Advertisement
ಪ್ರವಚನಗಳಲ್ಲಿ, ಅಣೇಕಟ್ಟು ವಿರೋಧಿ ಹೋರಾಟದಲ್ಲಿ ಮಾತ್ರ ಕಾಣಿಸಿಕೊಳ್ಳದೇ, ಸಮಷ್ಟಿ ಪರಿಸರದ ಉಳಿಸಿಗೆ ಸ್ವತಃ ಗಿಡಗಳನ್ನೂ ಈ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳು ಶಿಷ್ಯರಿಗೆ ನೀಡುತ್ತಿರುವದು ಹಾಗೂ ವರ್ಷದಿಂದ ವರ್ಷಕ್ಕೆ ಪರಿಸರ ಸಂರಕ್ಷಣೆಯ ಈ ಯಜ್ಞದ ವಿಸ್ತಾರ ನಡೆಸುತ್ತಿರುವದು ಮಾದರಿಯ ಕೈಂಕರ್ಯವಾಗಿದೆ.
ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಇದು ಯಾವತ್ತಿನ ಕ್ರಮ, ಸಂಪ್ರದಾಯ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ ಗುರುಗಳು ಪವಿತ್ರ ಆಶೀರ್ವಚನದ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಸ್ವೀಕರಿಸಿದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಶ್ರೀಗಳು ವೃಕ್ಷ ಮಂತ್ರಾಕ್ಷತೆ ಕೂಡ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲೂ ಶ್ರೀಗಳು ಸೂಚಿಸುತ್ತಾರೆ. 85 ಸಾವಿರಕ್ಕೂ ಹೆಚ್ಚು!
ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಶ್ರೀಸರ್ವಜ್ಞೇಂದ್ರ ಸರಸ್ವತೀ ಶ್ರೀಗಳೂ ಪರಿಸರ ಕಾಳಜಿ ಹೊಂದಿದ್ದರು. 33 ವರ್ಷಗಳ ಹಿಂದೆ ಪೀಠಾರೋಹರಾದ ಈಗಿನ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳಿಗೆ ಹಸಿರು ಎಂದರೆ ತುಂಬಾ ಕಾಳಜಿ.
ವೃಕ್ಷಾರೋಪಣ, ಸಸ್ಯ ಲೋಕ ಸೃಷ್ಟಿಯ ಜೊತೆಗೆ 2006ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ. ಈ ಬಾರಿ ಮಠದ ಈ ಕೈಂಕರ್ಯಕ್ಕೆ ಅರಣ್ಯ ಇಲಾಖೆ ಅಪರೂಪದ ವನಸ್ಪತಿ ಗಿಡಗಳನ್ನೂ ನೀಡಿದೆ. ಸ್ವರ್ಣವಲ್ಲೀ ಶ್ರೀಗಳ ಈ ಸಮಾಜಮುಖಿ ಆಶಯಕ್ಕೆ ಇಲಾಖೆ ಕೂಡ ಹೆಗಲು ನೀಡಿದೆ.
Related Articles
Advertisement
ಶಿಷ್ಯರಲ್ಲಿ ಪರಿಸರ ಪ್ರೀತಿಯನ್ನು ಬಿತ್ತಿ, ಪ್ರಕೃತಿಯ ಸಂರಕ್ಷಣೆಗೆ ಆಯ್ದುಕೊಂಡ ಮಾರ್ಗ. ಗಿಡಗಳನ್ನು ವಿತರಿಸುವಾಗ ನಮಗೆ ಖುಷಿ ಇದೆ. ಶಿಷ್ಯರೂ ಗಿಡ ನೆಟ್ಟು ಬೆಳೆಸುತ್ತಿರುವದು ಗಮನಕ್ಕಿದೆ– ಸ್ವರ್ಣವಲ್ಲೀ ಶ್ರೀ
ಸ್ವರ್ಣವಲ್ಲೀ ಪೀಠದಿಂದ ಶಿಷ್ಯರಲ್ಲಿ ಇಂತಹ ವೃಕ್ಷ ಮಂತ್ರಾಕ್ಷತೆ ಅಭಿಯಾನ ನಡೆಸಿ ವೃಕ್ಷ ಪ್ರೀತಿ ಬೆಳಸುವದು ಇಡೀ ರಾಜ್ಯಕ್ಕೆ ಮಾದರಿ. ಪರಿಸರ ಸಂರಕ್ಷಣೆಗೆ ಇಂಥ ಸಹಭಾಗಿತ್ವದ ಕೊಡುಗೆಗಳು ಕೂಡ ದೊಡ್ಡವು– ಡಾ. ಅಜ್ಜಯ್ಯ, ಡಿಎಫ್‌ಒ , ಶಿರಸಿ