Advertisement

ಬಾದಾಮಿಯಲ್ಲಿ ಉತ್ತಮ ಪ್ರತಿಕ್ರಿಯೆ

05:37 PM Apr 25, 2021 | Team Udayavani |

ಬಾದಾಮಿ: ಕೋವಿಡ್‌ ಅಲೆ ತಡೆಗಟ್ಟುವ ಸಲುವಾಗಿ ಪಟ್ಟಣದಲ್ಲಿ ವೀಕೆಂಡ್‌ಲಾಕ್‌ಡೌನ್‌ ಶನಿವಾರ ಯಶಸ್ವಿಯಾಯಿತು. ಬೆಳಗ್ಗೆ 6 ರಿಂದ 10 ಗಂಟೆಯವರೆಗೆಮಾತ್ರ ಕಿರಾಣಿ, ಹಾಲು, ಕಾಯಿಪಲ್ಲೆ ಸೇರಿದಂತೆ ಅಗತ್ಯ ಸೇವೆಗಳು ತೆರೆದಿದ್ದವು.

Advertisement

ಉಳಿದ ಎಲ್ಲ ಸೇವೆಗಳು ಬಂದ್‌ ಆಗಿದ್ದವು. ಪ್ರಯಾಣಿಕರು ಕಡಿಮೆ ಇದ್ದ ಕಾರಣಬಾಗಲಕೋಟೆ, ಕೆರೂರ, ಗುಳೇದಗುಡ್ಡ, ಇಳಕಲ್ಲ, ಗದಗ, ರೋಣ ನಗರಗಳಿಗೆಒಂದೊಂದು ಬಸ್‌ ಸಂಚಾರ ಕಲ್ಪಿಸಲಾಗಿತ್ತು. ಮುಷ್ಟಿಗೇರಿಗೆ ಸಂಚರಿಸಬೇಕಾದವಯೋವೃದ್ದೆ ಬಸ್‌, ಅಟೋ ಇಲ್ಲದೇ ಪರದಾಡಿದರು.

ಪ್ರಮುಖ ರಸ್ತೆ,ಬಸ್‌ ನಿಲ್ದಾಣ, ಜನನಿಬೀಡ ಸ್ಥಳಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.ಎಲ್ಲ ಅಂಗಡಿಗಳು ಬಂದ್‌ ಆದ ಕಾರಣ ಕೆಲ ಸಣ್ಣ ಪುಟ್ಟ ವ್ಯಾಪಾರಿಗಳಿಗೆ,ವ್ಯಾಪಾರಸ್ಥರು ತೊಂದರೆ ಅನುಭವಿಸಬೇಕಾಯಿತು. ತಹಶೀಲ್ದಾರ್‌ ಸುಹಾಸಇಂಗಳೆ, ಪಿ.ಎಸ್‌.ಐ.ಪ್ರಕಾಶ ಬಣಕಾರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿಗಿರೀಶ, ಮುಖ್ಯ ರಸ್ತೆಯಲ್ಲಿ ನಿಂತು ಅನಗತ್ಯವಾಗಿ ಓಡಾಡುವವರಿಗೆ, ಮಾಸ್ಕ್ಧರಿಸದೇ ಇರುವವರಿಗೆ ಬಿಸಿ ಮುಟ್ಟಿಸಿದರು. ಪ್ರಮುಖ ರಸ್ತೆಗಳಲ್ಲಿ ಪೊಲೀಸರುಬ್ಯಾರಿಕೇಡ್‌ ಹಾಕಿದರು. ವೀಕೆಂಡ್‌ ಲಾಕ್‌ ಡೌನ್‌ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next