Advertisement

ಇಂಡಿಯಲ್ಲಿ ಜನರಿಂದ ಉತ್ತಮ ಸ್ಪಂದನೆ

10:56 PM Jan 10, 2022 | Girisha |

ಇಂಡಿ: ಕೊರೊನಾ ನಿಯಂತ್ರಣಕ್ಕೆ ಸರಕಾರ ಘೋಷಿಸಿರುವ ವಾರಾಂತ್ಯದ ಕರ್ಫ್ಯೂಗೆ ಎರಡನೇ ದಿನವಾದ ರವಿವಾರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಸ್ಪಂದಿಸಿದ್ದಾರೆ. ಎರಡು ದಿನಗಳಲ್ಲಿ ಬಸ್‌ ಸಂಚಾರ ಕಡಿಮೆಯಾಗಿ 20 ಲಕ್ಷ ರೂ. ಹಾನಿಯಾಗಿದೆ.

Advertisement

ಬಸ್‌ ಸಂಚಾರ ವಿರಳವಾಗಿತ್ತು. ಬಸ್‌ ನಿಲ್ದಾಣದಲ್ಲಿ ಜನರೂ ಅಷ್ಟಾಗಿ ಬರಲಿಲ್ಲ. ಪ್ರಯಾಣಿಕರ ಸಂಖ್ಯೆ ನೋಡಿ ಬಸ್‌ ಗಳ ಕಾರ್ಯಾಚರಣೆ ನಡೆಸಲಾಯಿತು. 97 ಬಸ್‌ ಗಳಲ್ಲಿ 26 ಬಸ್‌ಗಳ ಕಾರ್ಯಾಚರಣೆ ನಡೆಸಿದ್ದು ಜನರಿಲ್ಲದೇ ಇರುವ ಕಾರಣ ಹಾನಿಯಾಗಿದೆ. ಆಟೋ ಚಾಲಕರ ಗೋಳು: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಕಷ್ಟಗೊಳಗಾದ ಆಟೋ ಚಾಲಕರು ಪ್ರಯಾಣಿಕರಿಲ್ಲದೆ ಪರದಾಡಿದರು. ಪ್ರತಿ ದಿನ 800ರಿಂದ ಸಾವಿರ ರೂ. ಗಳಿಸುವ ಚಾಲಕರು ನೂರು ರೂ.ಗೂ ಪರದಾಡಬೇಕಾಯಿತು.

ಹೂವಿನ ಅಂಗಡಿ: ಹೂವಿನ ಅಂಗಡಿಯವರು ವಿಜಯಪುರ ಮತ್ತಿತರ ಕಡೆಯಿಂದ ಬಸ್‌ ನಿಲ್ದಾಣ ಹತ್ತಿರ ಇರುವವರು 5000 ರೂ. ಹೂವು ತರಿಸಿದ್ದರು. ಯಾವದೇ ವ್ಯಾಪಾರವಿಲ್ಲದೆ ತುಂಬ ನಷ್ಟ ಅನುಭವಿಸಬೇಕಾಯಿತು. ಎರಡು ದಿನದಲ್ಲಿ ಹೂಗಳು ಬಾಡುವ ನಿಮಿತ್ತ ಮಾರಲು ಬರದ ಪರಿಸ್ಥಿತಿ ಇತ್ತು. ಒಮಿಕ್ರಾನ್‌, ಕೊರೊನಾ ಸೋಂಕಿನ ಆತಂಕದ ಹಿನ್ನೆಯಲ್ಲಿ ಸಾರ್ವಜನಿಕದಲ್ಲಿ ಜಾಗೃತಿ ಮೂಡಿಸಿದರು. ಪುರಸಭೆಯಿಂದ ಮೈಕ್‌ ಮೂಲಕ ಜಾಗೃತಿ ಮೂಡಿಸಲಾಯಿತು.

ಕರ್ಫ್ಯೂ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದಿದ್ದವರಿಗೆ ಪೊಲೀಸರು ದಂಡ ವಿಧಿ ಸಿದರು. ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದರು. ಜತೆಗೆ ಅನವಶ್ಯಕವಾಗಿ ಹೊರಗಡೆ ಬಂದವರಿಗೆ ಕ್ಲಾಸ್‌ ತೆಗೆದುಕೊಂಡ ಖಾಕಿ ಪಡೆ ರೋಗ ಅಂಟಿಸಿಕೊಂಡು ಮನೆ ಮಂದಿಗೆ ತೊಂದರೆ ಕೊಡುತ್ತೀರಿ ಎಂದು ಬುದ್ಧಿವಾದ ಹೇಳುತ್ತಿರುವುದು ಕಂಡು ಬಂತು. ತಾಲೂಕಿನ ಮೂರು ಚೆಕ್‌ ಪೋಸ್ಟ್‌ಗಳಲ್ಲಿ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಗೃಹ ರಕ್ಷಕ ದಳದವರಿಂದ ತಪಾಸಣೆ ಚುರುಕುಗೊಳಿಸಲಾಗಿತ್ತು. ಪಟ್ಟಣದಲ್ಲಿ ಬಹುತೇಕ ಮುಚ್ಚಿದ ಮಳಿಗೆಗಳು ಮತ್ತು ಅಗತ್ಯ ಸೇವೆಗಳಿಗೆ ಅಡ್ಡಿ ಇರಲಿಲ್ಲ. ಸಾರ್ವಜನಿಕರು ವೀಕೆಂಡ್‌ ಕರ್ಫ್ಯೂಗೆ ಸ್ಪಂದಿಸಿ ಹೊರ ಬರಲಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next