Advertisement
ಆರ್. ವಿನಯ್‌ಕುಮಾರ್ ನಾಯಕತ್ವದ ಕರ್ನಾಟಕ 2017-18ನೇ ರಣಜಿ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿದೆ. ಮೈಸೂರಿನಲ್ಲಿ ಅಸ್ಸಾಂಗೆ ಇನ್ನಿಂಗ್ಸ್ ಹಾಗೂ 121 ರನ್ ಸೋಲುಣಿಸಿದ ಬಳಿಕ ಶಿವಮೊಗ್ಗದಲ್ಲಿ ಹೈದರಾಬಾದನ್ನು 59 ರನ್ನುಗಳಿಂದ ಉರುಳಿಸಿತು. 13 ಅಂಕಳೊಂದಿಗೆ “ಎ’ ವಿಭಾಗದ ಅಗ್ರಸ್ಥಾನಿಯಾಗಿ ವಿರಾಜಮಾನವಾಗಿದೆ.
ಕರ್ನಾಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಆರ್. ಸಮರ್ಥ್, ಕರುಣ್ ನಾಯರ್ ಅವರ ಬ್ಯಾಟಿಂಗ್ ಕರ್ನಾಟಕ ಪಾಲಿಗೆ ನಿರ್ಣಾಯಕ. ಆದರೆ ಈ ಬಾರಿ ಕೆ.ಎಲ್. ರಾಹುಲ್ ಸೇವೆಯಿಂದ ತಂಡ ವಂಚಿತವಾಗಲಿದೆ. ಅವರು ಮರಳಿ ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ರಾಹುಲ್ ಜಾಗವನ್ನು ಕೌನೈನ್ ಅಬ್ಟಾಸ್ ಅಥವಾ ಅಭಿಷೇಕ್ ರೆಡ್ಡಿ ತುಂಬುವ ಸಾಧ್ಯತೆ ಇದೆ.
Related Articles
Advertisement
ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್-ಕೆ. ಗೌತಮ್ ಜೋಡಿಯ ಸ್ಪಿನ್ ದಾಳಿ ಘಾತಕವಾಗಿ ಪರಿಣಮಿಸಿದರೆ ಕರ್ನಾಟಕ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ. ವೇಗದ ವಿಭಾಗದಲ್ಲಿ ವಿನಯ್, ಮಿಥುನ್, ಅರವಿಂದ್ ಮೇಲೆ ನಂಬಿಕೆ ಇಡಬಹುದಾಗಿದೆ.
ತವರಿನ ಅಂಗಳದ ಲಾಭಮಹಾರಾಷ್ಟ್ರಕ್ಕೆ ಇದು ತವರಿನ ಅಂಗಳವೆಂಬುದೊಂದು ಪ್ಲಸ್ ಪಾಯಿಂಟ್. ನಾಯಕ ಅಂಕಿತ್ ಭವೆ° ಯುಪಿ ವಿರುದ್ಧ ಕ್ರಮವಾಗಿ 119 ಹಾಗೂ 58 ರನ್ ಬಾರಿಸಿ ಕಪ್ತಾನನ ಆಟವಾಡಿದ್ದಾರೆ. ಆರಂಭಕಾರ ಋತುರಾಜ್ ಗಾಯಕ್ವಾಡ್, ಮಧ್ಯಮ ಸರದಿಯ ರಾಹುಲ್ ತ್ರಿಪಾಠಿ, ಕೀಪರ್ ರೋಹಿತ್ ಮೋಟ್ವಾನಿ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಫ್ಸ್ಪಿನ್ನರ್ ಚಿರಾಗ್ ಖುರಾನ ಯುಪಿ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್ ಹಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವುದು ವಿನಯ್ ಪಡೆಯ ಪಾಲಿಗೊಂದು ಎಚ್ಚರಿಕೆ.