Advertisement

ನೂತನ ಬಸ್‌ ಮಾರ್ಗಕ್ಕೆ ಹಸಿರು ನಿಶಾನೆ

11:56 AM Feb 27, 2017 | Team Udayavani |

ಕೆಂಗೇರಿ: ನಿತ್ಯ ಸಾರ್ವಜನಿಕರು ಬಿಎಂಟಿಸಿ ಬಸ್‌ಗಾಗಿ 2 ಕಿ.ಮೀ. ನಡೆದುಕೊಂಡು ಬರಬೇಕಾಗಿತ್ತು. ಇದನ್ನು ತಪ್ಪಿಸಿ ಕೆ.ಆರ್‌.ಮಾರ್ಕೆಟ್‌, ಶಿವಾಜಿನಗರ, ಕೆಂಪೇಗೌಡ ಬಸ್‌ನಿಲ್ದಾಣಕ್ಕೆ ನೇರ ಬಸ್‌ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಮುನಿರತ್ನ ತಿಳಿಸಿದರು. ಮಲ್ಲತ್ತಹಳ್ಳಿ ಹೊಸ ಬಡಾವಣೆ, ಐಟಿಐ ಬಡಾವಣೆ, ಎನ್‌ಜಿಇಎಫ್ ಬಡಾವಣೆಗಳಿಂದ ಹೊಸದಾಗಿ ಪ್ರಾರಂಭಿಸಿರುವ ಬಿಎಂಟಿಸಿ ಮಾರ್ಗದ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಮಲ್ಲತ್ತಹಳ್ಳಿ ಕೆರೆಗೆ ವಿಶ್ವೇಶ್ವರಯ್ಯ ಬಡಾವಣೆ, ಡಿ ಗ್ರೂಪ್‌ ಬಡಾವಣೆಯ ಶೌಚಾಲಯದ ನೀರು ಬಂದು ಸೇರುತ್ತಿದ್ದು, ಕೆರೆ ವಿನಾಶದ ಅಂಚಿನಲ್ಲಿದೆ. ವಿಶ್ವೇಶ್ವರಯ್ಯ ಬಡಾವಣೆಯು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವುದರಿಂದ ಶಾಸಕ ಎಸ್‌.ಟಿ.ಸೋಮಶೇಖರ್‌ ಜೊತೆ ಚರ್ಚಿಸಿ ಮುಂದಿನ 6 ತಿಂಗಳೊಳಗೆ ಕೆರೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಮುಂದಿನ ಬಿಬಿಎಂಪಿ ಬಜೆಟ್‌ನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಅನುದಾನ ನೀಡಲು ಕ್ರಮಕೈಗೊಳ್ಳಲಾಗುವುದು. ಶೌಚಾಲಯದ ನೀರು ಕೆರೆಗೆ ಸೇರುವುದನ್ನು ತಪ್ಪಿಸಿ ಅಂತರ್ಜಲ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಪರಿಸರ ಮಾಲಿನ್ಯ ಮಾಡಬಾರದು. ರಸ್ತೆ ಬದಿ, ಮನೆ ಮುಂದೆ, ಖಾಲಿ ಸೈಟು ಹೀಗೆ ಸಿಕ್ಕ ಸಿಕ್ಕ ಕಡೆ ಕಸ ಹಾಕಬಾರದು. ಗಿಡ-ಮರಗಳನ್ನು ರಕ್ಷಿಸಬೇಕು. ಆಗ ಮಾತ್ರ ಮಳೆಯಾಗಿ ಬರಗಾಲ ಮಾಯವಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next