Advertisement

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ನಿಧನ

09:44 AM Nov 26, 2021 | Team Udayavani |

ಬೆಂಗಳೂರು: ಹಿರಿಯ ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ವಿಧಿವಶರಾಗಿದ್ದಾರೆ. ರಾಮಾಯಣಾಚಾರ್ಯ ಎಂದೇ ಪ್ರಸಿದ್ದರಾಗಿದ್ದ . ಕೆ.ಎಸ್.ನಾರಾಯಣಾಚಾರ್ಯ ಅವರು ವಿದ್ವಾಂಸರು, ಧರ್ಮಶಾಸ್ತ್ರ ಪ್ರಚಾರದ ಮೂಲಕ ಖ್ಯಾತಿ ಗಳಿಸಿದ್ದರು. ಅವರಿಗೆ 88 ವರ್ಷ ಪ್ರಾಯವಾಗಿತ್ತು.

Advertisement

ಇವರು 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದ್ದರು. ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರಾಗಿದ್ದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ವೇದ ಸಂಸ್ಕೃತಿಯ ಪರಿಚಯ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ ಸೇರಿ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಕನ್ನಡ, ಇಂಗ್ಲಿಷ್, ತಮಿಳಿನಲ್ಲೂ ರಾಮಾಯಾಣದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು.

‘ವಿದ್ವನ್ಮಣಿ’, ‘ವೇದಭೂಷಣ’, ‘ವಾಲ್ಮೀಕಿ ಹೃದಯಜ್ಞ’, ‘ರಾಮಾಯಣಾಚಾರ್ಯ’, ‘ಮಹಾಭಾರತಾಚಾರ್ಯ’ ಮೊದಲಾದ ಬಿರುದುಗಳು ಕೆ. ಎಸ್. ನಾರಾಯಣಾಚಾರ್ಯರಿಗೆ ದೊರೆತಿದೆ. ರಾಜ್ಯ ಸರಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅವರು ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಇಬ್ಬರು ಭ್ರಷ್ಟರ ಬಂಧನ: ಎಸಿಬಿ ವಶದಲ್ಲಿ ಎಸ್‌.ಎಂ.ಬಿರಾದಾರ್‌, ರುದ್ರೇಶಪ್ಪ 

ಸಿಎಂ ಸಂತಾಪ: ಪ್ರೊ. ಕೆ. ಎಸ್. ನಾರಾಯಣಾಚಾರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌ ಎಂದು ಅವರು ಹೇಳಿದ್ದಾರೆ.

Advertisement

Koo App

ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ ಮೂಲಕ ಸದಾಕಾಲ ಅವರ ನೆನಪು ಸದಾಕಾಲ ಉಳಿಯಲಿ ಮತ್ತು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿಯೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ‌. ಓಂ ಶಾಂತಿಃ

Basavaraj Bommai (@bsbommai) 26 Nov 2021

Advertisement

Udayavani is now on Telegram. Click here to join our channel and stay updated with the latest news.

Next