ನವದೆಹಲಿ:ಲಾಕ್ ಡೌನ್ ನಂತರ ಹಳದಿ ಲೋಹದ ಬೆಲೆ ಗಗನಕ್ಕೇರಿತ್ತು. ಆದರೆ ಇದೀಗ ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಇದೊಂದು ಖುಷಿಯ ಸಂಗತಿ. ಗುರುವಾರ(ನವೆಂಬರ್ 26, 2020) ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಆದರೆ ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈಗ ಸುಮಾರು 8 ಸಾವಿರ ರೂಪಾಯಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
2020ರ ಆಗಸ್ಟ್ 7ರಂದು ಚಿನ್ನದ ಬೆಲೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದಾಖಲೆ ಎಂಬಂತೆ ಹತ್ತು ಗ್ರಾಂಗೆ 57,008 ರೂಪಾಯಿಗೆ ಏರಿಕೆಯಾಗಿತ್ತು. ಬೆಳ್ಳಿಯ ಬೆಲೆಯೂ ದುಬಾರಿಯಾಗಿತ್ತು. ಒಂದು ಕೆಜಿ ಬೆಳ್ಳಿಗೆ 77,840 ರೂಪಾಯಿಗೆ ಏರಿಕೆಯಾಗಿತ್ತು.
ಆ ಬಳಿಕ ಸ್ವಲ್ಪ ಇಳಿಕೆಯಾಗುತ್ತ ಬಂದಿದ್ದು, ಗುರುವಾರ ಚಿನ್ನದ ಬೆಲೆಯಲ್ಲಿ 17 ರೂಪಾಯಿ ಏರಿಕೆಯಾಗಿತ್ತು. ದೆಹಲಿಯಲ್ಲಿ ಹತ್ತು ಗ್ರಾಂಗೆ 48,257 ರೂಪಾಯಿ. ಬುಧವಾರ(ನವೆಂಬರ್ 25, 2020) ಹತ್ತು ಗ್ರಾಂ ಚಿನ್ನದ ಬೆಲೆ 48,240 ರೂಪಾಯಿ ಆಗಿತ್ತು.
ಇದನ್ನೂ ಓದಿ:ಒಸ್ಮಾನಿಯಾ ವಿವಿ ಅತಿಕ್ರಮ ಪ್ರವೇಶ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸ್
ಬೆಳ್ಳಿಯ ಬೆಲೆಯಲ್ಲಿ 28 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ಗುರುವಾರ(ನವೆಂಬರ್ 26, 2020) 59,513 ರೂಪಾಯಿ, ಬುಧವಾರ(ನವೆಂಬರ್ 25, 2020) ಒಂದು ಕೆಜಿ ಬೆಳ್ಳಿ ಬೆಲೆ 59,485 ರೂಪಾಯಿ.