Advertisement
ಈ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು 5 ಚಿನ್ನ, 2 ಬೆಳ್ಳಿ ಸಹಿತ ಹಲವು ಕಂಚಿನ ಪದಕಗಳನ್ನು ಗೆದ್ದುಕೊಟ್ಟಿರುವ ವೇಟ್ ಲಿಫ್ಟಿಂಗ್ ತಂಡ ಪದಕ ಪಟ್ಟಿಯಲ್ಲಿ ಭಾರತ ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ನೋಡಿಕೊಂಡಿದೆ. ಲಿಫ್ಟಿಂಗ್ ತಂಡದ ಈ ಅಪ್ರತಿಮ ಸಾಧನೆಗೆ ಕಾರಣವೇನೆಂಬುದು ಬಹಿರಂಗಗೊಂಡಿದೆ. ಲಿಫ್ಟರ್‌ಗಳ ಈ ಸಾಧನೆಗೆ “ಕಳೆದ ನಾಲ್ಕು ವರ್ಷಗಳ ತಯಾರಿಯೇ ಕಾರಣವಾಗಿದೆ. ವೇಟ್ ಲಿಫ್ಟಿಂಗ್ ಅಭ್ಯಾಸದ ವೇಳೆ ನಾವು ಮಾಡಿಕೊಂಡ ನಿಗದಿತ ರಚನಾತ್ಮಕ ಬದಲಾವಣೆಗಳು ಹೆಚ್ಚು ಪದಕ ಗೆಲ್ಲಲು ಕಾರಣ. ಎಲ್ಲದಕ್ಕಿಂತ ಮುಖ್ಯವಾಗಿ ನಾವು ನಮ್ಮ ಆಹಾರಾಭ್ಯಾಸ ಮತ್ತು ಪೂರಕ ಪೌಷ್ಟಿಕಾಂಶಗಳ ಸೇವನೆ ಬದಲಿಸಿದ್ದೆವು’ ಎಂದು ಭಾರತದ ರಾಷ್ಟ್ರೀಯ ತರಬೇತುದಾರ ವಿಜಯ್ ಶರ್ಮ ಲಿಫ್ಟಿಂಗ್ ತಂಡದ ಸಾಧನೆಯನ್ನು ವಿಶ್ಲೇಷಿಸಿದರು.
Related Articles
Advertisement
ಲಿಫ್ಟಿಂಗ್ ತಂಡ ಡೋಪ್ ಕಂಟಕಕ್ಕೆ ಗುರಿಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮ, “ಉದ್ದೀಪನ ಮದ್ದು ಸೇವನೆಯನ್ನು ತೊಡೆದು ಹಾಕಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ರಾಷ್ಟ್ರೀಯ ಉದ್ದೀಪನ ವಿರೋಧಿ ಸಂಸ್ಥೆಯ ಸಹಾಯದೊಂದಿಗೆ ನಾವು 2014ರಿಂದಲೂ ಪ್ರತೀವರ್ಷ ಸುಮಾರು 500 ಡೋಪ್ ಟೆಸ್ಟ್‌ಗಳನ್ನು ನಡೆಸುವಂತೆ ನೋಡಿಕೊಂಡೆವು. ನೀವು ಬೇಕಾದರೆ ಅದರ ದಾಖಲೆಗಳನ್ನು ಪರಿಶೀಲಿಸಬಹುದು. ನಾವು ಉದ್ದೀಪನ ಪರೀಕ್ಷೆಯ ಬಗ್ಗೆ ನಮ್ಮ ಕ್ರೀಡಾಪಟುಗಳಲ್ಲಿ ಅಷ್ಟರ ಮಟ್ಟಿಗೆ ಭಯವನ್ನು ತುಂಬಿದ್ದೇವೆ’ ಎನ್ನುತ್ತ ತಿಳಿಯಾಗಿ ನಕ್ಕರು.