ಮುಂಬಯಿ, ಆ. 1: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮೀರಾ ರೋಡ್ ಸ್ಥಳೀಯ ಸಮಿತಿಯ ವತಿಯಿಂದ ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗುರು ಪೂರ್ಣಿಮೆಯು ಜು. 24ರಂದು ಸಂಜೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮೀರಾ ರೋಡ್ ಪೂರ್ವದ ಶಾಂತಿ ನಗರ ಸೆಕ್ಟರ್ 5, ಸಿ.57 ಕವಿತಾ ಕಟ್ಟಡದಲ್ಲಿರುವ ಅಸೋಸಿಯೇಶನ್‌ನ ಕಚೇರಿಯಲ್ಲಿ ಜರಗಿತು.
ಆರ್ಚಕ ಶ್ಯಾಮ ಅಮೀನ್ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ವಿಶೇಷ ಪೂಜೆಗೈದು ಮಂಗಳಾರತಿ ಬೆಳಗಿದರು. ಸರ್ವರನ್ನು ಸ್ವಾಗತಿಸಿದ ಮೀರಾ ರೋಡ್ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್ ಮಾತನಾಡಿ, ಅಜ್ಞಾನದಿಂದ ನಮಗೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾರೆ. ಸನಾತನ ಧರ್ಮದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನವಿದೆ.
ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸುವ ದೇವಾನು-ದೇವತೆಗಳಿಗೂ ಗುರುವಿನ ಅಗತ್ಯವಿದೆ. ಗುರು ಪೂರ್ಣಿಮೆಯ ದಿನ ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಾದರ್ಶಗಳನ್ನು ಪಾಲಿಸಿ ಬದುಕನ್ನು ಸಾರ್ಥಕಗೊಳಿಸೋಣ ಎಂದು ತಿಳಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸೇವಾರ್ಥಿಗಳಾದ ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷ ಭೋಜ ಬಿ. ಸಾಲ್ಯಾನ್ ಅವರ ಸೇವಾರ್ಥಕವಾಗಿ ಪ್ರಸಾದ, ಬಾಲಾಜಿ ಕ್ಯಾಟರಸ್ ನ ಮಾಲಕ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಲೀಲಾಧರ್ ಅವರ ಸೇವಾರ್ಥಕವಾಗಿ ಅನ್ನಪ್ರಸಾದ, ಉಪ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಎಂ. ಕರ್ಕೇರ ಅವರ ಮಾತೃಶ್ರೀ ಅಪ್ಪಿ ಕರ್ಕೇರ ಅವರ ಸ್ಮರಣಾರ್ಥ ಹೂವಿನ ಅಲಂಕಾರ ಸೇವೆ ಜರಗಿತು. ಕರಾವಳಿ ಸೌಂಡ್‌ನ ದಿನೇಶ್ ಸುವರ್ಣ ಅವರ ಸೇವಾರ್ಥಕವಾಗಿ ಪ್ರಸಾದ ಮತ್ತು
ಮಲ್ಲಿಗೆ, ನಿಶಾ ಕೋಟ್ಯಾನ್ ಅವರ ಮಾತೃಶ್ರೀ ಪ್ರಮೀಳಾ ಯು. ಕೋಟ್ಯಾನ್ ಸ್ಮರಣಾರ್ಥ ಪಾಯಸ ಸೇವೆ, ಶೇಖರ ಜಿ. ಪೂಜಾರಿ ಅವರ ಸೇವಾರ್ಥಕವಾಗಿ ಹಣ್ಣು ಹಂಪಲು, ಪ್ರವೀಣ್ ಕೋಟ್ಯಾನ್ ಅವರ ಸೇವಾರ್ಥಕವಾಗಿ ತೆಂಗಿನಕಾಯಿ ಸೇವೆ ಜರಗಿತು.
ವಿವಿಧ ಸೇವಾರ್ಥಿಗಳನ್ನು ಗುರುಪ್ರಸಾದ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಸಾಮೂಹಿಕ ಭಜನೆ ನೆರವೇರಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್, ಕೋಶಾಧಿಕಾರಿ ಎಚ್. ಎಂ. ಪೂಜಾರಿ, ಸದಸ್ಯರಾದ ಸುಂದರಿ ಆರ್. ಕೋಟ್ಯಾನ್, ರಾಧಾ ಎಸ್. ಕೋಟ್ಯಾನ್, ಭಾರತಿ ಎ. ಅಂಚನ್, ಸಂಜೀವಿ ಎಸ್. ಪೂಜಾರಿ, ಜಿ. ಕೆ. ಕೆಂಚನಕೆರೆ, ಶೋಭಾ ಎಚ್. ಪೂಜಾರಿ, ಶಾಂಭವಿ ಜಿ. ಸಾಲ್ಯಾನ್, ಸುಲೋಚನಾ ಮಾಬೀಯನ್, ಇಂದಿರಾ ಸುವರ್ಣ, ಜಿಒಸಿ ಗಣೇಶ್ ಪೂಜಾರಿ, ಶಂಕರ ಎಲ್ ಪೂಜಾರಿ, ಗಣೇಶ್ ಬಂಗೇರ ಮೊದಲಾದವರು ಸಹಕರಿಸಿದರು.