ತಕ್ಕಷ್ಟು .
Related Articles
ಪುದೀನಾ ಸೊಪ್ಪು ,ಹುಣಿಸೇ ಹುಳಿ ,ಬೆಲ್ಲ ,ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿರಿ. ಅದಕ್ಕೆ ಗರಂ ಮಸಾಲ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹುಳಿ-ಸಿಹಿ ಚಟ್ನಿ ತಯಾರಿಸಿಕೊಳ್ಳಿ.
Advertisement
ಒಂದು ತಟ್ಟೆಗೆ ಬೇಯಿಸಿದ ಹೆಸರುಕಾಳು ಹರಡಿ. ಅದರ ಮೇಲೆ ಚಟ್ನಿಯ ಒಂದು ಪದರ ಹರಡಿ ಮತ್ತೆ ಹೆಸರುಕಾಳು ಹರಡಿ.ಆಮೇಲೆ ಹೆಚ್ಚಿದ ಈರುಳ್ಳಿ ,ಟೊಮೇಟೋ,ಖಾರಾ ಸೇವ್ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.
ಹೆಸರು ಕಾಳಿನ ದೋಸೆಬೇಕಾಗುವ ಸಾಮಗ್ರಿಗಳು
ಮೊಳಕೆ ಬರಿಸಿದ ಹೆಸರುಕಾಳು 1/2ಪ್ ,ಹಸಿಮೆಣಸಿನ ಕಾಯಿ 4 ,ಶುಂಠಿ ಸ್ವಲ್ಪ , ಬೆಳ್ತಿಗೆ ಅಕ್ಕಿ 1ಕಪ್ ,ಅವಲಕ್ಕಿ 1/4 ಕಪ್ ,ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಒಂದು ದಿನ ಮುಂಚೆ ಹೆಸರುಕಾಳು ನೆನೆಸಿ ಮೊಳಕೆ ಮಾಡಿಟ್ಟುಕೊಳ್ಳಿ .ನಂತರ ಅಕ್ಕಿ ಮತ್ತು ಅವಲಕ್ಕಿ ಸುಮಾರು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ಆಮೇಲೆ ಮೊಳಕೆ ಬಂದ ಹೆಸರಕಾಳು, ಹಸಿಮೆಣಸಿನಕಾಯಿ , ಶುಂಠಿ ,ಅಕ್ಕಿ ,ಅವಲಕ್ಕಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿರಿ. 10 ರಿಂದ 15 ನಿಮಿಷದ ನಂತರ ತೆಳ್ಳಗೆ ದೋಸೆ ಮಾಡಿ ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಿರಿ.