ಬೆಂಗಳೂರು: ನಗರವನ್ನು ಹಸಿರಾ ಗಿಸುವ ಕಾರ್ಯದಲ್ಲಿ ಸಾರ್ವ ಜನಿಕರನ್ನೂ ಪಾಲ್ಗೊಳ್ಳುವಂತೆ ಮಾಡಲು ಬಿಬಿಎಂಪಿಯಿಂದ “ಬಿಬಿಎಂಪಿ ಗ್ರೀನ್’ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಭಾನು ವಾರ ಆ್ಯಪ್‌ಗೆ ಚಾಲನೆ ದೊರೆಯಲಿದೆ.
ಪಾಲಿಕೆಯ 5 ನರ್ಸರಿಗಳಲ್ಲಿ 10 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಜೂನ್ ತಿಂಗಳಲ್ಲಿ ವನಮಹೋತ್ಸವ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಗಿಡಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾ ಗಿಯೇ ಆ್ಯಪ್ ತಯಾರಿಸಲಾಗಿದೆ ಎಂದರು.
ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಭಾನುವಾರದಿಂದಲೇ ಗಿಡಗಳಿಗಾಗಿ ಮನವಿ ಸಲ್ಲಿಸಬಹುದು. ಗಿಡಗಳು ಆಯಾ ವಾರ್ಡ್‌ಗಳಲ್ಲಿನ ಉದ್ಯಾನಗಳಿಗೆ ತಲುಪಿದ ನಂತರ ಸಾರ್ವಜನಿಕರು ತಮಗೆ ಪಾಲಿಕೆಯಿಂದ ಬಂದ ಸಂದೇಶವನ್ನು ತೋರಿಸಿ ಗಿಡ ಪಡೆಯ ಬಹುದು.
ಹೊಂಗೆ, ಮಹಾಗನಿ, ಕಾಡು ಬಾದಾವಿ, ನೇರಳೆ, ನೆಲ್ಲಿ, ಹೊಳೆ ದಾಸವಾಳ, ಬೇವು, ಚೆರಿì, ಸಂಪಿಗೆ ಸೇರಿದಂತೆ 16 ಪ್ರಭೇದದ ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಸಾರ್ವ ಜನಿಕರು ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ,
-ಎಷ್ಟು ಗಿಡಗಳು ಬೇಕು ಎಂದು ಆಯ್ಕೆ ಮಾಡಿದ ನಂತರ ತಾವು ಗಿಡಗಳನ್ನು ಬೆಳೆಸುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಮಾರ್ಕ್ ಮಾಡಬೇಕು ಮತ್ತು ಸಮೀಪದ ಯಾವ ಉದ್ಯಾನದಲ್ಲಿ ಪಡೆಯುವಿರಿ ಎಂಬುದನ್ನು ತಿಳಿಸಬೇಕು. ಪಾಲಿಕೆಯ ಮಹತ್ವಾಕಾಂಕ್ಷೆ ಬಿಬಿ ಎಂಪಿ ಗ್ರೀನ್ ಆ್ಯಪ್‌ನ್ನು ನಗರಾಭಿ ವೃದ್ಧಿ ಸಚಿವರಾದ ಕೆ.ಜೆ.ಜಾರ್ಜ್ ಅವರು ಬಿಡುಗಡೆ ಮಾಡಲಿದ್ದಾರೆ.