Advertisement

ಮಹಾ: ಬಹುಮತ ಸಾಬೀತಿಗೆ ಮುನ್ನವೇ ತಿಕ್ಕಾಟ ಆರಂಭ

08:59 AM Dec 01, 2019 | mahesh |

ಮುಂಬಯಿ: ಮಹಾರಾಷ್ಟ್ರದಲ್ಲಿ ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರಕಾರ ಶನಿವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಬೇಕಾಗಿದ್ದು, ಇದಕ್ಕೂ ಮುನ್ನವೇ ಅಧಿಕಾರ ಹಂಚಿಕೆಯ ತಿಕ್ಕಾಟ ಆರಂಭವಾಗಿದೆ.

Advertisement

ಈವರೆಗೆ ಸ್ಪೀಕರ್‌ ಹುದ್ದೆಗೆ ಒಪ್ಪಿಕೊಂಡಿದ್ದ ಕಾಂಗ್ರೆಸ್‌, ಈಗ ಏಕಾಏಕಿ ಉಪಮುಖ್ಯಮಂತ್ರಿ ಹುದ್ದೆ ಬೇಕೆಂದು ಬೇಡಿಕೆ ಇಟ್ಟಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, “ಮೂರೂ ಪಕ್ಷಗಳು ಮಾಡಿಕೊಂಡ ಒಪ್ಪಂದದ ಪ್ರಕಾರ, ಉಪಮುಖ್ಯಮಂತ್ರಿ ಹುದ್ದೆ ಎನ್‌ಸಿಪಿಗೆ ಸಲ್ಲಬೇಕು. ಕಾಂಗ್ರೆಸ್‌ ಈ ಮೊದಲು ಒಪ್ಪಿಕೊಂಡಂತೆ ಸ್ಪೀಕರ್‌ ಹುದ್ದೆ ಪಡೆದುಕೊಳ್ಳಲಿ’ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ 2 ಗಂಟೆಗೆ ಠಾಕ್ರೆ ಸರಕಾರ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ಸ್ಪೀಕರ್‌ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆಯೇ, ಶುಕ್ರವಾರ ಎನ್‌ಸಿಪಿ ಹಿರಿಯ ನಾಯಕ ದಿಲೀಪ್‌ ವಲ್ಸೆ ಪಾಟೀಲ್‌ರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಕ ಮಾಡಲಾಗಿದೆ. ಮಹಾ ವಿಕಾಸ್‌ ಅಘಾಡಿಯು ತಮಗೆ 288 ಸದಸ್ಯ ಬಲದ ವಿಧಾನಸಭೆಯಲ್ಲಿ 170 ಸದಸ್ಯರ ಬೆಂಬಲವಿದೆ ಎಂದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next