Advertisement

ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ

11:23 AM Jan 17, 2022 | Team Udayavani |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ದೀರ್ಘಾಯುಷ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಹಾ ಮೃತ್ಯುಂಜಯ ಹೋಮ ನೂರಾರು ಋತ್ವಿಜಯರ ಸಮ್ಮುಖದಲ್ಲಿ ಆರಂಭಗೊಂಡಿದೆ.

Advertisement

ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪ್ರಧಾನ ಪೌರೋಹಿತ್ಯದಲ್ಲಿ ಶ್ರಿಂಗೇರಿ, ಬೆಂಗಳೂರು, ಕಾಸರಗೋಡು, ಮೈಸೂರು  ಸಹಿತ ನಾನಾ ಕಡೆಗಳ 108 ಮಂದಿ ಪುರೋಹಿತರಿಂದ ಮಹಾ ಮೃತ್ಯುಂಜಯ ಹೋಮ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಮೂಡಿಬಂದಿದೆ.

ಬೆಳಗ್ಗೆ 7 ಗಂಟೆಯಿಂದ ಚತುರ್ವೇದ ಪಾರಾಯಣ ಪ್ರಾರಂಭಿಸಿ, ಗೋಪೂಜೆ, ಮಹಾಗಣಪತಿ ಹೋಮ ಬಳಿಕ 11 ಗಂಟೆ ಸುಮಾರಿಗೆ ಮಹಾಮೃತ್ಯುಂಜಯ ಹೋಮ ಸಂಪನ್ನಗೊಳ್ಳಲಿದೆ.

ಸಚಿವರುಗಳ ಭೇಟಿ

Advertisement

ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಈಗಾಗಲೇ ಆಗಮಿಸಿದ್ದು, ಶಾಸಕ ಹರೀಶ್ ಪೂಂಜ ಹಾಗೂ‌ ಪತ್ನಿ ಸ್ವೀಕೃತಿ ಪೂಂಜ ಹೋಮದಲ್ಲಿ ಭಾಗಿಯಾದರು.

ಪ್ರಮುಖರಾದ ಡಿ.ಹರ್ಷೇಂದ್ರ ಕುಮಾರ್, ಸಿರಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜನಾರ್ದನ್, ಉದ್ಯಮಿಗಳಾದ ರಾಜೇಶ್ ಪೈ, ಮೋಹನ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.

ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವಿಭಜಿತ ಜಿಲ್ಲೆಯ ಎಲ್ಲ ಶಾಸಕರುಗಳು, ವಿವಿಧ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು, ಪ್ರಮುಖರು  ಭಾಗವಹಿಸಲಿದ್ದಾರೆ.

ಸಧ್ಯೋಜಾತ ಕುಂಡ, ವಾಮದೇವ ಕುಂಡ, ಅಘೋರ ಕುಂಡ, ತತ್ಪರುಷ ಕುಂಡ, ಈತಾನ ಕುಂಡ, ತ್ರಯಂಬಕ ಕುಂಡ, ಮೃತ್ಯುಂಜಯ ಕುಂಡ ಸೇರಿ 7 ಕುಂಡಗಳೊಳಗೊಂಡ ಮಹಾ ಮೃತ್ಯುಂಜಯ ಹೋಮ ವೈದಿಕ ವಿಧಿಗಳಿಂದ ಆರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next