Advertisement
ತೊಡಿಕಾನ ರಸ್ತೆಗೆ ಸುಮಾರು ಐದು ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಇದೀಗ ಅರಂತೋಡು ತೊಡಿಕಾನ ರಸ್ತೆಯಲ್ಲಿ ಟಿಪ್ಪರ್‌ಗಳು ಕೊಡಗು ಜಿಲ್ಲೆಯ ಕ್ರಷರ್‌ನಿಂದ ನಿತ್ಯ ಹಲವು ಬಾರಿ ನಿಯಮ ಮೀರಿ ಟನ್‌ಗಟ್ಟಲೇ ಜಲ್ಲಿ ಹೇರಿಕೊಂಡು ಸಾಗುತ್ತಿರುವುದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣ ಆಗಿವೆ.
ಅರಂತೋಡು – ತೊಡಿಕಾನ ಜಿ.ಪಂ. ರಸ್ತೆ 3 ಕಿ. ಮೀ. ಸಂಪೂರ್ಣ ಹದಗೆಟ್ಟಿದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ರಸ್ತೆ ದುಃಸ್ಥಿತಿಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಅರಂತೋಡು-ತೊಡಿಕಾನ ರಸ್ತೆ ಪಟ್ಟಿ – ಕರಿಕೆ – ಭಾಗಮಂಡಲದ ಮೂಲಕ ತಲಕಾವೇರಿ ಸಂಪರ್ಕಿಸುತ್ತದೆ. ತೊಡಿಕಾನ ಗ್ರಾಮದಲ್ಲಿ ದ.ಕ. ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಇದ್ದು, ಜಿಲ್ಲೆಯ ಗಡಿ ತನಕ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡಿದೆ. ಕ್ರಮ ಕೈಗೊಳ್ಳಲಾಗುವುದು
ಟಿಪ್ಪರ್‌ನಲ್ಲಿ ನಿಯಮ ಮೀರಿ ಹೆಚ್ಚು ಟನ್ ಜಲ್ಲಿ ಸಾಗಾಟ ಮಾಡುತ್ತಿರುವು ದರಿಂದ ಅರಂತೋಡು – ತೊಡಿ ಕಾನ ರಸ್ತೆ ಹದಗೆಟ್ಟಿದೆ ಎಂದು ದೂರು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸ. ಕಾರ್ಯಪಾಲಕ ಅಭಿಯಂತ ಹನುಮಂತರಾಯಪ್ಪ ತಿಳಿಸಿದ್ದಾರೆ.