Advertisement

Greater Noida ಟೆಸ್ಟ್‌: 4ನೇ ದಿನವೂ ಮಳೆಯಾಟ

12:30 AM Sep 13, 2024 | Team Udayavani |

ಗ್ರೇಟರ್‌ ನೋಯ್ಡಾ: ಅಫ್ಘಾನಿಸ್ಥಾನ- ನ್ಯೂಜಿಲ್ಯಾಂಡ್‌ ನಡುವಿನ ಗ್ರೇಟರ್‌ ನೋಯ್ಡಾ ಟೆಸ್ಟ್‌ ಪಂದ್ಯದ 4ನೇ ದಿನದಾಟವೂ ಮಳೆಯಿಂದ ರದ್ದುಗೊಂಡಿದೆ.

Advertisement

ಗುರುವಾರದ ಆಟ ರದ್ದುಗೊಂಡ ಸುದ್ದಿಯನ್ನು ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಬೆಳಗ್ಗೆ 9.10ಕ್ಕೇ ಪ್ರಕಟಿಸಿತು. ಆಟಗಾರರ್ಯಾರೂ ಸ್ಟೇಡಿಯಂ ಕಡೆ ಸುಳಿಯಲಿಲ್ಲ. ಶುಕ್ರವಾರ ಪರಿಸ್ಥಿತಿ ಅನುಕೂಲಕರವಾಗಿದ್ದರೆ 8 ಗಂಟೆಗೆ ದಿನದಾಟ ಆರಂಭಗೊಳ್ಳಲಿದೆ ಎಂದು ಎಸಿಬಿ ತಿಳಿಸಿದೆ. ಆದರೆ ಇಂಥ ಯಾವುದೇ ಸಾಧ್ಯತೆ ಕಂಡುಬರುತ್ತಿಲ್ಲ. ಆಗ ಟಾಸ್‌ ಕೂಡ ಹಾರಿಸಲಾಗದೆ, ಒಂದೂ ಎಸೆತ ಕಾಣದೆ ರದ್ದುಗೊಂಡ ಅಪರೂಪದ ಟೆಸ್ಟ್‌ ಪಂದ್ಯಗಳ ಸಾಲಿಗೆ ಇದು ಸೇರ್ಪಡೆಯಾಗಲಿದೆ.

ಇದು ಅಫ್ಘಾನಿಸ್ಥಾನ-ನ್ಯೂಜಿಲ್ಯಾಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯವಾಗಿ ದಾಖಲಾಗಬೇಕಿತ್ತು. ಆದರೆ ಈ ಪಂದ್ಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಭಾಗವಾಗಿಲ್ಲ. ನ್ಯೂಜಿಲ್ಯಾಂಡ್‌ ಇನ್ನು 2 ಪಂದ್ಯಗಳ ಸರಣಿಗಾಗಿ ಶ್ರೀಲಂಕಾಕ್ಕೆ ಪಯಣಿಸಲಿದೆ. ಅನಂತರ 3 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ. ಮೊದಲ ಪಂದ್ಯದ ತಾಣ ಬೆಂಗಳೂರು. ಈ ಪಂದ್ಯ ಅ. 16ರಂದು ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.