Advertisement

 ಪಾಕ್‌ ಮಣಿಸಿ ಚಾಂಪಿಯನ್‌ ಆದ ದೀಪಿಕಾಗೆ ಕಾಸರಗೋಡಿನಲ್ಲಿ ಭವ್ಯ ಸ್ವಾಗತ

03:54 PM Jun 22, 2017 | Team Udayavani |

ಮುಳ್ಳೇರಿಯ : ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ವನಿತಾ ಸೀನಿಯರ್‌ ತ್ರೋಬಾಲ್‌ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್‌ ಆದ ಭಾರತ ತಂಡದ ಸದಸ್ಯೆ ತಂಡದ ಸದಸ್ಯೆ ಕಾಸರಗೋಡು ಜಿಲ್ಲೆಯ ಅಗಲ್ಪಾಡಿ ಶಾಲೆಯ ವಿದ್ಯಾರ್ಥಿನಿ ದೀಪಿಕಾಳಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಭವ್ಯ ವರ್ಣರಂಜಿತ ಸ್ವಾಗತವನ್ನು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲಾ ವತಿಯಿಂದ ನೀಡಲಾಯಿತು. ಅಗಲ್ಪಾಡಿ ಶಾಲಾ ಅಧ್ಯಾಪಿಕೆಯರು ತಿಲಕ ನೀಡಿ, ಹಾರ ಹಾಕಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. 

Advertisement

ಈ ಸಂದರ್ಭದಲ್ಲಿ ಶಾಲಾ ದೆ„ಹಿಕ ಶಿಕ್ಷಕ ಹಾಗೂ ತ್ರೋಬಾಲ್‌ ಕೋಚ್‌ ಶಶಿಕಾಂತ್‌ ಬಲ್ಲಾಳ್‌, ಕೇರಳ ರಾಜ್ಯ ತ್ರೋಬಾಲ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ.ಎಂ ಬಲ್ಲಾಳ್‌, ದೆ„ಹಿಕ ಶಿಕ್ಷಕ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ ಮತ್ತು ತ್ರೋಬಾಲ್‌ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಕೆ.ಸೂರ್ಯನಾರಾಯಣ ಭಟ್‌, ಜಿಲ್ಲಾ ಪಂಚಾಯತು ಸದಸ್ಯ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎಡ್ವ. ಕೆ ಶ್ರೀಕಾಂತ್‌, ಕುಂಬಾxಜೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಆನಂದ ಮವ್ವಾರು,  ಕುಂಬಾxಜೆ ಗ್ರಾಮ ಪಂಚಾಯತು ಸದಸ್ಯರಾದ ರವೀಂದ್ರ ರೈ ಗೋಸಾಡ, ಶಶಿಧರ ತೆಕ್ಕೆಮೂಲೆ, ಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಹರೀಶ್‌ ನಾರಂಪಾಡಿ, ಮುಕ್ಕೂರು ಫ್ರೆಂಡ್ಸ್‌ ಕ್ಲಬ್‌ನ ಪದಾಧಿಕಾರಿಗಳು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲಾ ಮೇನೇಜರ್‌, ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರು, ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

    ನಂತರ ಚಾಂಪಿಯನ್‌ ಭಾರತ ತಂಡದ ಸದಸ್ಯೆ ದೀಪಿಕಾ ಮತ್ತು ತರಬೇತುದಾರ ಶಶಿಕಾಂತ್‌ ಬಲ್ಲಾಳ್‌ ಅವರನ್ನು ನಾಸಿಕ್‌ ಬೆಂಡ್‌ನೊಂದಿಗೆ ತೆರೆದ ವಾಹನದಲ್ಲಿ ಕಾಸರಗೋಡು ಪೇಟೆಯಿಂದ ವರ್ಣರಂಜಿತ ಮೆರವಣಿಗೆಯೊಂದಿಗೆ ಬೋವಿಕ್ಕಾನ-ಮುಳ್ಳೇರಿಯ-ಮವ್ವಾರು-ನಾರಂಪಾಡಿ ದಾರಿಯಾಗಿ ಆಗಲ್ಪಾಡಿ ಶಾಲೆಗೆ ಬರಮಾಡಿಕೊಂಡರು. 

