Advertisement

3 ವರ್ಷಕ್ಕೆ ಗ್ರಾಚ್ಯುಟಿ ಅವಧಿ?

07:00 AM Apr 06, 2018 | Team Udayavani |

ನವದೆಹಲಿ: ಗ್ರಾಚ್ಯುಟಿ ಅವಧಿಯನ್ನು ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಸಂಬಂಧ 1972ರ ಗ್ರಾಚ್ಯುಟಿ ಪಾವತಿ ಕಾನೂನಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲಿದೆ. ಪ್ರಸ್ತುತ ಗ್ಯಾಚ್ಯುಟಿ ಮೊತ್ತವನ್ನು ಪಡೆಯಲು ಐದು ವರ್ಷಗಳವರೆಗೆ ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕು. ಆಗ ಗ್ರಾಚ್ಯುಟಿಗೆ ಅರ್ಹರಾಗುತ್ತಾರೆ. ಆದರೆ ಈ ಅವಧಿಯನ್ನು ಮೂರು ವರ್ಷಗಳಿಗೆ ಇಳಿಕೆ ಮಾಡುವುದರಿಂದ ಹಲವರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ. ಆದರೆ ಕಾರ್ಮಿಕ ಸಚಿವಾಲಯ ಈ ಪ್ರಸ್ತಾವನೆಗೆ ಸಮ್ಮತಿ ನೀಡಬಹುದಾಗಿ ದ್ದರೂ, ಕಾರ್ಮಿಕ ಸಂಘಟನೆಗಳು ಇದನ್ನು ಇನ್ನೂ ಇಳಿಸಬೇಕೆಂದು ಆಗ್ರಹಿಸುವ ಸಾಧ್ಯತೆಗಳಿವೆ. ಈಗಾಗಲೇ ಕಾರ್ಮಿಕ ಸಚಿವಾಲಯವು ಸಂಬಂಧಿಸಿದ ಎಲ್ಲ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next