Advertisement

ಮಹಾ ಬಿಜೆಪಿ ಪಟ್ಟಿ ಪ್ರಕಟ, ಏಕನಾಥ ಖಾಡ್ಸೆ , ತಾಬ್ಡೆ ಹೆಸರು ನಾಪತ್ತೆ!

09:19 AM Oct 03, 2019 | sudhir |

ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ 125 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರ ಜತೆಗೆ ಶಿವಸೇನೆ ಕೂಡ ತಾನು ಕಣಕ್ಕಿಳಿಯಲಿರುವ 124 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಘೋಷಿ ಸಿಲ್ಲ. ಬಿಜೆಪಿ-ಶಿವಸೇನೆ ಮೈತ್ರಿ ಕೂಟವು ಸ್ಥಳೀಯ ಕೆಲವು ಪಕ್ಷಗಳ ಜತೆಗೆ ಸ್ಥಾನ ಹೊಂದಾಣಿಕೆ ಯನ್ನೂ ಮಾಡಿಕೊಳ್ಳಲಿವೆ.

Advertisement

ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ನಾಗ್ಪುರ ವಾಯವ್ಯ ಕ್ಷೇತ್ರದಿಂದ ಐದನೇ ಬಾರಿಗೆ ಕಣ ಕ್ಕಿಳಿಯಲಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದು, ಪುಣೆಯ ಕೊತ್ರುಡ್‌ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ಕ್ಷೇತ್ರದ ಹಾಲಿ ಶಾಸಕಿ ಮೇಧಾ ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಲಾಗಿಲ್ಲ. ಮಹಾರಾಷ್ಟ್ರ ರಾಜಕೀಯದ ಹಾಲಿ ಪ್ರಮುಖರಾಗಿರುವ ವಿನೋದ್‌ ತಾಬ್ಡೆ ಮತ್ತು ಏಕನಾಥ ಖಾಡ್ಸೆ ಮೊದಲ ಪಟ್ಟಿಯಲ್ಲಿ ಇಲ್ಲ. ಏಳು ಹಾಲಿ ಶಾಸಕರು ಸೇರಿದಂತೆ 12 ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

ಚುನಾವಣೆ ಘೋಷಣೆಯಾಗುವುದಕ್ಕಿಂತ ಮೊದಲು ಕಾಂಗ್ರೆಸ್‌ ಮತ್ತು ಎನ್‌ಸಿಪಿಯಿಂದ ಬಿಜೆಪಿಗೆ ಸೇರ್ಪಡೆಯಾದ ಹರ್ಷವರ್ಧನ ಪಾಟೀಲ್‌, ರಾಧಾಕೃಷ್ಣ ವಿಖೆ ಪಾಟೀಲ್‌, ವೈಭವ್‌ ಪಿಚಡ್‌, ಜಯ ಕುಮಾರ್‌ ಗೋರೆ, ಮದನ್‌ ಭೋಸಲೆ, ರಾಣಾ ಜಗಜಿತ್‌ ಸಿಂಗ್‌ ಪಾಟೀಲ್‌, ಕಾಳಿದಾಸ್‌ ಕೊಳಂಬಕರ್‌, ಸಂದೀಪ್‌ ನಾಯ್ಕಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.

ಫ‌ಡ್ನವೀಸ್‌ಗೆ ಹಿನ್ನಡೆ
ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಆಗಿದೆ. 2014ರ ಅಸೆಂಬ್ಲಿ ಚುನಾವಣೆ ವೇಳೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಮ್ಮ ವಿರುದ್ಧದ 2 ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ಮುಚ್ಚಿಟ್ಟಿದ್ದ ಆರೋಪಕ್ಕೆ ಸಂಬಂಧಿಸಿ, ವಿಚಾರಣೆ ಎದುರಿಸುವಂತೆ ಫ‌ಡ್ನವೀಸ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹೊಸದಾಗಿ ಈ ಕುರಿತು ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ. ಅಲ್ಲದೆ, ಫ‌ಡ್ನವೀಸ್‌ಗೆ ಕ್ಲೀನ್‌ಚಿಟ್‌ ನೀಡಿ ಮುಂಬೈ ಹೈಕೋರ್ಟ್‌ ನೀಡಿದ್ದ ಆದೇಶವನ್ನೂ ಸುಪ್ರೀಂ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next