ಬನ್ನೂರು: ಎಲ್ಲಾ ರೀತಿಯ ಸಾಹಿತ್ಯ ಪ್ರಕಾರಗಳಲ್ಲೂ ವಿಶಿಷ್ಟವಾದ ಸಾಹಿತ್ಯ ಕೃಷಿ ಮಾಡಿ, ಎಲ್ಲರೂ ಮೆಚ್ಚುವ ಕೆಲಸ ಮಾಡಿದವರು ಕುವೆಂಪು ಆಗಿದ್ದು ಅವರ ವ್ಯಕ್ತಿತ್ವ, ಸರಳತೆ, ಸೃಜನಶೀಲತೆ ಎಲ್ಲರಿಗೂ ಅನುಕರಣೀಯ ಎಂದು ನಾಟಕಕಾರ ಬಿಳಿಗೆರೆ ಪೊ›.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪದವಿಪೂರ್ವ ಕಾಲೇಜು ಹಾಗೂ ಕುವೆಂಪು ಜನ್ಮದಿನ ಆಚರಣಾ ಸಮಿತಿ ವತಿಯಿಂದ ನಡೆದ ಕುವೆಂಪು ಜನ್ಮದಿನದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುವೆಂಪುರವರು ರಾಮಾಯಣ ದರ್ಶನಂ ಬರೆಯುವ ಮೂಲಕ ಸುಲಭವಾಗಿ ಎಲ್ಲರಿಗೂ ರಾಮಾಯಣ ಅರ್ಥವಾಗುವಂತೆ ಮಾಡಿದರು. ಅದರಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ತಮ್ಮದೇ ಆದ ಶೈಲಿಯಲ್ಲಿ ಜೀವಂತಿಕೆ ನೀಡಿದ್ದರೆಂದರು.
ಯಾಚೇನಹಳ್ಳಿ ರಾಮಕೃಷ್ಣ ಆಶ್ರಮ ಶಾಖಾ ಮಠದ ನಾದನಂದ ಸ್ವಾಮೀಜಿ ಮಾತನಾಡಿ, ಕುವೆಂಪುರವರ ಬಗ್ಗೆ ಕೇವಲ ಪದಗಳಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಇಡೀ ವಿಶ್ವಕ್ಕೆ ಮಾನವತ್ವದ ಸಂದೇಶ ನೀಡಿದ ಕೀರ್ತಿ ಅವರಿಗೆ ಸಲ್ಲಬೇಕು. ಇವರು ಹುಟ್ಟಿದ ಪರಿಸರವೇ ಇವರನ್ನು ಸಾಹಿತ್ಯ ಕ್ಷೇತ್ರಕ್ಕೆ ಎಳೆಯಿತೆಂದರೆ ತಪ್ಪಾಗಲಾರದು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಹೊನ್ನಯ್ಯ, ಕೆ.ವೈ.ನಾರಾಯಣಸ್ವಾಮಿ, ಡಾ. ಕೆ. ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಪೊ›.ಚಂದ್ರಶೇಖರ ಸಂಗ್ಲಿ ವಿಷಯ ಮಂಡನೆ ಮಾಡಿದರು. ಜಿಪಂ ಸದಸ್ಯ ಸುಧೀರ್, ಎಪಿಎಂಸಿ ಸದಸ್ಯ ಕೃಷ್ಣಮೂರ್ತಿ, ಕುವೆಂಪು ಜನ್ಮದಿನ ಆಚರಣಾ ಸಮಿತಿ ಸದಸ್ಯರಾದ ಬಿ.ಕೆ. ನಿರಂಜನ್ ಕುಮಾರ್, ಪೊ›.ಗೋವಿಂದಯ್ಯ,
ಅರವಿಂದ್, ಗೂಳೀಗೌಡ, ಮೇಗಳಕೊಪ್ಪಲು ಜಯರಾಮೇಗೌಡ, ನಾರಾಯಣಸ್ವಾಮಿ, ಚಿಕ್ಕೀರೇಗೌಡ, ಸುಬ್ರಹ್ಮಣ್ಯ, ಅತ್ತಜಳ್ಳಿ ಕೆಂಪೇಗೌಡ, ಕರವೇ ಜಯರಾಂ, ಬೀಡನಹಳ್ಳಿ ದೇವರಾಜು, ಗಿರೀಶ್, ಶಿವು, ಸೋಮನಾಥಪುರದ ನಾಗರಾಜು, ಮೋಹನ್ ಕುಮಾರ್, ರಾಮಸ್ವಾಮಿ, ಮಹದೇವಸ್ವಾಮಿ(ದೇವಣ್ಣ), ಅತ್ತಹಳ್ಳಿ ರಾಜು ಮತ್ತಿತರರಿದ್ದರು.