Advertisement
ನಗರದ ಸರ್‌ಎಂವಿ ಒಳಾಂಗಣ ಕ್ರೀಡಾಂಗಣದಲ್ಲಿ ಸುಮಾರು 10ಕ್ಕೂ ಹೆಚ್ಚು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಗ್ರಾಹಕರು ಪಟಾಕಿ ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ.
Related Articles
Advertisement
ಪಟಾಕಿ ಹೊಡೆಯದಂತೆ ಜಾಗೃತಿ: ಈಗಾಗಲೇ ಕೋವಿಡ್ ಇರುವುದರಿಂದ ಪಟಾಕಿ ಹೊಡೆಯದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಹೊಡೆದರೆ ಕೋವಿಡ್ ಹೆಚ್ಚಾಗಬಹುದು. ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಹಬ್ಬದ ಸಂಭ್ರಮದಲ್ಲಿ ಒಂದೆಡೆ ಸೇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಪಟಾಕಿ ಬದಲು ಮರಗಿಡ ನೆಡುವ ಮೂಲಕ ಪರಿಸರ ಕಾಪಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಬಗೆಹರಿಯದ ಗೊಂದಲ : ಹಸಿರು ಪಟಾಕಿ ಮಾರಾಟ ಮಾಡುವಂತೆ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ವರ್ತಕರು ಹೇಳುವುದೇ ಬೇರೆ. ತಿಂಗಳ ಮುಂಚಿತವಾಗಿ ಹಸಿರು ಪಟಾಕಿ ಮಾರಾಟಮಾಡುವಂತೆ ಸೂಚಿಸಬೇಕಿತ್ತು.ಕೊನೇ ಕ್ಷಣದಲ್ಲಿ ಹೇಳಿದ್ದರಿಂದಕಾರ್ಖಾನೆ ಗಳು ಸರಬರಾಜು ಮಾಡುತ್ತಿಲ್ಲ. ಅಲ್ಲದೆ, ಈಗಾಗಲೇ ಸಾಮಾನ್ಯಪಟಾಕಿಗಳಿಗೆ ಬಂಡವಾಳ ಹೂಡ ಲಾಗಿದೆ. ಪರವಾನಗಿಯಲ್ಲೂ ಹಸಿರುಪಟಾಕಿಗಳನ್ನೇಕಡ್ಡಾಯವಾಗಿಮಾರಾಟ ಮಾಡುವಂತೆ ಸೂಚನೆ ನೀಡಿಲ್ಲ. ಈಗಾಗಲೇ ಬಂದಿರುವ ಪಟಾಕಿಗಳನ್ನು ವಾಪಸ್ ಕೊಡಲು ಸಾಧ್ಯವಿಲ್ಲ.ಇದರಿಂದ ನಷ್ಟ ಉಂಟಾಗುತ್ತದೆ. ಮುಂದಿನ ವರ್ಷಕ್ಕೆಎಲ್ಲವೂ ಸರಿಹೋಗಲಿದೆ ಎಂಬುದು ವರ್ತಕರ ವಾದ.
ಹಸಿರು ಪಟಾಕಿಗಳನ್ನೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹಸಿರು ಪಟಾಕಿಗಳಾದರೂ ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಪಾರಂಪರಿಕ ಹಬ್ಬವಾದ ದೀಪಾವಳಿಯನ್ನು ದೀಪಗಳನ್ನು ಹಚ್ಚುವ ಮೂಲಕಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ಜೊತೆಗೆ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನುಕಾಪಾಡಬೇಕು. – ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ, ಮಂಡ್ಯ
ಸರ್ಕಾರಕೈಗೊಂಡ ಗೊಂದಲದಿಂದ ಮಳಿಗೆಗಳನ್ನು ಬೇಗ ತೆರೆಯಲು ಸಾಧ್ಯವಾಗಿಲ್ಲ. ಇಷ್ಟೊತ್ತಿಗೆ ಅರ್ಧದಷ್ಟು ಮಾರಾಟವಾಗುತ್ತಿತ್ತು. ಆದರೆ, ಈ ಬಾರಿ ವಿಳಂಬವಾಗಿ ಅನುಮತಿ ನೀಡಿರುವುದರಿಂದ ವ್ಯಾಪಾರ ಕುಸಿತವಾಗಿದೆ. ಅಲ್ಲದೆ, ಹಸಿರುಪಟಾಕಿಗಳು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ.ಕಾರ್ಖಾನೆಗಳಿಗೆ ಮೊದಲೇ ಸರ್ಕಾರ ಹಸಿರು ಪಟಾಕಿ ತಯಾರಿಕೆಗೆ ಸೂಚನೆ ನೀಡಿದ್ದರೆ, ಪೂರೈಕೆಯಾಗುವಷ್ಟು ಹಸಿರು ಪಟಾಕಿ ಸಿಗುತ್ತಿದ್ದವು. ಆದರೆ ನಿಧಾನವಾಗಿ ಕೈಗೊಂಡ ನಿರ್ಧಾರದಿಂದ ವರ್ತಕರು ನಷ್ಟ ಅನುಭವಿಸಬೇಕಾಗಿದೆ. – ರಾಘವೇಂದ್ರ, ಪಟಾಕಿ ವರ್ತಕ
ಹಸಿರು ಪಟಾಕಿಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಅದಾಗ್ಯೂ ಸಾಮಾನ್ಯ ಪಟಾಕಿಗಳ ಮಾರಾಟ ಕಂಡು ಬಂದರೆ ಅಧಿಕಾರಿಗಳುಕ್ರಮಕೈಗೊಳ್ಳಲಿದ್ದಾರೆ. ಈಗಾಗಲೇ ಎಲ್ಲರಿಗೂ ಇದರ ಬಗ್ಗೆ ಸೂಚನೆ ನೀಡಲಾಗಿದೆ. – ಲೋಕೇಶ್, ಪೌರಾಯುಕ್ತ, ನಗರಸಭೆ, ಮಂಡ್ಯ
– ಎಚ್.ಶಿವರಾಜು