ಬೋವಿಕ್ಕಾನ ಪೇಟೆಯಲ್ಲಿ ಸ್ವಾಗತ
ಮುಳ್ಳೇರಿಯ : ಹಿಂದೂ ಐಕ್ಯ ವೇದಿಕೆ, ಸಂಘಪರಿವಾರ ಹಾಗೂ ಸಾರ್ವಜನಿಕರಿಂದ ಬೋವಿಕ್ಕಾನ ಪೇಟೆಯಲ್ಲಿ ಸ್ವಾಗತಿಸಿದರು. ಹಿಂದೂ ಐಕ್ಯವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಎಂ.ಎಸ್‌ ಪಂಚಾಯತು ಸಮಿತಿಯ ಅಧ್ಯಕ್ಷ ಉದಯ, ಹಾಗೂ ನಾಗರಿಕರು ಶಾಲು, ಹಾರ, ಹೂಗುತ್ಛ ನೀಡಿ ಸ್ವಾಗತಿಸಿ ಅಭಿನಂದನೆಯನ್ನು ಸಲ್ಲಿಸಿದರು. 

ಮುಳ್ಳೇರಿಯ : ಕಾರಡ್ಕ ಗ್ರಾಮ ಪಂಚಾಯತು ವತಿಯಿಂದ ಮುಳ್ಳೇರಿಯ ಪೇಟೆಯಲ್ಲಿ ಸ್ವಾಗತವನ್ನು ನೀಡಲಾಯಿತು. ಕಾರಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಗೋಪಾಲಕೃಷ್ಣ, ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಣುಕಾದೇವಿ,ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜನನಿ, ಗ್ರಾಮ ಪಂಚಾಯತು ಸದಸ್ಯರುಗಳಾದ ಬಾಲಕೃಷ್ಣ, ಪಂಚಾಯತು ಕಾರ್ಯದರ್ಶಿ ಮತ್ತು ಸಿಬ್ಬಂದಿವರ್ಗದವರು ಶಾಲು ಹಾಕಿ, ಸ್ಮರಣಿಕೆ ನೀಡಿ ಸ್ವಾಗತಿಸಿ ದೀಪಿಕಾಳನ್ನು ಅಭಿನಂದಿಸಿದರು. 

Advertisement

ನಾರಂಪಾಡಿ ಫಾತಿಮಾ ಎ.ಎಲ್‌.ಪಿ ಶಾಲಾ ವತಿಯಿಂದ ಶಾಲಾ ಮುಖ್ಯೋಪಾಧ್ಯಯರು ಸಿಸ್ಟರ್‌ ಹೆಲನ್‌ ಮತ್ತು ಅಧ್ಯಾಪಿಕೆಯರು ಹೂಗುತ್ಛವನ್ನು ನೀಡಿ ಸ್ವಾಗತಿಸಿ ಅಭಿನಂದಿಸಿದರು. 

ಬಿಜೆಪಿ ಕುಂಬಾxಜೆ ಪಂಚಾಯತು ಸಮಿತಿಯ ವತಿಯಿಂದ ಮಾರ್ಪನಡ್ಕದಲ್ಲಿ ಸ್ವಾಗತಕೋರಿ ಅಭಿನಂದಿಸಲಾಯಿತು. ಬಿಜೆಪಿ ಕುಂಬಾxಜೆ ಪಂಚಾಯತು ಸಮಿತಿಯ ಅಧ್ಯಕ್ಷರಾದ ಬಿ ರಾಜೇಶ್‌ ಶೆಟ್ಟಿ ಶಾಲು ಹೊದಿಸಿ ಹೂಗುತ್ಛನೀಡಿ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಉಪಾಧ್ಯಕ್ಷ ರಾಜೇಶ್‌ ಪೊಡಿಪ್ಪಳ, ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ನೇತಾರರಾದ ಶೆ„ಲಜಾ ಭಟ್‌, ಶಾಂತಾ ಎಸ್‌ ಭಟ್‌, ಸದಾಶಿವ ರೈ ಗೋಸಾಡ, ಕೀರ್ತನ್‌ಗೊàವಿಂದ ಮೊದಲಾದವರು ಉಪಸ್ಥಿತರಿದ್ದರು. 

ಕುಂಬಾxಜೆ ಗ್ರಾಮ ಪಂಚಾಯತು ವತಿಯಿಂದ ಸ್ವಾಗತಿಸಿ ಅಭಿನಂದಿಸಿದರು. ಕೆ.ವಿ.ವಿ.ಇ.ಎಸ್‌ ನಾರಂಪಾಡಿ ಯೂನಿಟ್‌ ಮಾರ್ಪನಡ್ಕ ಇದರ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಅಭಿನಂದಿಸಿದರು. ನಂತರ ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೆ„ಯರ್‌ ಸೆಕೆಂಡರಿ ಶಾಲೆಯ ವಠಾರದಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next